ವೆಲಿಂಗ್ಟನ್ (ಎಪಿ): ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿ ವೇಳೆ ತಂಡದ ನಿಯಮ ಉಲ್ಲಂಘಿಸಿ ಮದ್ಯ ಸೇವಿಸಿದ ಕಾರಣ ಬ್ಯಾಟ್ಸ್ಮನ್ ಜೆಸ್ಸಿ ರೈಡರ್ ಹಾಗೂ ವೇಗಿ ಡಗ್ ಬ್ರೇಸ್ವೆಲ್ ಅವರನ್ನು ನ್ಯೂಜಿಲೆಂಡ್ ತಂಡದ ಆಡಳಿತ ಅಮಾನತುಗೊಳಿಸಿದೆ.

ಹಾಗಾಗಿ ಶನಿವಾರ ನಡೆಯಲಿರುವ ಏಕದಿನ ಸರಣಿ ಮೂರನೇ ಪಂದ್ಯದಲ್ಲಿ ಈ ಆಟಗಾರರಿಗೆ ಅವಕಾಶವಿಲ್ಲ. ಈ ಇಬ್ಬರು ಆಟಗಾರರು ನೇಪಿಯರ್ನಲ್ಲಿ ಬುಧವಾರ ನಡೆದ ಪಂದ್ಯದ ಬಳಿಕ ಪಾನಗೋಷ್ಠಿ ನಡೆಸಿದ್ದರು. ಗಾಯಗೊಂಡ ಆಟಗಾರರು ಮದ್ಯ ಸೇವಿಸುವಂತಿಲ್ಲ. ಹಾಗಾಗಿ ನ್ಯೂಜಿಲೆಂಡ್ ಆಡಳಿತ ಈ ಕ್ರಮ ಕೈಗೊಂಡಿದೆ. ಈ ಪಂದ್ಯದಲ್ಲಿ ಕಿವೀಸ್ ಬಳಗ ಸೋಲು ಕಂಡಿತ್ತು.

`ಈ ಆಟಗಾರರು ಕ್ಷಮೆಯಾಚಿಸಿದ್ದಾರೆ. ತಂಡ ಹಾಗೂ ಅಭಿಮಾನಿಗಳಿಗೆ ಅವರು ಅಗೌರವ ತೋರಿದ್ದಾರೆ~ ಎಂದು ತಂಡದ ಮ್ಯಾನೇಜರ್ ಮೈಕ್ ಸ್ಯಾಡ್ಲ್ ನುಡಿದಿದ್ದಾರೆ.

ಈ ಹಿಂದೆ ಕೂಡ ರೈಡರ್ ಮದ್ಯಪಾನ ಮಾಡಿ ಅನುಚಿತವಾಗಿ ವರ್ತಿಸಿದ್ದರು. ಈ ಕಾರಣ ಅವರನ್ನು ತಂಡದಿಂದ ಹೊರಹಾಕಲಾಗಿತ್ತು. ಅಷ್ಟು ಮಾತ್ರವಲ್ಲದೇ, ದಂಡ ಕೂಡ ವಿಧಿಸಲಾಗಿತ್ತು. 2008ರಲ್ಲಿ ಪಾನಮತ್ತರಾಗಿ ಹೋಟೆಲ್ನ ಟಾಯ್ಲೆಟ್ನ ಕಿಟಕಿಗೆ ತಮ್ಮ ಕೈಯಿಂದ ಗುದ್ದಿದ್ದರು. ಆಗ ಅವರು ಗಾಯಗೊಂಡಿದ್ದರು. 2010ರಲ್ಲಿ ನಡೆದ ಮತ್ತೊಂದು ಘಟನೆ ಬಳಿಕ ಅವರಿಗೆ ಎಚ್ಚರಿಗೆ ನೀಡಲಾಗಿತ್ತು.

ರೈಡರ್ ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 6 ಹಾಗೂ 9 ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯಕ್ಕೆ ಶುಕ್ರವಾರ ತಂಡದ ಆಯ್ಕೆ ನಡೆಯಲಿದೆ. ಈ ಇಬ್ಬರು ಆಟಗಾರರನ್ನು ಕೈಬಿಡುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.