ಖೇಣಿ ಹುಟ್ಟುಹಬ್ಬದಲ್ಲಿ ಬಾಲ್ಯ ವಿವಾಹ: ಆರೋಪ

7

ಖೇಣಿ ಹುಟ್ಟುಹಬ್ಬದಲ್ಲಿ ಬಾಲ್ಯ ವಿವಾಹ: ಆರೋಪ

Published:
Updated:

ವಿಜಾಪುರ: ಉದ್ಯಮಿ ಅಶೋಕ ಖೇಣಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಇತ್ತೀಚೆಗೆ ಇಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಮೂರು ಬಾಲ್ಯ ವಿವಾಹ ನಡೆದಿವೆ ಎಂದು ಉಜ್ವಲ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ಆರೋಪಿಸಿದ್ದಾರೆ.ಈ ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆ ಇದ್ದು, ಅದನ್ನು ತಡೆಗಟ್ಟಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು, ಸ್ಥಳೀಯ ಅಧಿಕಾರಿಗಳನ್ನು ಕೋರಲಾಗಿತ್ತು. ಆದರೂ, ಮೂವರು ಅಪ್ರಾಪ್ತ ಹೆಣ್ಣು ಮಕ್ಕಳು ಮದುವೆ ನಡೆದವು ಅಂದು ಅವರು ದೂರಿದ್ದಾರೆ.ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಉಪಸ್ಥಿತರಿರಲಿಲ್ಲ. ಮದುವೆಯ ದಿನ ಅವರಿದ್ದು ಮುಂಜಾಗ್ರತೆ ವಹಿಸಿದ್ದರೆ ಈ ಅಪ್ರಾಪ್ತ ಮಕ್ಕಳ ಮದುವೆ ತಡೆಯಬಹುದಿತ್ತು ಎಂದು ಅವರು ಇಲಾಖೆಯ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry