ಶನಿವಾರ, ಫೆಬ್ರವರಿ 27, 2021
25 °C

ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಶ್ರೀಲಂಕಾ

ಕೊಲಂಬೊ (ಪಿಟಿಐ): ಆತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಪಾಕಿಸ್ತಾನ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತು.ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯವಾದ ಪಂದ್ಯದಲ್ಲಿ ಶ್ರೀಲಂಕಾ ಪ್ರಥಮ ಇನಿಂಗ್ಸ್‌ನಲ್ಲಿ 160 ರನ್‌ಗಳಿಂದ ಹಿನ್ನಡೆ ಅನುಭವಿಸಿತು. ಎದುರಾಳಿ ಪಾಕಿಸ್ತಾನವು 18 ಓವರುಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.ಆದರೆ ಬಾಕಿ ಉಳಿದಿದ್ದ ಕೊನೆಯ ದಿನದಾಟದಲ್ಲಿ ಶ್ರೀಲಂಕಾವನ್ನು ಆಲ್‌ಔಟ್ ಮಾಡುವುದಂತೂ ಸಾಧ್ಯವಿರಲಿಲ್ಲ. 261 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಸಿಂಹಳೀಯರು ಕೂಡ ಜಯದ ಕನಸು ಕಾಣಲು ಅವಕಾಶ ಇರಲಿಲ್ಲ. ಶಾಸ್ತ್ರಕ್ಕೆ ಎನ್ನುವಂತೆ 22 ಓವರುಗಳವರೆಗೆ ಆಡಿದ ಮಾಹೇಲ ಜಯವರ್ಧನೆ ನಾಯಕತ್ವದ ತಂಡವು 86 ರನ್ ಗಳಿಸಿತು. ಅಲ್ಲಿಗೆ ಪಂದ್ಯಕ್ಕೂ ತೆರೆ.ಮೊದಲ ಪಂದ್ಯವನ್ನು ಗೆದ್ದಿರುವ ಶ್ರೀಲಂಕಾ ಈ ಸರಣಿಯಲ್ಲಿ 1-0ಯಿಂದ ಮುಂದಿದೆ. ಆದರೆ ಪಾಕಿಸ್ತಾನವು ಕೊನೆಯೊಂದು ಪಂದ್ಯದಲ್ಲಿ ಜಯ ಪಡೆದು ಸರಣಿಯನ್ನು ಸಮಮಾಡಿಕೊಳ್ಳುವ ಕಡೆಗೆ ಈಗ ಗಮನ ಕೇಂದ್ರೀಕರಿಸಿದೆ.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಪ್ರಥಮ ಇನಿಂಗ್ಸ್147 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 551 ಡಿಕ್ಲೇರ್ಡ್‌ ಹಾಗೂ ಎರಡನೇ ಇನಿಂಗ್ಸ್ 18 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 100 (ಮೊಹಮ್ಮದ್ ಹಫೀಜ್ 21, ತೌಫಿಕ್ ಉಮರ್ ಔಟಾಗದೆ 42, ಅಬ್ರಾರ್ ರೆಹ್ಮಾನ್ 36; ಸೂರಜ್ ರಂದೀವ್ 28ಕ್ಕೆ2); ಶ್ರೀಲಂಕಾ: ಮೊದಲ ಇನಿಂಗ್ಸ್ 124.4 ಓವರುಗಳಲ್ಲಿ 391 ಹಾಗೂ ಎರಡನೇ ಇನಿಂಗ್ಸ್: 22 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 86 (ತರಂಗ ಪರಣವಿತನ 32, ತಿಲಕರತ್ನೆ ದಿಲ್ಶಾನ್ 28, ಕುಮಾರ ಸಂಗಕ್ಕಾರ ಔಟಾಗದೆ 24). ಫಲಿತಾಂಶ: ಡ್ರಾ; ಪಂದ್ಯ ಶ್ರೇಷ್ಠ: ಜುನೈದ್ ಖಾನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.