ಅಹಮದಾಬಾದ್, (ಪಿಟಿಐ): ಇಂಗ್ಲೆಂಡ್ ತಂಡ ಗುರುವಾರ ಇಲ್ಲಿ ಆರಂಭವಾಗುವ ಅಭ್ಯಾಸ ಪಂದ್ಯದಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ. ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಅಂತಿಮ ಸಿದ್ಧತೆ ನಡೆಸಲು ಇಂಗ್ಲೆಂಡ್ಗೆ ಲಭಿಸುವ ಕೊನೆಯ ಅವಕಾಶ ಇದು.

ಪ್ರವಾಸಿ ತಂಡ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನಾಡಿದೆ. ಭಾರತ `ಎ~ ಮತ್ತು ಮುಂಬೈ `ಎ~ ವಿರುದ್ಧದ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದವು. ಇದೀಗ ಹರಿಯಾಣ ಎದುರಿನ ನಾಲ್ಕು ದಿನಗಳ ಪಂದ್ಯದಲ್ಲಿ ಗೆಲುವು ಪಡೆಯುವ ಕನಸಿನಲ್ಲಿದೆ.

ಮೊದಲ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ಗೆ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸಲು ಹೆಚ್ಚಿನ ಅವಕಾಶ ಲಭಿಸಿರಲಿಲ್ಲ. ಏಕೆಂದರೆ ಭಾರತ `ಎ~ ಮತ್ತು ಮುಂಬೈ `ಎ~ ತಂಡದಲ್ಲಿ ಪ್ರಮುಖ ಸ್ಪಿನ್ನರ್ಗಳು ಇರಲಿಲ್ಲ. ಆದ್ದರಿಂದ ಹರಿಯಾಣ ವಿರುದ್ಧದ ಪಂದ್ಯವನ್ನು ಇಂಗ್ಲೆಂಡ್ ಗಂಭೀರವಾಗಿ ಪರಿಗಣಿಸಿದೆ.

ಪ್ರಮುಖ ಬ್ಯಾಟ್ಸ್ಮನ್ಗಳಾದ ಇಯಾನ್ ಬೆಲ್, ಜೊನಾಥನ್ ಟ್ರಾಟ್, ಕೆವಿನ್ ಪೀಟರ್ಸನ್ ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆಯುವ ಲೆಕ್ಕಾಚಾರದೊಂದಿಗೆ ಈ ಪಂದ್ಯದಲ್ಲಿ ಆಡಲಿದ್ದಾರೆ.

ಪ್ರಸಕ್ತ ಋತುವಿನ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಹರಿಯಾಣ ಬಲಿಷ್ಠ ಎದುರಾಳಿಗಳಿಗೆ ಯಾವ ರೀತಿಯಲ್ಲಿ ಪೈಪೋಟಿ ನೀಡುತ್ತದೆ ಎಂಬುದನ್ನು ನೋಡಬೇಕು.

ತಂಡಗಳು: ಇಂಗ್ಲೆಂಡ್: ಅಲಸ್ಟೈರ್ ಕುಕ್, ಜೇಮ್ಸ ಆ್ಯಂಡರ್ಸನ್, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ನಿಕ್ ಕಾಂಪ್ಟನ್, ಸ್ಟೀವನ್ ಫಿನ್, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಮ್ಯಾಟ್ ಪ್ರಯರ್, ಗ್ರೇಮ್ ಸ್ವಾನ್, ಜೊನಾಥನ್ ಟ್ರಾಟ್, ಸ್ಟುವರ್ಟ್ ಬ್ರಾಡ್, ಜೋ ರೂಟ್, ಜಿಮ್ಮಿ ಬೈಸ್ಟೋವ್, ಗ್ರಹಾಮ್ ಆನಿಯನ್ಸ್, ಎಯೊನ್ ಮಾರ್ಗನ್, ಮಾಂಟಿ ಪನೇಸರ್

ಹರಿಯಾಣ: ನಿತಿನ್ ಸೈನಿ, ರಾಹುಲ್ ದೇವಾನ್, ಸನ್ನಿ ಸಿಂಗ್, ಅಭಿಮನ್ಯು ಖೋಡ್, ಪ್ರಿಯಾಂಕ್ ತೆಹ್ಲಾನ್, ಸಿ. ಸೈನಿ, ಅಮಿತ್ ಮಿಶ್ರಾ, ಜೆ. ಯಾದವ್, ಕೆ.ಆರ್. ಹೂಡಾ, ಅಮಿತ್ ವಶಿಷ್ಠ, ಮೋಹಿತ್ ಶರ್ಮ, ಯಜ್ವೇಂದ್ರ ಚಾಹಲ್, ಕುಲದೀಪ್ ಹೂಡಾ, ಚಂದರ್ಪಾಲ್ ಸೈನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.