ಮಂಗಳವಾರ, ಜೂನ್ 15, 2021
25 °C

ಕ್ರಿಕೆಟ್, ರಾಜಕೀಯಕ್ಕೆ ಸಮಾನ ಆದ್ಯತೆ: ಕೈಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್ಪುರ (ಪಿಟಿಐ): ಕ್ರಿಕೆಟ್‌ ಹಾಗೂ ರಾಜಕೀಯಕ್ಕೆ ಸಮಾನ ಅವಕಾಶ ನೀಡುವುದಾಗಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ತಿಳಿಸಿದ್ದಾರೆ. 33 ವರ್ಷ ವಯಸ್ಸಿನ ಕೈಫ್‌ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫುಲ್ಪುರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಲಭಿಸಿದೆ.‘ನಾನು ಹುಟ್ಟಿ ಬೆಳೆದಿದ್ದು ಅಲಹಾಬಾದ್‌ನಲ್ಲಿ. ಈ ನಗರಿಯ ಬೀದಿಗಳಲ್ಲಿ ನಾನು ಕ್ರಿಕೆಟ್‌ ಆಡುತ್ತಾ ಬೆಳೆದಿದ್ದೇನೆ. ಭಾರತ ತಂಡಕ್ಕೆ ಆಡುವಾಗ ಜನರು ನನ್ನತ್ತ ಹೆಮ್ಮೆಯಿಂದ ನೋಡಿದ್ದರು. ಮುಂದೆಯೂ ಜನರು ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.‘ರಾಜಕೀಯ ನನಗೆ ಎರಡನೇ ಇನಿಂಗ್ಸ್‌ ಇದ್ದಂತೆ. ಇದರಿಂದ ನನ್ನ ಕ್ರಿಕೆಟ್‌ ಜೀವನಕ್ಕೆ ಯಾವುದೇ ಧಕ್ಕೆ ಯಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.13 ಟೆಸ್ಟ್‌ ಪಂದ್ಯಗಳಿಂದ ಕೈಫ್‌ 32.84 ಸರಾಸರಿ ಯಲ್ಲಿ 624 ರನ್‌ ಗಳಿಸಿದ್ದಾರೆ. 125 ಏಕದಿನ ಪಂದ್ಯಗಳ ಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಅವರು 2753 ರನ್‌ ಕಲೆಹಾಕಿದ್ದಾರೆ. ಕೈಫ್ 2000ರಲ್ಲಿ ಜೂನಿಯರ್‌ ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.