ಶುಕ್ರವಾರ, ಮೇ 14, 2021
25 °C

ಕ್ರೀಡೆಯಲ್ಲಿ ಭಾಗವಹಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇಂದಿನ ದಿನದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಅರಿತು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಬಿ. ತಳಗೇರಿ ಹೇಳಿದರು.ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿ ದ್ಯಾಲಯ ಹುಬ್ಬಳ್ಳಿ ಅಂತರ್ ಕಾಲೇಜು ಗಳ ಕ್ರಾಸ್ ಕಂಟ್ರಿ ಓಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಮಾನವನ ಮಾನಸಿಕ ಸಿದ್ಧತೆಗಳು ಹಾಗೂ ಬೆಳವಣಿಗೆ ಕ್ರೀಡಾಂಗಣ ದಲ್ಲಿಯೇ ಹುಟ್ಟಿ ಕೊಳ್ಳುತ್ತವೆ. ಅದಕ್ಕಾಗಿ ಪ್ರತಿಯೊಬ್ಬರೂ ಕ್ರೀಡಾ ಕ್ಷೇತ್ರವನ್ನು ಒಂದು ವಿಷಯದಂತೆ ಸ್ವೀಕರಿಸಿದ್ದಲ್ಲಿ ಅವರಿಗೆ ಕ್ರೀಡೆಯೊಂದಿಗೆ ದೈಹಿಕ ಸಾಮರ್ಥ್ಯವೂ ಬೆಳೆಯಲು ಸಹಕಾರಿ ಯಾಗಲಿದೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಅತೀ ಮುಖ್ಯ. ಉತ್ತಮ ವಿಚಾರಗಳನ್ನು ರೂಢಿ ಸಿಕೊಂಡಲ್ಲಿ ಸಾಧನೆ ಮಾಡಲು ಹಲವಾರು ವೇದಿಕೆಗಳು ಲಭ್ಯವಾ ಗುತ್ತವೆ. ಕನಸುಗಳನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಪರಿಶ್ರಮ ಅಗತ್ಯ ಎಂದು ಹೇಳಿದರು.ಎಸ್.ಕೆ. ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಒಂದು ಪ್ರಮುಖ ಘಟ್ಟವಾಗಿದೆ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಖಲಿದಖಾನ್ ಮತ್ತಿತರರು ಹಾಜರಿದ್ದರು. 6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಡೆದ ಓಟವು ಕಾಲೇಜಿನಿಂದ ಪ್ರಾರಂಭ ವಾಗಿ, ಎಪಿಎಂಸಿ ಯಾರ್ಡ್ ಮೂಲಕ ಹಮಾಲರ ಕಾಲೊನಿ ಮೂಲಕ ಮತ್ತೆ ಕಾಲೇಜಿನ ಆವರಣಕ್ಕೆ ಆಗಮಿಸಿತು.

ಸ್ಪರ್ಧೆಯಲ್ಲಿ ಶಿವಮೊಗ್ಗ, ಮೈಸೂರ, ಹಾಸನ ಹಾಗೂ ಗದಗ ಸೇರಿದಂತೆ 6 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪುರುಷರ ವಿಭಾಗದಲ್ಲಿ 17 ಹಾಗೂ ಮಹಿಳಾ ವಿಭಾಗದಲ್ಲಿ 10 ವಿದ್ಯಾರ್ಥಿ ನಿಯರು ಪಾಲ್ಗೊಂಡಿದ್ದರು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೈಸೂರ ವಿದ್ಯಾವರ್ಧಕ ಕಾನೂನು ಕಾಲೇಜಿನ ಜಗದೀಶ ಪ್ರಥಮ, ಮೈಸೂರ ಜೆಎಸ್‌ಎಸ್ ಕಾನೂನು ಮಹಾವಿದ್ಯಾಲಯದ ಸಿದ್ದೇಶ ಎಸ್. ದ್ವಿತೀಯ, ಗದಗ ಎಚ್‌ಸಿಇಎಸ್ ಕಾನೂನು ವಿದ್ಯಾಲಯದ ರವಿಚಂದ್ರ ನೇಸರಗಿ ತೃತೀಯ ಸ್ಥಾನ ಪಡೆದರು.ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಹಾಸನದ ಸರ್ಕಾರಿ ಕಾನೂನು ಮಹಾವಿ ದ್ಯಾಲಯದ ವನಿತಾ ಪ್ರಥಮ, ರಾಧಾ ಕೆ.ಆರ್. ದ್ವಿತೀಯ, ಗದುಗಿನ ಪ್ರಭಾವತಿ ಪೊಲೀಸ್‌ಗೌಡ್ರ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ ತಂಡದ ವಿಭಾಗದಲ್ಲಿ ಮೈಸೂರ ವಿದ್ಯಾವರ್ಧಕ ಕಾನೂನು ಮಹಾವಿದ್ಯಾಲಯ ಪ್ರಥಮ, ಎಚ್‌ಸಿಇಎಸ್ ಕಾನೂನು ಕಾಲೇಜು ದ್ವಿತೀಯ, ಮೈಸೂರ ಜೆಎಸ್‌ಎಸ್ ಕಾನೂನು ಮಹಾವಿದ್ಯಾಲಯ ತೃತೀಯ ಸ್ಥಾನ ಪಡೆಯಿತು.ಮಹಿಳೆಯರ ವಿಭಾಗದಲ್ಲಿ ಹಾಸನದ ಸರ್ಕಾರಿ ಕಾನೂನು ಮಹಾವಿದ್ಯಾಲಯ ಪ್ರಥಮ, ಎಚ್‌ಸಿಇಎಸ್ ಕಾನೂನು ಕಾಲೇಜು ದ್ವಿತೀಯ, ಶಿವಮೊಗ್ಗದ ಸಿಬಿಆರ್ ಎನ್‌ಸಿಎಲ್ ಕಾನೂನು ಮಹಾವಿದ್ಯಾಲಯ ತೃತೀಯ ಸ್ಥಾನ ಪಡೆಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.