ಬೆಳಗಿತು ಕ್ರೀಡಾ ಲೋಕ; ಹೊಳೆಯಿತು ಲಂಡನ್

ಲಂಡನ್ (ಎಪಿ/ಪಿಟಿಐ/ಐಎಎನ್ಎಸ್): ಕೆಲವೊಮ್ಮೆ ತಲುಪಿದ ಗುರಿಗಿಂತ ನಡೆದ ಬಂದ ಹಾದಿಯ ನೆನಪುಗಳು ತುಂಬಾ ಖುಷಿ ಕೊಡುತ್ತವೆ. ಕಾರಣ ನೆನಪೆಂದರೆ ಸುಮಧುರ ಅನುಭೂತಿ. ಕ್ರೀಡಾ ಉತ್ಸವಕ್ಕೆ ಈಗ ತೆರೆ ಬಿದ್ದಿರಬಹುದು, ಆದರೆ ಆ ನೆನಪುಗಳು ಅಮರ...

ಕ್ರೀಡಾ ಪ್ರೇಮಿಗಳ ಮನಸ್ಸು ಹಾಗೂ ಹೃದಯವನ್ನು ತನ್ನತ್ತ ಸೆಳೆದಿಟ್ಟುಕೊಂಡಿದ್ದ ಜಾಗತಿಕ ಕ್ರೀಡಾ ಮೇಳ ಲಂಡನ್ ಒಲಿಂಪಿಕ್ಸ್ಗೆ ಭಾನುವಾರ ರಾತ್ರಿ ಅದ್ದೂರಿ ತೆರೆ ಬಿದ್ದಿದೆ. ಹದಿನಾರು ದಿನ ಜಾಗತಿಕ ಕ್ರೀಡಾಲೋಕದಲ್ಲಿ ಮಿಂಚು ಹರಿಸಿದ ಈ ಕ್ರೀಡಾ ಉತ್ಸವ ಹಲವು ಮಧುರ ನೆನಪುಗಳನ್ನು ಕಟ್ಟಿಕೊಟ್ಟಿತು.

ಸಂಗೀತ, ನೃತ್ಯ, ಸಿಡಿಮದ್ದು ಸದ್ದಿನ ಸಮ್ಮಿಲನದಲ್ಲಿ 30ನೇ ಒಲಿಂಪಿಕ್ಸ್ನ ಕ್ರೀಡಾ ಜ್ಯೋತಿ ನಂದಿ ಹೋಯಿತು. ವಿದಾಯದ ಕಾರ್ಯಕ್ರಮವು ಉದ್ಘಾಟನಾ ಸಮಾರಂಭದಷ್ಟೇ ವಿಜೃಂಭಿಸಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಕಂಗಳಲ್ಲಿ ಖುಷಿಯ ಕಣ್ಣೀರು ತರಿಸಿತು. ಬೇಸರದ ವಿದಾಯ ಹೇಳಿತು.

ಒಲಿಂಪಿಕ್ ಪಾರ್ಕ್ನ ಮುಖ್ಯ ಕ್ರೀಡಾಂಗಣ ಸಂಗೀತದ ಕಡಲಲ್ಲಿ ಮುಳುಗಿ ಹೋಗಿತ್ತು. ಗ್ರೇಟ್ ಬ್ರಿಟನ್ನ ಗಾನಸುಧೆಯ ಇತಿಹಾಸ ಹಾಗೂ ಸಂಸ್ಕ್ಕೃತಿ ಅನಾವರಣಗೊಂಡಿತು. ಅದಕ್ಕಿಟ್ಟಿದ್ದ ಹೆಸರು `ಎ ಸಿಂಫನಿ ಆಫ್ ಬ್ರಿಟಿಷ್ ಮ್ಯೂಸಿಕ್~. ಈ ದೇಶದ 50 ವರ್ಷಗಳ ಸೂಪರ್ ಹಿಟ್ ಹಾಡುಗಳು ಮುಕ್ತಾಯ ಸಮಾರಂಭದಲ್ಲಿ ಪ್ರತಿಧ್ವನಿಸಿದವು.

