ಶುಕ್ರವಾರ, ಮೇ 14, 2021
21 °C

ಕ್ವಾರ್ಟರ್ ಫೈನಲ್‌ಗೆ ಮಹಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಮಹಿಮಾ ಅಗರ್‌ವಾಲ್ ಹಾಗೂ ಲೀಲಾಲಕ್ಷ್ಮಿ ಅವರು ಜಿಲ್ಲಾ ಹಾಗೂ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಮಹಿಮಾ ಅಗರವಾಲ್ 21-19, 21-23, 21-18 ರಲ್ಲಿ ಉತ್ತರಾಪ್ರಕಾಶ ವಿರುದ್ಧವೂ, ಲೀಲಾಲಕ್ಷ್ಮೀ 21-06, 21-10ರಲ್ಲಿ ಆರ್.ವಿ.ಮೇಘನಾ ಮೇಲೂ ಗೆಲುವು ಪಡೆದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ದಿನದ ಇತರ ಪಂದ್ಯಗಳಲ್ಲಿ ಮೇಘನಾ ಕುಲಕರ್ಣಿ 21-19, 21-12ರಲ್ಲಿ ಪಿ.ಹರ್ಷಿತಾ ಮೇಲೂ, ಸಿಂಧು ಭಾರದ್ವಾಜ್ 21-15, 21-13ರಲ್ಲಿ  ಅಶ್ವತಿ ಸತೀಶನ್ ವಿರುದ್ಧವೂ ಜಯ ಪಡೆದರು.ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ  ಫಾಲ್ಗುಣ್ 21-08, 21-13ರಲ್ಲಿ ಆರ್.ಎನ್.ಸೂರಜ್ ಮೇಲೂ, ಆದಿತ್ಯ ಪ್ರಕಾಶ 21-15, 21-8ರಲ್ಲಿ ಪ್ರಭು ದೇಸಾಯಿ ವಿರುದ್ಧವೂ, ಕುಮಾರ ಆದರ್ಶ 21-12, 21-12ರಲ್ಲಿ ರಾಮ ಅರ್ಜುನ ಮೇಲೂ, ಕ್ಯಾಸ್ಟಲಿನೋ ರೋಹನ್ 13-21, 21-14,  21-11ರಲ್ಲಿ ಅಭಿಷೇಕ ಎಲಿಗಾರ ವಿರುದ್ಧವೂ,  ಜಗದೀಶ ಯಾದವ 21-10, 19-11, 21-12ರಲ್ಲಿ ಅಮಿತಕುಮಾರ ಮೇಲೂ, ಜವಾಲಕರ ರಾಜೇಶ  21-04. 21-14ರಲ್ಲಿ ಸಾಹಿಲ್ ವಿರುದ್ಧವೂ,  ಕಮಲ್ ದೀಪಸಿಂಗ್ 21-13, 21-13ರಲ್ಲಿ ಕಾರ್ತಿಕ ಮೇಲೂ,  ವೆಂಕಟೇಶ ಪ್ರಸಾದ  21-19, 21-16ರಲ್ಲಿ  ರಾಮೇಶ್ವರ ಮಾಹಾಪಾತ್ರ ಎದುರೂ ಗೆದ್ದು ಕ್ವಾರ್ಟರ್‌ಗೆ ತಲುಪಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.