ಸಹಾಯಕ ಕ್ರಿಯಾಪಗಳು/Auxiliary verbs: ಕನ್ನಡ ಭಾಷೆಯಲ್ಲಿ ಇಲ್ಲದಿರುವಂತಹ ಒಂದು ವಿಶೇಷತೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಕಾಣಬಹುದಾಗಿದೆ. ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಕ್ರಿಯಾಪದವನ್ನು ಎರಡು ವಿಧಗಳಲ್ಲಿ ಕಾಣಬಹುದು. ಒಂದು ಮುಖ್ಯಕ್ರಿಯಾಪದ/Principal verb ಇನ್ನೊಂದು ಸಹಾಯಕ ಕ್ರಿಯಾಪದ/Auxiliary verb. ಇದಲ್ಲದೆ ಇನ್ನೊಂದು ವಿಧವಾದ ಸಹಾಯಕ ಕ್ರಿಯಾಪದವಿದೆ. ಅದುವೇ ಕ್ರಿಯಾರ್ಥದ್ಯೋತಕ/Modal.

ಈ ಪಾಠದಲ್ಲಿ ಸಹಾಯಕ ಕ್ರಿಯಾಪದಗಳನ್ನು ಕುರಿತು ತಿಳಿಯೋಣ. ಅವು ಯಾವುವೆಂದರೆ,
To be, To do, To have

ಈ ಮೇಲಿನ ಮೂರು ಕ್ರಿಯಾಪದಗಳು ಮುಖ್ಯ ಕ್ರಿಯಾಪದಗಳು/Principal verbs ಆಗಿವೆ. ಹಾಗೂ ಸಹಾಯಕ ಕ್ರಿಯಾಪದಗಳು/Auxiliary verbs or Helping verbs ಆಗಿವೆ.

ಮುಖ್ಯ ಕ್ರಿಯಾಪದಕ್ಕೂ ಸಹಾಯಕ ಕ್ರಿಯಾಪದಕ್ಕೂ ಇರುವ ವ್ಯತ್ಯಾಸಗಳನ್ನು ತಿಳಿಯೋಣ. ಕನ್ನಡ ಭಾಷೆಯಲ್ಲಿ ಸಹಾಯಕ ಕ್ರಿಯಾಪದವೆಂಬ ವರ್ಗವೇ ಇಲ್ಲ. ಆದುದರಿಂದ ಇಂಗ್ಲಿಷ್ ಭಾಷೆಯಲ್ಲಿ ಸಹಾಯಕ ಕ್ರಿಯಾಪದವನ್ನು ಯಾವ ಯಾವ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆಂಬುದು ಪ್ರಾರಂಭದಲ್ಲಿ ತಿಳಿದುಕೊಂಡಿದ್ದೇ ಆದರೆ ಮುಂದಿನ ಪಾಠಗಳಲ್ಲಿ ಸಹಾಯಕ ಕ್ರಿಯಾಪದದ ಬಗ್ಗೆ ತಿಳಿದುಕೊಳ್ಳುವಾಗ ಗೊಂದಲಕ್ಕೆ ಅವಕಾಶವಿರುವುದಿಲ್ಲ.

ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.
1. ರಾಮನು ಒಳ್ಳೆಯ ಹುಡುಗನಾಗಿದ್ದಾನೆ.
Rama is a good boy.
2.ರಾಮನು ಹೋಗುತ್ತಿದ್ದಾನೆ.
Rama is going.

ಎರಡನೆ ವಾಕ್ಯಕ್ಕೆ ಸಂಬಂಧಪಟ್ಟ ವ್ಯಾಕರಣ ನಿಯಮಗಳನ್ನು ಮುಂಬರುವ ಪಾಠಗಳಲ್ಲಿ ತಿಳಿಯುವಿರಿ. ಮೇಲಿನ ಎರಡು ವಾಕ್ಯಗಳಲ್ಲಿ To be ಕ್ರಿಯಾಪದದ ಹಲವು ರೂಪಗಳಲ್ಲಿ Is ಎಂಬುದು ಒಂದು. ಮೊದಲನೆ ಉದಾಹರಣೆಯಲ್ಲಿ Is ಎಂಬ ಪದವು ಮುಖ್ಯ ಕ್ರಿಯಾಪದವಾಗಿರುತ್ತದೆ. ಹೇಗೆಂದರೆ ‘ಹುಡುಗನಾಗಿದ್ದಾನೆ’ ಎಂಬ ಪದದಲ್ಲಿ ಇರು ಎಂಬ ಅರ್ಥವು ಅಡಗಿದೆ. ಅಥವಾ ಇರು ಎಂಬುದು ಇದ್ದಾನೆ ಆಗಿದೆ.