ಸಂಗೀತದ ನಿನಾದಕ್ಕೆ ನೃತ್ಯದ ಮೆರುಗು ಇತ್ತು. ಕಲಾ ನಿರ್ದೇಶಕ ಕಿಮ್ ಗಾವಿನ್ ಹಾಗೂ ಅವರ ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು. 4100 ಕಲಾವಿದರು ಪ್ರೇಕ್ಷಕರ ಮನಸೂರೆಗೊಂಡರು. ಮೂರು ಗಂಟೆಯ ಈ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಕೂಡ ಹೆಜ್ಜೆ ಹಾಕಿ ತಮ್ಮ ಸಂಭ್ರಮ ಹಂಚಿಕೊಂಡರು. ಕೆಲ ಕ್ರೀಡಾಪಟುಗಳ ಕಣ್ಣುಗಳಲ್ಲಿ ನೀರು ಜಿನುಗಿತು.

ಅಪಾರ ಜನ ಮೆಚ್ಚುಗೆ ಪಡೆದಿರುವ `ಲಂಡನ್ ಐ~, ಟೋವರ್ ಬ್ರಿಜ್ ಹಾಗೂ ಕ್ಯಾಥೆಡ್ರಲ್ನ ಪ್ರತಿಕೃತಿಯನ್ನು ಕ್ರೀಡಾಂಗಣದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಲಂಡನ್ ನಗರಿಯೇ ಕ್ರೀಡಾಂಗಣದೊಳಗೆ ಇದ್ದ ಚಿತ್ರಣವನ್ನು ಅದು ನೀಡುತಿತ್ತು.

ಮುಕ್ತಾಯ ಸಮಾರಂಭದಲ್ಲಿ ಆಧುನಿಕ ಗ್ರೇಟ್ ಬ್ರಿಟನ್ನ ಚಿತ್ರಣ ಅನಾವರಣಗೊಂಡಿತು. ಬ್ರಿಟಿನ್ನ ಖ್ಯಾತ ಪಾಪ್ ಗಾಯಕರು ಹಾಗೂ ಸ್ಟೈಸ್ ಗರ್ಲ್ಗಳು ಕಾರ್ಯಕ್ರಮ ನೀಡಿದರು. ಕಾರ್ಯಕ್ರಮ ಶುರುವಾಗಿದ್ದು `ಎ ಡೇ ಇನ್ ದಿ ಲೈಫ್ ಆಫ್ ಲಂಡನ್~ ಚಿತ್ರಣದೊಂದಿಗೆ.

ಬಳಿಕ `ರೀಡ್ ಆಲ್ ಎಬೌಟ್ ಇಟ್~, `ಫ್ರೀಡಮ್ 90~, `ವೈಟ್ ಲೈಟ್~, `ಎ ಡೇ ಇನ್ ಲೈಫ್~, `ವಾಟ್ ಮೇಕ್ಸ್ ಯೂ ಬ್ಯೂಟಿಫುಲ್~, `ವಿ ವಿಲ್ ರಾಕ್ ಯೂ~, ಒಲಿಂಪಿಕ್ಸ್ನ ಹಾಡು `ಸರ್ವೈವಲ್~ನ ಗಾನಸುಧೆ ಹರಿಸಲಾಯಿತು. ಕ್ರೀಡಾಂಗಣದೊಳಗೆಯೇ ವಾಹನಗಳು ಹರಿದಾಡಿದವು. ಬಣ್ಣದ ಲೋಕ ಸೃಷ್ಟಿಸಿ ಕ್ರೀಡಾಭಿಮಾನಿಗಳ ಹೃದಯ ತಾಕಿದರು. ಭಾರತೀಯ ಕಾರ್ಯಕ್ರಮ ಕೂಡ ಇತ್ತು. ಭಾಂಗ್ರಾ ನೃತ್ಯ ಹಾಗೂ ಡ್ರಮ್ಮರ್ಗಳು ಗಮನ ಸೆಳೆದರು.
ಕ್ರೀಡಾಕೂಟದ ಪ್ರಮುಖ ಕ್ಷಣಗಳನ್ನು ಮತ್ತೆ ಮತ್ತೆ ತೋರಿಸಲಾಯಿತು.

ಜಮೈಕದ ಅಸಾಮಾನ್ಯ ಓಟಗಾರ 100 ಮೀಟರ್ಸ್ನಲ್ಲಿ ವಿಜಯದ ಗೆರೆ ದಾಟುತ್ತಿದ್ದಂತೆ ಬಾಯಿ ಮೇಲೆ ಕೈ ಇಟ್ಟುಕೊಂಡು `ಮತ್ತೆ ನಾನೇ ನಂಬರ್ ಒನ್~ ಎಂದು ಹೇಳಿದ್ದು. ರಿಲೇಯಲ್ಲಿ ಅಮೆರಿಕದ ಮಹಿಳೆಯರ ವಿಶ್ವದಾಖಲೆಯ ಸಂಭ್ರಮ...

