ಭಾನುವಾರ, ಮೇ 9, 2021
19 °C

ಗಡ್‌ಚಿರೋಲಿ: 10 ಜನರ ಅಪಹರಣ:ನಕ್ಸಲರಿಂದ ಇಬ್ಬರು ಆದಿವಾಸಿಗಳ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡ್‌ಚಿರೋಲಿ (ಪಿಟಿಐ): ಮಹಾರಾಷ್ಟ್ರದ ಪೂರ್ವಭಾಗದ ಮಾರ್ಕೆಗಾಂವ್‌ಗೆ ಬೆಳಿಗ್ಗೆ ದಾಳಿ ಮಾಡಿದ ನಕ್ಸಲರು ಇಬ್ಬರು ಆದಿವಾಸಿಗಳನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಹತ್ಯೆ ಮಾಡಿ ಸುಮಾರು 12 ಜನರನ್ನು ಅಪಹರಿಸಿದ್ದಾರೆ.ಸಶಸ್ತ್ರ ನಕ್ಸಲೀಯರ ಗುಂಪೊಂದು ಮಾರ್ಕೆಗಾಂವ್‌ಗೆ ದಾಳಿ ಮಾಡಿ ಗ್ರಾಮಸ್ಥರಿಗೆ ಒಂದೆಡೆ ಸೇರುವಂತೆ ಆದೇಶಿಸಿತು. ನಂತರ ದೇವಸೆ ಉಸಂಡಿ ಮತ್ತು ರಾಮ್ ನರೋಟೆ ಎಂಬಿಬ್ಬರನ್ನು ಪಕ್ಕಕ್ಕೆ ಕರೆದು ಎಲ್ಲರೆದುರೇ ಹರಿತವಾದ ಆಯುಧದಿಂದ ಗಂಟಲನ್ನು ಕತ್ತರಿಸಿ ಹತ್ಯೆ ಮಾಡಿದರು.ನಂತರ ನಕ್ಸಲರು 10ರಿಂದ 12 ಜನ ಆದಿವಾಸಿಗಳನ್ನು ಅಪಹರಿಸಿ ಪಕ್ಕದ ಕಾಡಿನಲ್ಲಿ ಮಾಯವಾದರು. ಇಬ್ಬರ ಹತ್ಯೆಯ ಕಾರಣ ಗೊತ್ತಾಗಲಿಲ್ಲ. ಈ ಇಬ್ಬರು ಪೊಲೀಸ್ ಮಾಹಿತಿದಾರರು ಎಂದು ಶಂಕಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸ್ಥಳಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಲಾಗಿದ್ದು, ಶೋಧನಾ ಕಾರ್ಯ ಮುಂದುವರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.