ಗುರುವಾರ , ಏಪ್ರಿಲ್ 15, 2021
31 °C

ಗಣಪತರಾವ್ ಮಹಾರಾಜರ ಬೋಧನೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಅಧ್ಯಾತ್ಮ ಗುರು ಗಣಪತರಾವ್ ಮಹಾರಾಜರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನ ಗುರಿ ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು~ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದಜೀ ಹೇಳಿದರು.ವಿಜಾಪುರ ಜಿಲ್ಲೆಯ ಕನ್ನೂರಿನ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರ ಸತ್ಸಂಗ ಸಮಿತಿಯು ಬಸವನಗುಡಿಯ ಗೋಖಲೆ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗಣಪತರಾವ್ ಮಹಾರಾಜರ `ಸುಲಭ ಆತ್ಮಜ್ಞಾನ~ ಪುಸ್ತಕದ ಇಂಗ್ಲಿಷ್ ಅನುವಾದ `ಫ್ಲೈಟ್ ಟು ಸೆಲ್ಫ್  ರಿಯಲೈಸೇಷನ್~ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಹಿರಿಯ ವಿದ್ವಾಂಸ ಸುಬ್ರಾಯ ಶರ್ಮ ಅವರು ಗಣಪತರಾವ್ ಮಹಾರಾಜರೊಡನೆ ತಮಗಿದ್ದ ಒಡನಾಟದ ಬಗ್ಗೆ ಮಾತನಾಡಿದರು. `ಗುರುಗಳ ಸಾಮಾಜಿಕ ಕಳಕಳಿ ಹಾಗೂ ಗುರುಮಹಿಮೆ ಅಪಾರವಾದುದು. ಗಣಪತರಾವ್ ಮಹಾರಾಜರ ಗ್ರಂಥಗಳು ಸಕ್ಕರೆಯಂತೆ ಸವಿಯಾಗಿವೆ~ ಎಂದರು.ಕಾರ್ಯಕ್ರಮದಲ್ಲಿ ಗಣಪತರಾವ್ ಮಹಾರಾಜರ ಶಿಷ್ಯ ಶ್ರೀಕೃಷ್ಣ ಸಂಪಗಾಂವ್‌ಕರ ಅವರು ಗುರುಮಹಿಮೆಯನ್ನು ವಿವರಿಸಿದರು. ನಂತರ ಗಣಪತರಾವ್ ಮಹಾರಾಜರ ಪ್ರಾರ್ಥನಾ ಗೀತೆಗಳನ್ನು ಹಾಡಲಾಯಿತು.

ಪುಸ್ತಕದ ಅನುವಾದಕ ಡಾ.ವಿ.ಆರ್.ದಾನಿ, ವಿದ್ವಾಂಸರಾದ ಸುಬ್ಬರಾಯ, ಅಧ್ಯಾತ್ಮ ಭಂಡಾರ ಶಾಂತಿ ಕುಟೀರದ ಅಧ್ಯಕ್ಷ ಕನ್ನೂರು ಎಸ್.ಎಸ್.ವೈದ್ಯ, ಕೆ.ಅನಂತರಾಮು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.