ಲಂಡನ್ (ಪಿಟಿಐ): ಭಾರತದ ಶೂಟರ್ ಅಭಿನವ್ ಬಿಂದ್ರಾ, ಬಿಲ್ಲುಗಾರಿಕೆ ತಂಡ ಮತ್ತು ನಾಲ್ಕು ಸದಸ್ಯರನ್ನೊಳಗೊಂಡ ವೇಟ್ ಲಿಫ್ಟಿಂಗ್ ತಂಡ ಸೋಮವಾರ ಸಂಜೆ ಒಲಿಂಪಿಕ್ಸ್ ಕ್ರೀಡಾಗ್ರಾಮ ಪ್ರವೇಶಿಸಿತು.

ಹತ್ತು ಸದಸ್ಯರನ್ನೊಳಗೊಂಡ ಬಿಲ್ಲುಗಾರಿಕೆ ತಂಡ ಹಾಗೂ ವೇಟ್ಲಿಫ್ಟಿಂಗ್ ಪಡೆ ಮೊದಲು ಕ್ರೀಡಾಗ್ರಾಮಕ್ಕೆ ಬಂದಿತು. ನಂತರ ಬಿಂದ್ರಾ ಈ ತಂಡವನ್ನು ಸೇರಿಕೊಂಡರು.

`ಭಾರತದ ಕೆಲ ಸ್ಪರ್ಧಿಗಳು ಕ್ರೀಡಾಗ್ರಾಮಕ್ಕೆ ಆಗಮಿಸಿದ್ದಾರೆ. ಅಭ್ಯಾಸ ನಡೆಸುವ ಸ್ಥಳ ನೋಡುತ್ತಿದ್ದಾರೆ~ ಎಂದು ಭಾರತ ತಂಡದ ಡೆಪ್ಯೂಟಿ ಚೆಫ್ ಡಿ ಮಿಷನ್ ಬ್ರಿಗೇಡಿಯರ್ ಪಿ.ಕೆ. ಮುರಳೀಧರನ್ ರಾಜ ತಿಳಿಸಿದ್ದಾರೆ.

ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಕ್ರೀಡಾಗ್ರಾಮದಲ್ಲಿ 2,818 ವಸತಿಗೃಹ ಹಾಗೂ ಅಪಾರ್ಟ್ಮೆಂಟ್ಗಳಿವೆ. 15,000 ಜನ ಗ್ರಾಮದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಲಂಡನ್ ಒಲಿಂಪಿಕ್ಸ್ಗೆ ಒಟ್ಟು 81 ಅಥ್ಲೀಟ್ಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಜೊತೆಗೆ 51 ಮಂದಿ ಅಧಿಕಾರಿಗಳು ಸಹ ಇದ್ದಾರೆ. ಭಾರತದ ಅಥ್ಲೀಟ್ಗಳಿಗೆ ಸಮುದ್ರದ ಸನಿಹವಿರುವ `ಎಸ್-1~ ಕಟ್ಟಡದಲ್ಲಿ ವಾಸಿಸಲು ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ `ಟೈಟನ್~ ಎಂದು ಹೆಸರಿಡಲಾಗಿದೆ.

ಪ್ರತಿ ದೇಶದ ಅಥ್ಲೀಟ್ಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಂಘಟಕರು ತಂಡವನ್ನು ರಚಿಸಿದ್ದಾರೆ. ಭಾರತದ ಸ್ಪರ್ಧಿಗಳ ಸಹಾಯಕ್ಕಾಗಿ ಒಟ್ಟು ಏಳು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವರು ಭಾರತ ಮೂಲದವರಾಗಿದ್ದು, ಲಂಡನ್ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಗಳನ್ನು ಅಧಿಕೃತವಾಗಿ ಸ್ವಾಗತಿಸಲು ಭಾನುವಾರ (ಜುಲೈ 22) ದಿನವನ್ನು ನಿಗದಿ ಮಾಡಲಾಗಿದೆ. ಈ ದಿನಾಂಕವನ್ನು ಬದಲಾವಣೆ ಮಾಡಬೇಕು ಎಂದು ಭಾರತ ತಂಡ ಸಂಘಟಕರಲ್ಲಿ ಮನವಿ ಮಾಡಿಕೊಂಡಿತ್ತು. ಆದರೆ, ಬೇರೆ ಬೇರೆ ಕಾರ್ಯಕ್ರಮಗಳು ಇರುವ ಕಾರಣ ದಿನಾಂಕ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ಸಂಘಟಕರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.