ಹೊಸ ಹೀರೊಗಳ ಉದಯ, ವೀರೋಚಿತ ಪ್ರದರ್ಶನಗಳು, ಎರಡೂ ಕಾಲಿಲ್ಲದ ಆಸ್ಕರ್ ಪಿಸ್ಟೋರಿಯಸ್ ಓಡಿದ್ದು, ಕೆಲ ಕ್ರೀಡಾಪಟುಗಳು ಗಾಯಗೊಂಡು ಹಿಂದೆ ಸರಿದಿದ್ದು...ಹೀಗೆ ಹಲವು ಮೈನವಿರೇಳಿಸುವ ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳಲಾಯಿತು.

ಮಿಂಚಿದ ಸ್ಪೈಸ್ ಬೆಡಗಿಯರು: ಮಾದಕ ಉಡುಗೆ ತೊಟ್ಟ ಸ್ಟೈಸ್ ಬೆಡಗಿಯರು ಕಪ್ಪು ಲಂಡನ್ನ ಟ್ಯಾಕ್ಸಿ ಮೇಲೆ ನಿಂತು ಹಾಡುತ್ತಾ ಮಿಂಚಿನ ಸಂಚಲನ ಉಂಟು ಮಾಡಿದರು. ಅವರು ಗಾನಸುಧೆ ಹರಿಸುತ್ತಿರುವಾಗ ಟ್ಯಾಕ್ಸಿ ಕ್ರೀಡಾಂಗಣದೊಳಗೆ ಶರವೇಗದಲ್ಲಿ ಚಲಿಸುತಿತ್ತು. ಅನಿ ಲೆನಾಕ್ಸ್, ಜೆಸ್ಸಿ ಜೆ, ಟೈನ್ ತಂಪಾ, ಕ್ರೂಜ್ ಅವರ ಸಂಗೀತಕ್ಕೆ ಇಡೀ ಕ್ರೀಡಾ ಲೋಕವೇ ಹೆಜ್ಜೆ ಹಾಕಿತು. ರಿಕಿ ವಿಲ್ಸನ್ ಬೈಕಿನ ಹಿಂಬದಿ ಕುಳಿತು ಹಾಡಿದ್ದು ಗಮನ ಸೆಳೆಯಿತು. ಅವರನ್ನು 50 ಬೈಕ್ಗಳು ಹಿಂಬಾಲಿಸಿದವು.

ಫ್ಯಾಷನ್ ಶೋ ಕೂಡ ನಡೆಯಿತು. ಈ ಕಾರ್ಯಕ್ರಮ ತಾಂತ್ರಿಕವಾಗಿ ಅದ್ದೂರಿಯಾಗಿತ್ತು. ದಿ ಪೆಟ್ ಶಾಪ್ ಬಾಯ್ಸ, ಅನ್ನಿ ಲೆನಾಕ್ಸ್ ಮತ್ತು ಫ್ಯಾಟ್ ಬಾಯ್ ಸ್ಲಿಮ್ನಂತಹ ಸಂಗೀತ ಕಂಪೆನಿಗಳು ಕಾರ್ಯಕ್ರಮ ನಡೆಸಿಕೊಟ್ಟವು. ಬಣ್ಣ ಬಣ್ಣದ ಬೆಳಕಿನಿಂದ ಕ್ರೀಡಾಂಗಣ ಝಗಮಗಿಸುತಿತ್ತು. ಈ ಕೂಟದಲ್ಲಿ 303 ವಿಭಾಗಗಳ ಸ್ಪರ್ಧೆಗಳ ದ್ಯೋತಕವಾಗಿ 303 ಪೆಟ್ಟಿಗೆಗಳಿಂದ ಪಿರಮಿಡ್ ರಚಿಸಲಾಯಿತು.

ಈ ಕಾರ್ಯಕ್ರಮವನ್ನು ಟಿವಿ ಮೂಲಕ ವಿಶ್ವದ 200 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಕ್ರೀಡಾಂಗಣದಲ್ಲಿಯೇ 80 ಸಾವಿರ ಮಂದಿ ಸೇರಿದ್ದರು.

