ಬೆಂಗಳೂರು: ನಗರದ ವಸತಿ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ ಎರಡು ‘ರಿಯಾಲ್ಟಿ ಎಕ್ಸಪೊ’ ಮೇಳ ಗಳನ್ನು ಭಾರತೀಯ ರಿಯಲ್ ಎಸ್ಟೇಟ್ ಡೆವೆಲಪರ್ಗಳ ಸಂಘಗಳ ಮಹಾ ಒಕ್ಕೂಟದ (ಕ್ರೆಡಾಯ್) ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಏರ್ಪಡಿ ಸಲಾಗುತ್ತಿದೆ.
ಮೊದಲ ಮೇಳ ಡಿ. 6 ಮತ್ತು 7ರಂದು ಕುಮಾರ ಕೃಪಾ ರಸ್ತೆಯ ಹೋಟೆಲ್ ಲಲಿತ್ ಅಶೋಕ್ನಲ್ಲಿ ನಡೆ ಯಲಿದ್ದರೆ, ಎರಡನೇ ಮೇಳ ಡಿ. 14 ಮತ್ತು 15ರಂದು ಮಾರತ್ಹಳ್ಳಿಯ ಹೋಟೆಲ್ ಪಾರ್ಕ್ ಪ್ಲಾಜಾದಲ್ಲಿ ನಡೆಯಲಿದೆ.

‘ಬೆಂಗಳೂರು ಎಲ್ಲ ದಿಕ್ಕಿನಲ್ಲೂ ಬೆಳೆ ಯುತ್ತಿದ್ದು, ಕೆಲಸದ ಸ್ಥಳದ ಹತ್ತಿರ ದಲ್ಲೇ ಮನೆ ಇರಬೇಕು ಎನ್ನವುದು ಎಲ್ಲರ ಅಪೇಕ್ಷೆಯಾಗಿದೆ. ಈ ವಿಷಯವೇ ಮೇಳದ ಪ್ರಮುಖ ಸಂಗತಿಯಾಗಿದೆ’ ಎಂದು ಕ್ರೆಡಾಯ್ ಬೆಂಗಳೂರು ಕೇಂದ್ರದ ಅಧ್ಯಕ್ಷ ಸಿ.ಎನ್. ಗೋವಿಂದ ರಾಜು ಹೇಳುತ್ತಾರೆ.

‘ಮನೆ ಕೊಳ್ಳುವವರು ತಮ್ಮ ಪ್ರದೇಶ ದಲ್ಲೇ ಮೇಳ ನಡೆಯಬೇಕು ಎನ್ನುವ ಅಪೇಕ್ಷೆ ಹೊಂದಿರುತ್ತಾರೆ. ಅವರ ಭಾವ ನೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’ ಎಂದು ತಿಳಿಸುತ್ತಾರೆ. ಮೇಳದಲ್ಲಿ 42 ರಿಯಲ್ ಎಸ್ಟೇಟ್ ಸಂಸ್ಥೆಗಳು, ಪ್ರಮುಖ ಬ್ಯಾಂಕ್ಗಳು, ಗೃಹಸಾಲ ನೀಡುವ ಹಣಕಾಸು ಸಂಸ್ಥೆ ಗಳು ಪಾಲ್ಗೊಳ್ಳಲಿವೆ. ಮೊದಲ ಮೇಳ ವನ್ನು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿ ನಾರಾಯಣ ಉದ್ಘಾಟಿಸಲಿ ದ್ದು, ಕ್ರೆಡಾಯ್ ಸಂಸ್ಥಾಪಕ ಅಧ್ಯಕ್ಷ ಕೆ.ಕೆ. ಮಲ್ಪಾನಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.