ಕೋಲ್ಕತ್ತ (ಪಿಟಿಐ): ಏಷಿಯನ್ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತೆ ಪಿಂಕಿ ಪ್ರಮಾಣಿಕ್ ಪುರುಷನಾಗಿದ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಮಹಿಳೆಯೊಬ್ಬರು ಆಪಾದಿಸಿದ ಬಳಿಕ ಬಂಧಿತರಾಗಿದ್ದ ಪಿಂಕಿ ಅವರಿಗೆ ಉತ್ತರ 24 ಪರಗಣ ಜಿಲ್ಲೆಯ ನ್ಯಾಯಾಲಯವೊಂದು 25 ದಿನಗಳ ನ್ಯಾಯಾಂಗ ಬಂಧನದ ಬಳಿಕ ಮಂಗಳವಾರ ಜಾಮೀನು ಮಂಜೂರು ಮಾಡಿತು.

ಪಿಂಕಿ ಅವರ ಲಿಂಗ ಪತ್ತೆಗೆ ಸಂಬಂಧಿಸಿದಂತೆ ಎಸ್ ಎಸ್ ಕೆ ಎಂ ಆಸ್ಪತ್ರೆಯು ಸೋಮವಾರ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಬರ್ಸಾಸ್ ನ್ಯಾಯಾಲಯವು ಪಿಂಕಿ ಅವರಿಗೆ ಜಾಮೀನು ಮಂಜೂರು ಮಾಡಿದೆ.

ತನ್ನ ಜೊತೆಗೇ ವಾಸವಾಗಿರುವ 30ರ ಹರೆಯದ ಮಹಿಳೆಯು ಪ್ರಮಾಣಿಕ್ ಅವರು ಪುರುಷನಾಗಿರುವುದಷ್ಟೆ ಅಲ್ಲ ತನ್ನ ಮೇಲೆ ಅತ್ಯಾಚಾರ ಕೂಡಾ ಎಸಗಿದ್ದಾಗಿ ಆರೋಪಿಸಿದ ಬಳಿಕ ಪಿಂಕಿಯನ್ನು ಜೂನ್ 14ರಂದು ಬಂಧಿಸಲಾಗಿತ್ತು.

ಕ್ರೀಡಾಪಟುವಿಗೆ ಅಮಾನವೀಯ ಚಿತ್ರ ಹಿಂಸೆ ನೀಡಲಾಗುತ್ತಿದೆ ಎಂಬುದಾಗಿ ಕಲ್ಕತ್ತ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಜುಲೈ 6ರಂದು ಸಲ್ಲಿಸಲಾಗಿತ್ತು. ಈ ಅರ್ಜಿ ಸಂಬಂಧ ಎರಡು ವಾರಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಕಲ್ಕತ್ತ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ತನಿಖೆಯ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು.

ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗ ಕೂಡಾ ಗೃಹ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಬಂಧನದಲ್ಲಿ ಕ್ರೀಡಾಪಟುವಿಗೆ ಚಿತ್ರ ಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.