ಗುರುವಾರ , ಜೂನ್ 24, 2021
23 °C

ಕ್ರಿಕೆಟ್: ಹರ್ಮನ್‌ಪ್ರೀತ್ ಕೌರ್ ಹೋರಾಟ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಹರ್ಮನ್‌ಪ್ರೀತ್ ಕೌರ್ ಹೋರಾಟ ವ್ಯರ್ಥ

ಅಹಮದಾಬಾದ್: ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎದುರು 30 ರನ್‌ಗಳ ಗೆಲುವು ಸಾಧಿಸಿದ್ದಾರೆ.ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 228 ರನ್‌ಗಳ ಗುರಿಗೆ ಉತ್ತರವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 197 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ಆತಿಥೇಯ ತಂಡದ ಹರ್ಮನ್‌ಪ್ರೀತ್ (57; 64 ಎಸೆತ, 8 ಬೌಂಡರಿ, 1 ಸಿಕ್ಸರ್) ಹೋರಾಟ ಸಾಕಾಗಲಿಲ್ಲ. ಇದಕ್ಕೆ ಕಾರಣ ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿ.ಇದಕ್ಕೂ ಮೊದಲು ಪ್ರವಾಸಿ ತಂಡದವರು ಕೂಡ ರನ್ ಗಳಿಸಲು ಪರದಾಡಿದರು. ಆದರೆ ನಾಯಕಿ ಜೋಡಿ ಫೀಲ್ಡ್ಸ್ (ಔಟಾಗದೆ 64; 64 ಎಸೆತ,  7 ಬೌಂಡರಿ) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಸವಾಲಿನ ಮೊತ್ತ ಗಳಿಸಿತು. ರುಮೇಲಿ ಧಾರ್ (53ಕ್ಕೆ4) ಭಾರತದ ಪರ ಯಶಸ್ವಿ ಬೌಲರ್ ಎನಿಸಿದರು.ಸಂಕ್ಷಿಪ್ತ ಸೋಲು: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 227 (ರಚೆಲ್ ಹೇನ್ಸ್ 41, ಮೆಗ್ ಲ್ಯಾನಿಂಗ್ 45, ಜೋಡಿ ಫೀಲ್ಡ್ಸ್ ಔಟಾಗದೆ 64; ರುಮೇಲಿ ಧಾರ್ 53ಕ್ಕೆ4);ಭಾರತ: 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 197 (ಸುಲಕ್ಷಣಾ ನಾಯ್ಕ 22, ಪೂನಮ್ ರಾವುತ್ 36, ಹರ್ಮನ್‌ಪ್ರೀತ್ ಕೌರ್ 57, ಜೂಲನ್ ಗೋಸ್ವಾಮಿ 33; ಎಲಿಸಿ ಪೆರ‌್ರಿ 36ಕ್ಕೆ2, ಲೀಸಾ ಸ್‌ಲೇಕರ್ 25ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 30 ರನ್‌ಗಳ ಜಯ ಹಾಗೂ ಸರಣಿಯಲ್ಲಿ 1-0 ಮುನ್ನಡೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.