ಚೆನ್ನೈ: ಇಂಗ್ಲೆಂಡ್ ತಂಡದ ಆಟಗಾರರು ಕಳೆದ ಆರು ತಿಂಗಳಿನಿಂದ ಕ್ರಿಕೆಟ್ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಕೇವಲ ನಾಲ್ಕು ದಿನ ಮಾತ್ರ ತಮ್ಮ ಮನೆಯಲ್ಲಿ ಇರಲು ಇವರಿಗೆ ಸಾಧ್ಯವಾಗಿದೆ. ಸತತ ಕ್ರಿಕೆಟ್ ಆಡಿ ದಣಿದಿರುವ ಕಾರಣ ಇಂಗ್ಲೆಂಡ್ ತಂಡಕ್ಕೆ ಐರ್ಲೆಂಡ್ ಹಾಗೂ ಬಾಂಗ್ಲಾದೇಶದಂತಹ ತಂಡಗಳ ಎದುರು ಸೋಲು ಎದುರಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಆದರೆ ಅದನ್ನು ಒಪ್ಪಲು ಈ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಸಿದ್ಧರಿಲ್ಲ. ‘ನಿಜ, ನಾವು ತುಂಬಾ ದಿನಗಳಿಂದ ಕ್ರಿಕೆಟ್ ಆಡುತ್ತಿದ್ದೇವೆ. ಆದರೆ ನಮ್ಮ ಪ್ರದರ್ಶನದ ಮೇಲೆ ಅದು ಪರಿಣಾಮ ಬೀರಿಲ್ಲ. ದಣಿವು ಎಂಬುದು ನಮ್ಮ ಮನವನ್ನು ಆವರಿಸಿಲ್ಲ. ನಾವು ಇರುವುದೇ ಕ್ರಿಕೆಟ್ ಆಡಲು’ ಎಂದು ಬುಧವಾರ ಅವರು ಹೇಳಿದರು.

‘ಗುರುವಾರದ ಪಂದ್ಯವನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಕ್ವಾರ್ಟರ್ ಫೈನಲ್ ಹಂತ ತಲುಪುವ ಪೂರ್ಣ ವಿಶ್ವಾಸವಿದೆ. ಈ ಹಿಂದೆ ಇಂತಹ ಸನ್ನಿವೇಶದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹಾಗಾಗಿ ಧೈರ್ಯದಿಂದ ಕಣಕ್ಕಿಳಿಯುತ್ತೇವೆ’ ಎಂದು ಸ್ಟ್ರಾಸ್ ನುಡಿದರು.

ವೆಸ್ಟ್ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ಗಳಾದ ಕ್ರಿಸ್ ಗೇಲ್ ಹಾಗೂ ಕಿರೋನ್ ಪೊಲಾರ್ಡ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಖಂಡಿತ ಇವರಿಬ್ಬರು ಅಪಾಯಕಾರಿ ಬ್ಯಾಟ್ಸ್ಮನ್ಗಳು. ಭರ್ಜರಿ ಸಿಕ್ಸರ್ಗಳನ್ನು ಬಾರಿಸುತ್ತಾರೆ. ಹಾಗೇ, ದೊಡ್ಡ ಹೊಡೆತಗಳಿಗೆ ಮುಂದಾಗಿ ಬೇಗ ಔಟ್ ಆಗುವ ಸಾಧ್ಯತೆಗಳು ಇರುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.