ಮಂಗಳವಾರ, ಜನವರಿ 28, 2020
23 °C

ಕ್ರಿಕೆಟ್: ಮುನ್ನಡೆಯತ್ತ ಇಂಗ್ಲೆಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಧಾಬಿ: ಅಲಿಸ್ಟರ್ ಕುಕ್ (94) ಅವರ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಮುನ್ನಡೆಯತ್ತ ದಾಪುಗಾಲು ಇಟ್ಟಿದ್ದಾರೆ.ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡದವರು ತಮ್ಮ ಮೊದಲ      ಇನಿಂಗ್ಸ್‌ನಲ್ಲಿ 84.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದಾರೆ.

ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರ ವಿಕೆಟ್ ಬೇಗನೇ ಪತನವಾಯಿತು. ಆದರೆ ಎರಡನೇ ವಿಕೆಟ್‌ಗೆ ಜೊತೆಗೂಡಿದ ಕುಕ್ ಹಾಗೂ ಜೊನಾಥನ್ ಟ್ರಾಟ್ (74) ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ. ಇವರಿಬ್ಬರು 139 ರನ್ ಸೇರಿಸಿದರು.ಆದರೆ ಮೊದಲ ಟೆಸ್ಟ್‌ನ ಹೀರೊ ಸಯೀದ್ ಅಜ್ಮಲ್ ಇಲ್ಲೂ ತಮ್ಮ ಜಾದೂ ಮುಂದುವರಿಸಿದರು. ಪರಿಣಾಮ ಇಂಗ್ಲೆಂಡ್ 41 ರನ್‌ಗಳ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆಫ್ ಸ್ಪಿನ್ನರ್ ಅಜ್ಮಲ್ ಮೂರು ವಿಕೆಟ್ ಕಬಳಿಸಿದರು.ಇದಕ್ಕೂ ಮೊದಲು ಪಾಕ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 96.4 ಓವರ್‌ಗಳಲ್ಲಿ 257 ರನ್‌ಗಳಿಗೆ ಆಲೌಟಾಯಿತು. ತನ್ನ ಮೊದಲ ದಿನದ ಮೊತ್ತಕ್ಕೆ ಗುರುವಾರ ಕೇವಲ ಒಂದು ರನ್ ಸೇರಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ ಮೊದಲ ಇನಿಂಗ್ಸ್: 96.4 ಓವರ್‌ಗಳಲ್ಲಿ 257 (ಮಿಸ್ಬಾ ಉಲ್ ಹಕ್ 84; ಜೇಮ್ಸ ಆ್ಯಂಡರ್ಸನ್ 46ಕ್ಕೆ2, ಸ್ಟುವರ್ಟ್ ಬ್ರಾಡ್ 47ಕ್ಕೆ4, ಗ್ರೇಮ್ ಸ್ವಾನ್ 52ಕ್ಕೆ3); ಇಂಗ್ಲೆಂಡ್ ಮೊದಲ ಇನಿಂಗ್ಸ್: 84.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 (ಅಲಸ್ಟರ್ ಕುಕ್ 94, ಜೊನಾಥನ್ ಟ್ರಾಟ್ 74; ಸಯೀದ್ ಅಜ್ಮಲ್ 67ಕ್ಕೆ3). 

 

ಪ್ರತಿಕ್ರಿಯಿಸಿ (+)