ಕ್ರೀಡೆಯಲ್ಲಿಯೂ ಶಕ್ತಿ, ಯುಕ್ತಿ ಮುಖ್ಯ
ಚಿಕ್ಕಮಗಳೂರು: ಯಾವುದೇ ಕ್ರೀಡೆಯಲ್ಲಿಯೂ ಶಕ್ತಿ, ಯುಕ್ತಿ, ಕೌಶಲ್ಯ ಅತಿಮುಖ್ಯ. ಈ ಮೂರರ ಸೂಕ್ತ ಸಂಯೋಜನೆಯಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪಗೌಡ ಹೇಳಿದರು.ನಗರದ ಗಾಲ್ಫ್ ಕ್ಲಬ್ನಲ್ಲಿ ಇತ್ತೀಚೆಗೆ ಚಿಕ್ಕಮಗಳೂರು ರೌಂಡ್ ಟೇಬಲ್ ವತಿಯಿಂದ ನಡೆದ ಒಂದು ದಿನದ ಗಾಲ್ಫ್ ಪಂದ್ಯಾವಳಿಗೆ ಚಾಲನೆ ನೀಡಿದ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಚಿಕ್ಕಮಗಳೂರು ರೌಂಡ್ ಟೇಬಲ್ ಅಧ್ಯಕ್ಷ ಸಂದೀಪ್ ಮಾತನಾಡಿ ಈ ಪಂದ್ಯಾವಳಿಯಿಂದ ಬರುವ ಹಣವನ್ನು ಸರ್ಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಿಸಲು ಬಳಸಲಾಗುತ್ತದೆ. ಈ ಪಂದ್ಯಾವಳಿಗೆ ಪ್ರಾಯೋಜಕರಾಗಿ ರಾಜಾ ಭಾಗಮನೆ ಮತ್ತು ಗಾಲ್ಫ್ ಕಬ್ಲ್ ಅಧ್ಯಕ್ಷರಾದ ಎ.ಬಿ.ಸುದರ್ಶನ್, ಗಾಲ್ಫ್ ಕ್ಯಾಪ್ಟನ್ ರವಿಶಂಕರ್ ಹಾಗೂ ಸದಸ್ಯರು ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ಕುಮಾರ್, ರೌಂಡ್ ಟೇಬಲ್ ಕಾರ್ಯದರ್ಶಿ ರೋಹಿತ್, ಖಜಾಂಚಿ ನಿತೀನ್ ಹಾಗೂ ಕ್ರೀಡಾಪಟುಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.