ಆದರೆ ಎರಡನೆ ಉದಾಹರಣೆಯಲ್ಲಿ Is ಎಂಬ ಕ್ರಿಯಾಪದವು ಮುಖ್ಯ ಕ್ರಿಯಾಪದವಲ್ಲ. ಇಲ್ಲಿ Is ಎಂಬುದನ್ನು ಇರು ಎಂಬ ಅರ್ಥದಲ್ಲಿ ಉಪಯೋಗಿಸಲಾಗಿಲ್ಲ. ಹೋಗುತ್ತಿದ್ದಾನೆ ಎಂಬ ಪದದಲ್ಲಿ ‘ತ್ತಿದ್ದಾನೆ’ ಎಂಬುದು ಹೋಗು ಎಂಬ ಮುಖ್ಯಕ್ರಿಯಾಪದಕ್ಕೆ ಪ್ರತ್ಯಯವಾಗಿರುತ್ತದೆ. ಆದುದರಿಂದ ಗೊಂದಲಕ್ಕೆ ಒಳಗಾಗದೆ ಸರಿಯಾಗಿ ಅರ್ಥೈಸುವುದು ಅವಶ್ಯಕ.

ಅದು ಅಪೂರ್ಣ ವರ್ತಮಾನ ಕಾಲದಲ್ಲಿ ವಾಕ್ಯ ರಚಿಸುವುದಕ್ಕಾಗಿ ಉಪಯೋಗಿಸಲಾಗಿದೆ. ಮುಂಬರುವ ಪಾಠಗಳಲ್ಲಿ ವಿಸ್ತೃತವಾಗಿ To be ಕ್ರಿಯಾಪದದ ಎಲ್ಲಾ ರೂಪಗಳ ಬಗ್ಗೆ ಕಲಿಯೋಣ. ಇನ್ನೊಂದು ವಿಧದ ಸಹಾಯಕ ಕ್ರಿಯಾಪದದ ವರ್ಗವೊಂದಿದೆ. ಅದನ್ನು ಕ್ರಿಯಾರ್ಥದ್ಯೋತಕ/Modal ಎಂದು ಕರೆಯಲಾಗುತ್ತದೆ. ಇವುಗಳಿಗೆ ನಿರ್ದಿಷ್ಟವಾದ ಅರ್ಥವಿರುವುದಿಲ್ಲ. ಇವುಗಳನ್ನು ಸಹ ಮುಂಬರುವ ಪಾಠಗಳಲ್ಲಿ ಅತ್ಯಂತ ವಿಸ್ತಾರವಾಗಿ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವುದು ಅತಿ ಅವಶ್ಯಕ.

ಕ್ರಿಯಾರ್ಥದ್ಯೋತಕಗಳನ್ನು ಬೇರೆ ಬೇರೆ ಹಿನ್ನೆಲೆ ಅಥವಾ ಅರ್ಥಗಳಲ್ಲಿ ಉಪಯೋಗಿಸುವುದರಿಂದ ಅವುಗಳ ಉಪಯೋಗಗಳನ್ನು ಸೂಕ್ತವಾಗಿ ಅರ್ಥ್ಯೆಸಿಕೊಳ್ಳುವುದು ಒಂದಿಷ್ಟರ ಮಟ್ಟಿಗೆ ಶ್ರಮದಾಯಕ ಕೆಲಸ. ಹೆಚ್ಚೆಚ್ಚು ವಾಕ್ಯಗಳನ್ನು ಭಾಷಾಂತರಿಸುವುದರ ಮೂಲಕ ವ್ಯತ್ಯಾಸಗಳ ಬಗ್ಗೆ ಸ್ಪಷ್ಟತೆಯನ್ನು ಅರಿಯಲು ಸಾಧ್ಯ. ಈ ಕೆಳಗಿನ ಚೌಕಟ್ಟಿನಲ್ಲಿ ಕ್ರಿಯಾರ್ಥದ್ಯೋತಕ/Modal ಗಳನ್ನು ತೋರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.