ಸಿಂಫರ್ಪೊಲ್ (ಎಎಫ್ಪಿ): ಉಕ್ರೇನ್ ಬಿಕ್ಕಟ್ಟು ಬೇರೊಂದು ತಿರುವು ಪಡೆದಿದ್ದು, ಹತ್ತಾರು ರಷ್ಯಾಪರ ಬಂದೂಕುಧಾರಿಗಳು ಉಕ್ರೇನ್ನೊಳಗಿರುವ ಸ್ವಾಯತ್ತ ಪ್ರದೇಶ ಕ್ರಿಮಿಯಾದ ಸಂಸತ್ ಮತ್ತು ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ನ ಸಂಸದರು ಯೂರೋಪ್ ಒಕ್ಕೂಟದ ಪರ ನಿರ್ಧಾರಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ.

ಉಕ್ರೇನ್ ಗಡಿಯಲ್ಲಿರುವ ಸೈನಿಕರಿಗೆ ಯುದ್ಧಸನ್ನದ್ಧರಾಗಿರುವಂತೆ ಬುಧವಾರವೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೂಚನೆ ನೀಡಿದ್ದರು. ಉಕ್ರೇನ್ ವಿರುದ್ಧ ರಷ್ಯಾ ತನ್ನ ಸೇನಾಬಲವನ್ನು ಪ್ರಯೋಗಿಸಬಹುದು ಎಂಬ ಭೀತಿಯನ್ನು ಇದು ಸೃಷ್ಟಿಸಿತ್ತು. ಉಕ್ರೇನ್ ಅಮೆರಿಕ ಮತ್ತು ಯೂರೋಪ್ ದೇಶಗಳ ಪರ ನಿಲುವು ತಳೆದಿರುವುದರಿಂದ ಇದು ಶೀತಲ ಸಮರ ರೀತಿಯ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿತ್ತು.

ಕ್ರಿಮಿಯಾ ಸಂಸತ್ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ರಷ್ಯಾ ಧ್ವಜವನ್ನು ಹಾರಿಸಲಾಗಿದೆ. 50ಕ್ಕೂ ಹೆಚ್ಚು ಆಯುಧಧಾರಿಗಳು ಸಂಸತ್ ಮತ್ತು ಇತರ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿರುವುದನ್ನು ಕ್ರಿಮಿಯಾ ಪ್ರಧಾನಿ ಅನತೋಲಿ ಮೊಹಿಲ್ಯೊವ್ ದೃಢಪಡಿಸಿದ್ದಾರೆ.

ಈ ಘಟನೆಯಿಂದಾಗಿ ಉಕ್ರೇನ್ನ ಸೇನೆ ಮತ್ತು ಪೊಲೀಸರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಉಸ್ತುವಾರಿ ಆಂತರಿಕ ವ್ಯವಹಾರಗಳ ಸಚಿವ ಅರ್ಸೆನ್ ಅವಕೊವ್ ತಿಳಿಸಿದ್ದಾರೆ.

ಪಶ್ಚಿಮದ ದೇಶಗಳ ಜತೆಗಿನ ಒಪ್ಪಂದವನ್ನು ರದ್ದುಪಡಿಸಿ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಳೆದ ನವೆಂಬರ್ನಲ್ಲಿ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೊವಿಚ್ ಮುಂದಾಗಿದ್ದರಿಂದಾಗಿ ಸಂಘರ್ಷ ಆರಂಭವಾಗಿತ್ತು. ಕಳೆದ ವಾರ ಯನುಕೊವಿಚ್ ಅವರ ಉಚ್ಚಾಟನೆಗೂ ಇದು ಕಾರಣವಾಯಿತು.\

ಉಕ್ರೇನ್ ಎಚ್ಚರಿಕೆ
ಕ್ರಿಮಿಯಾದಲ್ಲಿ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿರುವುದನ್ನು ಖಂಡಿಸಿರುವ ಉಕ್ರೇನ್ ಉಸ್ತುವಾರಿ ಅಧ್ಯಕ್ಷ ಅಲೆಕ್ಸಾಂಡರ್ ಟರ್ಕಿನೊವ್, ‘ಇದು ಉಕ್ರೇನ್ ಸರ್ಕಾರದ ವಿರುದ್ಧ ಎಸಗಿರುವ ಅಪರಾಧ’ ಎಂದು ಹೇಳಿದ್ದಾರೆ. ಕ್ರಿಮಿಯಾ ನೆಲೆಯಿಂದ ರಷ್ಯಾ ಸೇನೆ ಸ್ವಲ್ಪವೇ ಸ್ವಲ್ಪ ಮುಂದುವರಿದರೂ ಸೇನಾ ಅತಿಕ್ರಮಣ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಉಚ್ಚಾಟಿತ ಅಧ್ಯಕ್ಷರಿಗೆ ರಷ್ಯಾ ಆಶ್ರಯ?: ಉಚ್ಚಾಟಿತ ಅಧ್ಯಕ್ಷ ವಿಕ್ಟರ್ ಯನುಕೊವಿಚ್ ಅವರಿಗೆ ರಷ್ಯಾ ರಕ್ಷಣೆ ನೀಡಿದೆ. ಅವರು ಮಾಸ್ಕೊ ಹೊರವಲಯದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ‘ನಾನು ಮೊದಲಿಗೆ ತೀವ್ರವಾದಿಗಳಿಂದ ವೈಯಕ್ತಿಕ ಸುರಕ್ಷತೆಯನ್ನು ಖಾತರಿಪಡಿಸುವಂತೆ ರಷ್ಯಾವನ್ನು ಕೇಳಿಕೊಂಡಿದ್ದೇನೆ’ ಎಂಬ ವಿಕ್ಟರ್ ಅವರ ಹೇಳಿಕೆ ರಷ್ಯಾ ಮಾಧ್ಯಮದಲ್ಲಿ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.