ಮೆಲ್ಬರ್ನ್ (ಪಿಟಿಐ/ಐಎಎನ್ಎಸ್): `ಆಸ್ಟ್ರೇಲಿಯಾ ಗೆಲ್ಲಬೇಕು~ ಎಂಬ ಭಾರತದ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಮಹಿ ಪಡೆ ವಿರುದ್ಧ 320 ರನ್ ಗಳಿಸಿಯೂ ಸೋಲು ಕಂಡಿದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಎದುರು ಕೇವಲ 238 ಗಳಿಸಿ ಯಶಸ್ಸು ಕಂಡಿತು. ಲಂಕಾದ ಈ ಗೆಲುವಿನೊಂದಿಗೆ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ಕಾಂಗರೂ ಪಡೆಯ ಡೇನಿಯಲ್ ಕ್ರಿಸ್ಟಿಯನ್ ಹ್ಯಾಟ್ರಿಕ್ ವಿಕೆಟ್ ಪಡೆದು ಶ್ರೀಲಂಕಾದ ಫೈನಲ್ ಹಾದಿಗೆ ಅಡ್ಡಿಯಾಗಲು ಪ್ರಯತ್ನಿಸಿದರು. ಆದರೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಕೈಕೊಟ್ಟರು.

ಶುಕ್ರವಾರ ಸಿಂಹಳೀಯ ಪಡೆಯ 238 ರನ್ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ 49.1 ಓವರ್ಗಳಲ್ಲಿ 229 ರನ್ಗಳಿಗೆ ಆಲೌಟಾಯಿತು. ಆದರೆ ಈ ಸೋಲು ಆಸ್ಟ್ರೇಲಿಯಾ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಈ ತಂಡ ಈ ಮೊದಲೇ ಫೈನಲ್ ತಲುಪಿತ್ತು.

ಈ ಮೂಲಕ ಭಾನುವಾರ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಮೊದಲ ಫೈನಲ್ನಲ್ಲಿ ಇವೇ ತಂಡಗಳು ಮುಖಾಮುಖಿಯಾಗಲಿವೆ. ಈ ಸರಣಿಯಲ್ಲಿ ಲಂಕಾ ಮೂರು ಬಾರಿ ಕಾಂಗರೂ ಪಡೆಯನ್ನು ಮಣಿಸಿದೆ. ಹಾಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಮುಂದಾದ ಲಂಕಾ 17 ರನ್ಗಳಾಗುಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಕುಮಾರ ಸಂಗಕ್ಕಾರ ಹಾಗೂ ದಿನೇಶ್ ಚಂಡಿಮಾಲ್ (75; 84 ಎ, 3 ಬೌಂ, 3 ಸಿ.) ಜೊತೆಯಾಟ ಪ್ರವಾಸಿ ತಂಡಕ್ಕೆ ಆಸರೆಯಾಯಿತು. ಬಳಿಕ ಲಹಿರು ತಿರಿಮಾನೆ ಕೂಡ ಅರ್ಧ ಶತಕದ ಮೂಲಕ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವೇಗಿ ಜೇಮ್ಸ ಪ್ಯಾಟಿನ್ಸನ್ ಪೆಟ್ಟು ನೀಡಿದರು.

ಕ್ರಿಸ್ಟಿಯನ್ ಹ್ಯಾಟ್ರಿಕ್: ವೇಗದ ಬೌಲರ್ ಕ್ರಿಸ್ಟಿಯನ್ ಅದ್ಭುತ ಸಾಧನೆಯೊಂದಕ್ಕೆ ಕಾರಣರಾದರು. ಪಂದ್ಯದ 44ನೇ ಓವರ್ನಲ್ಲಿ ಈ ಸಾಧನೆ ಮೂಡಿಬಂತು. 43.3 ಎಸೆತದಲ್ಲಿ ಪೆರೇರಾ, 43.4 ಎಸೆತದಲ್ಲಿ ಸೇನನಾಯಕೆ, 43.5 ಎಸೆತದಲ್ಲಿ ಕುಲಶೇಖರ ವಿಕೆಟ್ ಕಬಳಿಸಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎನಿಸಿದರು.

ಆದರೆ ಸುಲಭ ಗುರಿಯ ಬೆನ್ನಟ್ಟಲು ಮುಂದಾದ ಆತಿಥೇಯ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಮ್ಯಾಥ್ಯೂ ವೇಡ್, ಡೇನಿಯಲ್ ವಾರ್ನರ್ ಹಾಗೂ ಪೀಟರ್ ಫಾರೆಸ್ಟ್ ಕೈಕೊಟ್ಟರು. ಈ ಪರಿಣಾಮ ಕಾಂಗರೂ ಪಡೆ 26 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತು.

ಈ ಹಂತದಲ್ಲಿ ನಾಯಕ ಶೇನ್ ವಾಟ್ಸನ್ ಹಾಗೂ ಮೈಕ್ ಹಸ್ಸಿ ಕೊಂಚ ಪ್ರತಿರೋಧ ತೋರಿದರು. ಬಳಿಕ ಬಂದ ಡೇವಿಡ್ ಹಸ್ಸಿ ಬಿರುಸಿನ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಆಗ ಭಾರತ ತಂಡದ ಅಭಿಮಾನಿಗಳ ಮುಖ ಕೂಡ ಅರಳಿತ್ತು.

ಆದರೆ ಗೆಲ್ಲಲು 10 ರನ್ ಬೇಕಿದ್ದಾಗ ಕುಲಶೇಖರ ಬೌಲಿಂಗ್ನಲ್ಲಿ ಚೆಂಡನ್ನು ಬಲವಾಗಿ ಬಾರಿಸಲು ಹೋದ ಡೇವಿಡ್ (74; 74 ಎಸೆತ, 4 ಬೌಂ, 1 ಸಿ.) ಎಡವಟ್ಟು ಮಾಡಿಕೊಂಡರು. ಆಗ ಲಂಕಾದ ಸಂಭ್ರಮಕ್ಕೆ ಅಂತ್ಯವೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.