ಗುರುವಾರ , ಮಾರ್ಚ್ 4, 2021
20 °C

ಗಣರಾಜ್ಯೋತ್ಸವ: ವಿವಿಧೆಡೆ ಸಂಭ್ರಮದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣರಾಜ್ಯೋತ್ಸವ: ವಿವಿಧೆಡೆ ಸಂಭ್ರಮದ ಆಚರಣೆ

ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕೋಟೆ ಬಯಲಿನಲ್ಲಿ ಅದ್ದೂರಿಯಾಗಿ ಭಾರತದ 67ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.ತಹಶೀಲ್ದಾರ್‌ ಹಾಗೂ ಆಚರಣಾ ಸಮಿತಿಯ ಅಧ್ಯಕ್ಷ ಸಿ.ಎಚ್‌.ಶಿವಕುಮಾರ್‌, ರಾಷ್ಟ್ರಧ್ವಜದ ಕಂಬಕ್ಕೆ ಪೂಜೆ ಸಲ್ಲಿಸಿ, ದ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನ ವೀಕ್ಷಿಸಿ, ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ತಹಶೀಲ್ದಾರ್‌ ಸಿ.ಎಚ್‌.ಶಿವಕುಮಾರ್‌ ಮಾತನಾಡಿ, ರಾಷ್ಟ್ರ ಭಕ್ತಿ ಬೆಳೆಸಿಕೊಳ್ಳುವುದು ಪ್ರಜೆಗಳಾದ ನಮ್ಮ ಆದ್ಯ ಕರ್ತವ್ಯ ಎಂದರು.ಸರ್ಕಲ್‌ ಇನ್ಸ್‌ಪೆಕ್ಟರ್‌ ನಂದೀಶ್‌, ಬಿಇಒ ರಂಗಸ್ವಾಮಿ, ತಾ.ಪಂ,ಇಒ ಜಯರಂಗ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ.ರಾಮು ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿದರು.ಜಿಲ್ಲಾ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಕೆಂಪೇಗೌಡ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜಪ್ಪ,  ಸಬ್‌ ಇನ್ಸ್‌ಪೆಕ್ಟರ್‌ ಎನ್‌.ಸುರೇಶ್‌,ಅನ್ಸರ್‌ ಪಾಷಾ, ಮಹಮದ್‌ ಇನಾಯತ್‌ ಉಲ್ಲಾ, ಸುರೇಶ್‌, ಅಶ್ವಥ ನಾರಾಯಣ ಶೆಟ್ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೈಲ.ಪಿ ವೇದಿಕೆಯಲ್ಲಿದ್ದು ಬಹುಮಾನ ವಿತರಿಸಿದರು.ಶಾಲಾ ಮಕ್ಕಳಿಂದ ಆಕರ್ಷಕ ಪತ ಸಂಚಲನ ನಡೆಯಿತು. ಆಹಾರ ಇಲಾಖೆಯ ಶಿರಸ್ತೆದಾರ್‌ ಸದಾಶಿವಯ್ಯ ಮತ್ತು ಹಿಮಾಕರ್‌ ತಂಡದವರ ಪಟ್ಟಣದ ಶಾಲೆಗಳ 6 ಸಾವಿರ ಮಕ್ಕಳಿಗೆ ಉಪಹಾರ ವಿತರಿಸಿದರು. ಸಬ್‌ಇನ್ಸ್‌ಪೆಕ್ಟರ್‌ ಎನ್‌,ಸುರೇಶ್‌ ತಂಡದವರಿಂದ ಮೊದಲು ತ್ರಿವರ್ಣಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ವಿನ್ನರ್ಸ್‌ ಶಾಲೆಯ ಮಕ್ಕಳು ಭಾರಿ ಉದ್ದದ ತ್ರಿವರ್ಣ ಧ್ವಜ ಹಿಡಿದು ವಂದೇಮಾತರಂ ಗೀತೆಗೆ ನರ್ತಿಸಿದರು.ಚನ್ನಪಟ್ಟಣ ವರದಿ: ಪ್ರಪಂಚದಲ್ಲೆ ಅತಿ ದೊಡ್ಡ ಗಣತಂತ್ರ ವ್ಯವಸ್ಥೆಯನ್ನು ಹೊಂದಿರುವ ಭಾರತ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದು ಇತಿಹಾಸ ಉಪನ್ಯಾಸಕ ಬಿ.ಎಲ್. ನಾಗರಾಜು ಅಭಿಪ್ರಾಯಪಟ್ಟರು. ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಮಂಗಳವಾರ ಏರ್ಪಡಿಸಿದ್ದ 67ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ದೇಶದಲ್ಲಿ ಅನೇಕ ಜಾತಿ, ಮತ, ಪಂಥ, ಭಾಷೆ, ಪ್ರಾಂತ್ಯಗಳಿದ್ದರೂ ಎಲ್ಲರೂ ಏಕತೆಯಿಂದ ಬಾಳುತ್ತಿರುವುದು ದೇಶದ ಹಿರಿಮೆ ಎಂದರು.ತಹಶೀಲ್ದಾರ್ ರಮೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ನಮ್ಮ ರಾಷ್ಟ್ರ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯನ್ನು ರೂಢಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ನಾವು ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ ಎಂದರು. ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ದಿನೇಶ್ ಸುದರ್ಶನ್, ಡಿ.ಪುಟ್ಟಸ್ವಾಮಿಗೌಡ, ಹೊನ್ನಾಯ್ಕನಹಳ್ಳಿ ಚನ್ನಪ್ಪ, ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಕಬಡ್ಡಿ ಪಟುಗಳನ್ನು ಸನ್ಮಾನಿಸಲಾಯಿತು.ನಗರಸಭಾ ಅಧ್ಯಕ್ಷೆ ಶ್ವೇತಾ ಕೃಷ್ಣ, ಉಪಾಧ್ಯಕ್ಷ ಲಿಯಾಖತ್, ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ವಿ.ರಾಮು, ನಂದೀಶ್, ರಮೇಶ್, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ನಾರಾಯಣಸ್ವಾಮಿ, ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಅಕ್ಷರ ದಾಸೋಹದ ವೀರಭದ್ರಯ್ಯ, ಪ್ರಾಂಶುಪಾಲ ಸಿದ್ದರಾಜೇಗೌಡ, ನಗರಸಭಾ ಆಯುಕ್ತ ಜಗದೀಶ್ ಮುಂತಾದವರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ನಗರಸಭಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು. ನಂತರ ಶಾಲಾಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.