ಮೇರಿ ಧ್ವಜಧಾರಿ: ವಿದಾಯ ಸಮಾರಂಭದಲ್ಲಿ ಎಲ್ಲಾ ದೇಶಗಳ ಅಥ್ಲೀಟ್ಗಳು ಒಂದುಗೂಡಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. `ನಾವೆಲ್ಲರೂ ಒಂದೇ~ ಎಂಬುದನ್ನು ಸಾರುವುದು ಇದರ ಉದ್ದೇಶವಾಗಿತ್ತು. ಮಹಿಳೆಯರ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದ ಮೇರಿ ಕೋಮ್ ಭಾರತದ ಧ್ವಜಧಾರಿಯಾಗಿದ್ದರು. ಕೃಷ್ಣಾ ಪೂನಿಯಾ ಹಾಗೂ ಹಾಕಿ ಆಟಗಾರರು ಈ ಸಂದರ್ಭದಲ್ಲಿದ್ದರು.

16 ದಿನಗಳ ಈ ಕ್ರೀಡಾಕೂಟದಲ್ಲಿ 204 ದೇಶಗಳ ಸುಮಾರು 10,500 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಮೆರಿಕ, ಚೀನಾ, ಆತಿಥೇಯ ಗ್ರೇಟ್ ಬ್ರಿಟನ್ ಪದಕ ಪಟ್ಟಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಂತವು. ಭಾರತ ಕೂಡ ತನ್ನ ಹಿಂದಿನ ಸಾಧನೆಗಳನ್ನು ಮೀರಿ ನಿಂತಿತು.

ಮ್ಯಾರಥಾನ್ ಪದಕ ಪ್ರಧಾನ: ಕ್ರೀಡಾಕೂಟದ ಕೊನೆಯ ದಿನ ನಡೆದ ಪುರುಷರ ಮ್ಯಾರಥಾನ್ನಲ್ಲಿ ಗೆದ್ದ ಉಗಾಂಡದ ಸ್ಟೀಫನ್ ಕಿಪ್ರೊಟಿಚ್ (ಚಿನ್ನ), ಕೆನ್ಯಾದ ಅಬೆಲ್ ಕಿರುಯ್ (ಬೆಳ್ಳಿ) ಹಾಗೂ ಕೆನ್ಯಾದ ವಿಲ್ಸನ್ ಕಿಪ್ಸಂಗ್ ಕಿಪ್ರೊಟಿಚ್ (ಕಂಚು) ಅವರಿಗೆ ವಿದಾಯ ಸಮಾರಂಭದ ನಡುವೆಯೇ ಪದಕ ಪ್ರದಾನ ಮಾಡಲಾಯಿತು. ಕ್ರೀಡಾಕೂಟದ ಮುಖ್ಯಸ್ಥ ಸೆಬಾಸ್ಟಿಯನ್ ಕೋ ಪದಕ ನೀಡಿದರು.

2016ರ ಒಲಿಂಪಿಕ್ಸ್ ಆಯೋಜಿಸಲಿರುವ ಬ್ರೆಜಿಲ್ ತಂಡದವರು ಕೂಡ ಎಂಟು ನಿಮಿಷಗಳ ಕಾರ್ಯಕ್ರಮ ನಡೆಸಿಕೊಟ್ಟರು. ಈ ಗುಂಪಿನೊಂದಿಗೆ ಫುಟ್ಬಾಲ್ ದಂತಕತೆ ಪೀಲೆ ಕಾಣಿಸಿಕೊಳ್ಳುತ್ತಿದ್ದಂತೆ ಜೋರು ಚಪ್ಪಾಳೆ.
ಒಲಿಂಪಿಕ್ಸ್ ಜನಿಸಿದ ಗ್ರೀಸ್ನ ಧ್ವಜ, ಈ ಬಾರಿ ಕೂಟ ಆಯೋಜಿಸಿದ ಗ್ರೇಟ್ ಬ್ರಿಟನ್ ಧ್ವಜ ಹಾಗೂ 2016ರಲ್ಲಿ ಕೂಟ ಆಯೋಜಿಸಲಿರುವ ಬ್ರೆಜಿಲ್ನ ಧ್ವಜಾರೋಹಣ ಮಾಡಲಾಯಿತು. ಈ ದೇಶಗಳ ರಾಷ್ಟ್ರಗೀತೆ ನುಡಿಸಿದ ಬಳಿಕ ಧ್ವಜವನ್ನು ಕೆಳಗಿಳಿಸಲಾಯಿತು.

