ಬುಧವಾರ, ಮಾರ್ಚ್ 3, 2021
24 °C

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಜಯ

ಲಂಡನ್ (ಎಎಫ್‌ಪಿ): ಡೇಲ್ ಸ್ಟೈನ್ (56ಕ್ಕೆ5) ಅವರ ಸಮರ್ಥ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 12 ರನ್ ಹಾಗೂ ಇನಿಂಗ್ಸ್ ಗೆಲುವು ಸಾಧಿಸಿತು.ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 637 ರನ್‌ಗಳು ಆತಿಥೇಯರಿಗೆ ಭಾರಿ ಸವಾಲು ಎನಿಸಿತ್ತು. ನಾಲ್ಕನೆ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ ಇಂಗ್ಲೆಂಡ್ 38 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತ್ತು. ಕೊನೆಯ ದಿನವಾದ ಸೋಮವಾರ 138 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿತು. ಇದರಿಂದ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0ರಲ್ಲಿ ಮುನ್ನಡೆ ಸಾಧಿಸಿತು.ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ ಮೊದಲ ಇನಿಂಗ್ಸ್ 125.5 ಓವರ್‌ಗಳಲ್ಲಿ 385 ಮತ್ತು ಎರಡನೆ ಇನಿಂಗ್ಸ್ 97 ಓವರ್‌ಗಳಲ್ಲಿ 240. (ಇಯಾನ್ ಬೆಲ್ 55, ರವಿ ಬೋಪಾರ 22, ಮ್ಯಾಟ್ ಪ್ರಿಯೊರ್ 40, ಟಿಮ್ ಬ್ರೆಸ್ನಿನ್ ಔಟಾಗದೆ 20; ಮಾರ್ನ್ ಮಾರ್ಕೆಲ್ 41ಕ್ಕೆ1, ಡೇಲ್ ಸ್ಟೈನ್ 56ಕ್ಕೆ5, ಇಮ್ರಾನ್ ತಾಹಿರ್ 63ಕ್ಕೆ3). ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 189 ಓವರ್‌ಗಳಲ್ಲಿ 2 ವಿಕೆಟ್‌ಗೆ 637.ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 12 ರನ್ ಹಾಗೂ ಇನಿಂಗ್ಸ್ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಹಾಶಿಮ್ ಅಮ್ಲಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.