ಮಂಗಳವಾರ, ಮೇ 18, 2021
24 °C

ಕ್ರಿಕೆಟ್: ಭಾರತದ ಸಾಧಾರಣ ಮೊತ್ತ ಜಡೇಜ, ದೋನಿ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ ಇಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ 235 ರನ್‌ಗಳ ಗುರಿ ನೀಡಿದೆ.ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್ ಪೇರಿಸಿತು.ರವೀಂದ್ರ ಜಡೇಜ (78 ರನ್, 89 ಎಸೆತ, 10 ಬೌಂ) ಮತ್ತು ನಾಯಕ ಮಹೇಂದ್ರ ಸಿಂಗ್ ದೋನಿ (69, 103 ಎಸೆತ, 5 ಬೌಂ) ಅರ್ಧಶತಕ ಗಳಿಸುವ ಮೂಲಕ ಭಾರತದ ನೆರವಿಗೆ ನಿಂತರು.ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಸ್ಟರ್ ಕುಕ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಜೇಮ್ಸ ಆಯಂಡರ್‌ಸನ್ (48ಕ್ಕೆ 3) ಅವರ ಮಾರಕ ದಾಳಿಗೆ ಸಿಲುಕಿದ ಭಾರತ ಆರಂಭಿಕ ಕುಸಿತ ಅನುಭವಿಸಿತು. 25 ರನ್ ಗಳಿಸುವಷ್ಟರಲ್ಲೇ ನಾಲ್ಕು ವಿಕೆಟ್‌ಗಳು ಬಿದ್ದವು.ಸುರೇಶ್ ರೈನಾ ರೂಪದಲ್ಲಿ ಐದನೇ ವಿಕೆಟ್ ಬಿದ್ದಾಗ ತಂಡದ ಮೊತ್ತ 58. ಈ ಹಂತದಲ್ಲಿ ಜೊತೆಯಾದ ದೋನಿ ಮತ್ತು ಜಡೇಜ ಇನಿಂಗ್ಸ್‌ಗೆ ಜೀವ ತುಂಬಿದರು. ಇವರು ಆರನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ಭಾರತದ ಮೊತ್ತ 200ರ ಗಡಿ ದಾಟಿತು.ಕೊನೆಯಲ್ಲಿ ಬಿರುಸಿನ ಆಟವಾಡಿದ ಆರ್. ಅಶ್ವಿನ್ (ಅಜೇಯ 36; 19 ಎಸೆತ, 5 ಬೌಂ) ತಂಡದ ಮೊತ್ತವನ್ನು ಹಿಗ್ಗಿಸಿದರು. ಜಡೇಜ ಮತ್ತು ಅಶ್ವಿನ್ ಏಳನೇ ವಿಕೆಟ್‌ಗೆ 31 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ನೀಡಿದರು. ಸುದೀರ್ಘ ಅವಧಿಯ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಜಡೇಜ ತಮ್ಮ ಸಾಮರ್ಥ್ಯವನ್ನು ತೋರಿಸಿದರು.ಆ್ಯಂಡರ್‌ಸನ್ ಅವರಿಗೆ ಉತ್ತಮ ಸಾಥ್ ನೀಡಿದ ಟಿಮ್ ಬ್ರೆಸ್ನನ್ ಮತ್ತು ಗ್ರೇಮ್ ಸ್ವಾನ್ ಬಿಗುವಾದ ಬೌಲಿಂಗ್ ನಡೆಸಿದರು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ರಲ್ಲಿ ಮುನ್ನಡೆಯಲ್ಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.ಸ್ಕೋರ್ ವಿವರ

ಭಾರತ
: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234

ಪಾರ್ಥಿವ್ ಪಟೇಲ್ ಬಿ ಜೇಮ್ಸ ಆ್ಯಂಡರ್‌ಸನ್  03

ಆಜಿಂಕ್ಯ ರಹಾನೆ ಸಿ ಟ್ರಾಟ್ ಬಿ ಜೇಮ್ಸ ಆ್ಯಂಡರ್‌ಸನ್  00

ರಾಹುಲ್ ದ್ರಾವಿಡ್ ರನೌಟ್  02ವಿರಾಟ್ ಕೊಹ್ಲಿ ಸಿ ಕೀಸ್‌ವೆಟರ್ ಬಿ ಜೇಮ್ಸ ಆ್ಯಂಡರ್‌ಸನ್  07

ಸುರೇಶ್ ರೈನಾ ಸಿ ಕೀಸ್‌ವೆಟರ್ ಬಿ ಸ್ಟುವರ್ಟ್ ಬ್ರಾಡ್  21

ಮಹೇಂದ್ರ ಸಿಂಗ್ ದೋನಿ ಸಿ ಕುಕ್ ಬಿ ಟಿಮ್ ಬ್ರೆಸ್ನನ್  69

ರವೀಂದ್ರ ಜಡೇಜ ಸಿ ಬೆಲ್ ಬಿ ಜೇಡ್ ಡೆರ್ನ್‌ಬಾಕ್  78

ಆರ್. ಅಶ್ವಿನ್ ಔಟಾಗದೆ  36ಪ್ರವೀಣ್ ಕುಮಾರ್ ಔಟಾಗದೆ  01ಇತರೆ: (ಲೆಗ್‌ಬೈ-7, ವೈಡ್-10)  17ವಿಕೆಟ್ ಪತನ: 1-1 (ರಹಾನೆ; 0.4), 2-9 (ದ್ರಾವಿಡ್; 5.2), 3-13 (ಪಾರ್ಥಿವ್; 6.4), 4-25 (ಕೊಹ್ಲಿ; 10.2), 5-58 (ರೈನಾ; 18.6), 6-170 (ದೋನಿ; 44.1), 7-229 (ಜಡೇಜ; 49.2)

ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 9-1-48-3, ಟಿಮ್ ಬ್ರೆಸ್ನನ್ 10-2-32-1, ಜೇಡ್ ಡೆರ್ನ್‌ಬಾಕ್ 10-1-53-1, ಸ್ಟುವರ್ಟ್ ಬ್ರಾಡ್ 9-1-47-1, ಗ್ರೇಮ್ ಸ್ವಾನ್ 10-0-31-0, ರವಿ ಬೋಪಾರ 2-0-16-0

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.