ಲಂಡನ್ನ ಮೇಯರ್ ಬೋರಿಸ್ ಜಾನ್ಸನ್ ಒಲಿಂಪಿಕ್ ಧ್ವಜವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಜಾಕ್ ರೋಗ್ಗೆ ಹಸ್ತಾಂತರಿಸಿದರು. ಅದನ್ನು ಅವರು ರಯೋ ಡಿ ಜನೈರೊದ ಮೇಯರ್ಗೆ ನೀಡಿದರು. ಬಳಿಕ ಕ್ರೀಡಾಕೂಟ ಮುಗಿಯಿತು ಎಂದು ರೋಗ್ ಘೋಷಿಸಿದರು.

ನಾಲ್ಕು ವರ್ಷಗಳ ಬಳಿಕ ರಯೋ ಡಿ ಜನೈರೊದಲ್ಲಿ ಮತ್ತೆ ಸೇರೋಣ ಎಂದು ವಿಶ್ವದ ಯುವಕರಿಗೆ ರೋಗ್ ಕರೆ ನೀಡಿದರು. ಆ ನಂತರ ಕ್ರೀಡಾ ಜ್ಯೋತಿಯನ್ನು ನಂದಿಸಲಾಯಿತು. ಬಳಿಕ ಸುಡ್ಡುಮದ್ದಿನ ನರ್ತನ ನಡೆಯಿತು. ಕ್ರೀಡಾ ಜ್ಯೋತಿಯ ತುಣುಕುಗಳನ್ನು ಕೂಟದಲ್ಲಿ ಪಾಲ್ಗೊಂಡಿದ್ದ 204 ದೇಶಗಳಿಗೆ ನೀಡಲಾಗುತ್ತದೆ.
ಮತ್ತೆ ಮನಸ್ಸು ಲಂಡನ್ ನೆನಪುಗಳ ಲಹರಿಯಲ್ಲಿ ತೇಲುತ್ತಿದೆ...!

ಚೆಲುವಿನ ಕಾರ್ಯಕ್ರಮದ ಚೆಂದದ ಕ್ಷಣಗಳು...!

* 4100 ಕಲಾವಿದರಿಂದ ಕಾರ್ಯಕ್ರಮ
* ಕ್ರೀಡಾಂಗಣದಲ್ಲಿಯೇ 80 ಸಾವಿರ ಮಂದಿ ಉಪಸ್ಥಿತಿ
* ಟಿವಿ ಮೂಲಕ 200 ಕೋಟಿ ಜನರು ವೀಕ್ಷಣೆ
* ತಾಂತ್ರಿಕವಾಗಿ ಅದ್ದೂರಿಯಾಗಿದ್ದ ಕಾರ್ಯಕ್ರಮ
* ಕುಣಿದು ಕುಪ್ಪಳಿಸಿದ ಕ್ರೀಡಾಪಟುಗಳು
* ಟ್ಯಾಕ್ಸಿ ಮೇಲೆ ಮಿಂಚಿದ ಸ್ಪೈಸ್ ಬೆಡಗಿಯರು
* ಆಧುನಿಕ ಗ್ರೇಟ್ ಬ್ರಿಟನ್ನ ಚಿತ್ರಣ ನೀಡಿದ ಕಾರ್ಯಕ್ರಮ
* ಬ್ರಿಟನ್ನ 50 ವರ್ಷಗಳ ಸಂಗೀತದ ಅನಾವರಣ
* ಮೇರಿ ಕೋಮ್ ಭಾರತದ ಧ್ವಜಧಾರಿಯಾಗಿದ್ದರು
* 2016ರ ಒಲಿಂಪಿಕ್ಸ್ ಆಯೋಜಿಸಲಿರುವ ಬ್ರೆಜಿಲ್ ದೇಶದ ಕಲಾವಿದರಿಂದಲೂ ಕಾರ್ಯಕ್ರಮ
* ಫುಟ್ಬಾಲ್ ದಂತಕತೆ ಪೀಲೆ ಉಪಸ್ಥಿತಿ
* ಗಮನ ಸೆಳೆದ ಭಾರತೀಯ ಭಾಂಗ್ರಾ ನೃತ್ಯ, ಡ್ರಮ್ ಕಾರ್ಯಕ್ರಮ
* ನಂದಿದ ಕ್ರೀಡಾ ಜ್ಯೋತಿ
* 204 ದೇಶಗಳಿಗೆ ಕ್ರೀಡಾ ಜ್ಯೋತಿಯ ತುಣುಕು ವಿತರಣೆ
* ರಯೋ ಡಿ ಜನೈರೊದ ಮೇಯರ್ಗೆ ಒಲಿಂಪಿಕ್ಸ್ ಧ್ವಜ ಹಸ್ತಾಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.