ಶುಕ್ರವಾರ, ಜನವರಿ 24, 2020
27 °C

ಕ್ರಿಕೆಟ್: ರಾಸ್ ಟೇಲರ್ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಪಿಯರ್ (ಎಪಿ): ನಾಯಕ ರಾಸ್ ಟೇಲರ್ (111) ಗಳಿಸಿದ ಅಜೇಯ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಉತ್ತಮ ಮೊತ್ತ ಪೇರಿಸಿದೆ.ಮೆಕ್‌ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಗುರುವಾರದ ಆಟದ ಅಂತ್ಯಕ್ಕೆ 5 ವಿಕೆಟ್‌ಗೆ 331 ರನ್ ಗಳಿಸಿದೆ. ಬ್ರೆಂಡನ್ ಮೆಕ್ಲಮ್ (83) ಮತ್ತು ಮಾರ್ಟಿನ್ ಗುಪ್ಟಿಲ್ (51) ಮೊದಲ ವಿಕೆಟ್‌ಗೆ 124 ರನ್ ಸೇರಿಸಿದರು.ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ   ಇನಿಂಗ್ಸ್ 90 ಓವರ್‌ಗಳಲ್ಲಿ 5 ವಿಕೆಟ್‌ಗೆ 331 (ಬ್ರೆಂಡನ್ ಮೆಕ್ಲಮ್ 83, ಮಾರ್ಟಿನ್ ಗುಪ್ಟಿಲ್ 51, ರಾಸ್ ಟೇಲರ್ ಬ್ಯಾಟಿಂಗ್ 111, ಡೇನಿಯಲ್ ವೆಟೋರಿ 38, ಜಾನ್ ವಾಟ್ಲಿಂಗ್ ಬ್ಯಾಟಿಂಗ್ 15. 

ಪ್ರತಿಕ್ರಿಯಿಸಿ (+)