ಗಡವು ಮುಗಿದರೂ ಅಧಿಕಾರ ಬಿಡದ ಹೋಸ್ನಿ

7

ಗಡವು ಮುಗಿದರೂ ಅಧಿಕಾರ ಬಿಡದ ಹೋಸ್ನಿ

Published:
Updated:

ಕೈರೊ ( ಪಿಟಿಐ/ ಐಎಎನ್ ಎಸ್): ಪ್ರತಿಭಟನಾಕಾರರು ವಿಧಿಸಿದ್ದ ಶುಕ್ರವಾರದ ಗಡವು ಮೀರಿದರೂ ಈಜಿಪ್ಟ್ ಅಧ್ಯಕ್ಷ  ಹೋಸ್ನಿ ಮುಬಾರಕ್  ಅವರು ಪದತ್ಯಾಗ ಮಾಡಲು ನಿರಾಕರಿಸಿದ್ದಾರೆ.

~ಈಗ ಅಧಿಕಾರ ಬಿಟ್ಟುಕೊಟ್ಟರೆ, ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ~ ಎಂದು ಹೇಳಿರುವ ಹೋಸ್ನಿ ಅವರು, ~ತಕ್ಷಣ ನಾನು ಅಧಿಕಾರ ಬಿಡಲಾರೆ~ ಎಂದಿದ್ದಾರೆ.

ಎಬಿಸಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಹೋಸ್ನಿ ಅವರು, ~ನನಗೆ ಈ ಅಧಿಕಾರ ಸಾಕಾಗಿ ಹೋಗಿದೆ. ಆದರೆ ಈ ಹಂತದಲ್ಲಿ ನಾನು ಅಧಿಕಾರ ತ್ಯಜಿಸಿದರೆ ದೇಶದಲ್ಲಿ ಅರಾಜಕತೆ ಮೂಡುತ್ತದೆ. ಆದ ಕಾರಣ ಸದ್ಯಕ್ಕೆ ಅಧಿಕಾರ ಬಿಟ್ಟು ಕೊಡಲಾರೆ~ ಎಂದು ಸ್ಪಷ್ಷಪಡಿಸಿದ್ದಾರೆ.


~ನನ್ನ ಬಗ್ಗೆ ಯಾರೂ ಏನೇ ಹೇಳಲಿ, ಅದು ಲೆಕ್ಕಕ್ಕಿಲ್ಲ. ನಾನು ದೇಶ ಬಿಟ್ಟು ಓಡಿ ಹೋಗುವುದಿಲ್ಲ.  ಅಲ್ಲದೇ ಸತ್ತರೆ ಇಲ್ಲೇ ಸಾಯುವೆ. ಆದರೆ ಸದ್ಯದ ನನ್ನ ಕಾಳಜಿ ನನ್ನ ದೇಶ~  ಎಂದೂ ಅವರು ಹೇಳಿದ್ದಾರೆ.

ಜನತೆಯಲ್ಲಿ ಮೂಡಿರುವ ~ಅಧ್ಯಕ್ಷರು ಕೆಳಗಿಳಿಯುವ ಮೊದಲು ತಮ್ಮ ಮಗನನ್ನೇ ಗದ್ದುಗೆಗೆ ಏರಸಲಿದ್ದಾರೆ~ ಎಂಬ ಅನುಮಾನಗಳನ್ನು ಅವರು ತಳ್ಳಿ ಹಾಕಿದ್ದಾರೆ.

ಕಳೆದ 30 ವರ್ಷಗಳಿಂದ ಅಧಿಕಾರದಲ್ಲಿರುವ 82 ವರ್ಷದ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಪದಚ್ಯುತಗೊಳಿಸಲು ನಾಗರಿಕರು ನಡೆಸುತ್ತಿರುವ ಹೋರಾಟ ಶುಕ್ರವಾರ ಹನ್ನೊಂದನೇ ದಿನಕ್ಕೆ ಕಾಲಿರಿಸಿದೆ.  ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪರ ಮತ್ತು ವಿರೋಧದ ಪ್ರತಿಭಟನೆಗಳ ಸಂದರ್ಭದಲ್ಲಿನ ಗಲಭೆ, ಹಿಂಸಾಚಾರಗಳಲ್ಲಿ ಇದುವರೆಗೆ ಒಟ್ಟು ಎಂಟು ಜನರು ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry