ಗುರುವಾರ , ಮೇ 13, 2021
17 °C

ಖಾಲಿ ಜಾಗ ಅಕ್ರಮ ಹಂಚಿಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಕಸ ಹಾಕಲು ಬಿಟ್ಟಿದ್ದ ಖಾಲಿ ಜಾಗವನ್ನು ಬಿಬಿಎಂಪಿಯು ಮಳಿಗೆ ನಿರ್ಮಾಣಕ್ಕೆ ಅಕ್ರಮವಾಗಿ ಹಂಚಿಕೆ ಮಾಡುತ್ತಿದೆ' ಎಂದು ಬೆಂಗಳೂರು ಹೂವು ಮಾರಾಟಗಾರರ ಸಂಘದ ಉಪಾಧ್ಯಕ್ಷ ಜಿ.ಎಂ.ದಿವಾಕರ್ ಆರೋಪಿಸಿದ್ದಾರೆ.`ಕೆ.ಆರ್.ಮಾರುಕಟ್ಟೆಯ ನಿಯಮದ ಪ್ರಕಾರ 1,310 ಮಳಿಗೆಗಳನ್ನು ನಿರ್ಮಿಸಲು ಮಾತ್ರ ಅವಕಾಶವಿದೆ. ಆದರೆ, ಕಳೆದ 2 ವರ್ಷಗಳಿಂದ ಬಿಬಿಎಂಪಿಯು ಮಾರುಕಟ್ಟೆಯಲ್ಲಿ ಕಸ ಹಾಕಲು ಬಿಟ್ಟಿದ್ದ ಖಾಲಿ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುತ್ತಿದೆ.ಇದರಿಂದ ಕಸ ಹಾಕಲು ಸಮಸ್ಯೆ ಉಂಟಾಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಮಳಿಗೆಗಳ ನಿರ್ಮಾಣ ವಿರೋಧಿಸಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಹೈಕೋರ್ಟ್ ನಿರ್ದೇಶನವನ್ನೂ ಉಲ್ಲಂಘಿಸಿ ಹೊಸ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ' ಎಂದು ದೂರಿದರು.`ಈಗಾಗಲೆ ಅಕ್ರಮವಾಗಿ ಒಂಬತ್ತು ಮಳಿಗೆಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ 25- 30 ಸಾವಿರ ಗ್ರಾಹಕರು ಮಾರುಕಟ್ಟೆಗೆ ಭೇಟಿ ನೀಡುತ್ತಾರೆ. ಖಾಲಿ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸುತ್ತಿರುವುದರಿಂದ ಕಸ ಹಾಕಲು ಸ್ಥಳಾವಕಾಶ ಇಲ್ಲದಂತಾಗಿದೆ. ಸಾರ್ವಜನಿಕರು ಸುಲಭವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ' ಎಂದು ಹೂವಿನ ವ್ಯಾಪಾರಿ ಎಸ್.ಜಿ.ಎಸ್.ಸಲ್ಮಾನ್ ಪ್ರತಿಕ್ರಿಯಿಸಿದರು.ರಾತ್ರೋರಾತ್ರಿ ಮಳಿಗೆ ನಿರ್ಮಾಣ: `ರಾತ್ರಿ ವೇಳೆಯಲ್ಲಿ ಬರುವ ಕಾರ್ಮಿಕರ ಗುಂಪು ರಾತ್ರೋರಾತ್ರಿ ಹೊಸ ಮಳಿಗೆಗಳನ್ನು ನಿರ್ಮಿಸಿ ಹೋಗುತ್ತದೆ. ಕಾನೂನು ಬಾಹಿರವಾಗಿ ನಿರ್ಮಾಣವಾಗುವ ಮಳಿಗೆಗಳ ಬಗ್ಗೆ ಬಿಬಿಎಂಪಿಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ, ಪಾಲಿಕೆಯ ಕಾನೂನು ವಿಭಾಗದ ನಿರ್ದೇಶನದಂತೆ ಹೊಸ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ' ಎಂದು ಸಲ್ಮಾನ್ ದೂರಿದರು.ತೀರ್ಪಿನ ನಂತರ ಮುಂದಿನ ಕ್ರಮ

`ಪಾಲಿಕೆಯ ಹಿಂದಿನ ಆಯುಕ್ತರ ಆದೇಶದಂತೆ ಮಳಿಗೆಗಳ ಹಂಚಿಕೆ ನಡೆದಿದೆ. ಹೊಸ ಮಳಿಗೆ ಹಂಚಿಕೆ ಪ್ರಕರಣವು ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ತೀರ್ಪು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು'

-ಎಲ್.ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.