ಶುಕ್ರವಾರ, ಮೇ 14, 2021
29 °C

ಗಮನ ಸೆಳೆದ ಜಾನುವಾರು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ಜಗದ್ಗುರು ತೋಂಟ ದಾರ್ಯ ಮಠದ ಜಾತ್ರಾ ಮಹೋತ್ಸ ವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ತಳಿಗಳ ಜಾನುವಾರು ಪ್ರದರ್ಶನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾ ಯಿತು.  ಜಾನುವಾರು ಪ್ರದರ್ಶನದಲ್ಲಿ ಗದಗ- ಬೆಟಗೇರಿ, ಅಣ್ಣಿಗೇರಿ, ಹೊಂಬಳ, ಕುರ್ತಕೋಟಿ, ನರಸಾಪುರ, ಬಳಗಾ ನೂರ, ನೀರಲಗಿ, ಹುಯಿಲಗೋಳ, ಸೊರಟೂರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಜಾನುವಾರು ಗಳು ಪಾಲ್ಗೊಂಡಿದ್ದವು. ಜವಾರಿ, ಜರ್ಸಿ, ಮಾಸ,  ಎಚ್.ಎಫ್ ಸೇರಿದಂತೆ ಇತರ ತಳಿಗಳ ಆಕಳು, ಮಣಕಗಳು ಹಾಗೂ ಹೋರಿಗಳು ಭಾಗವಹಿಸಿದ್ದವು.ಜಾತ್ರೆಗೆ ಬಂದ ರೈತರು ಜಾನುವಾರು ಪ್ರದರ್ಶನ ನೋಡಿ ವಿವಿಧ ತಳಿಯ ಹೋರಿ, ಆಕಳುಗಳ ಮಾಹಿತಿ ಪಡೆದರು. ಜಾನುವಾರು ಸಾಕಾಣಿಕೆ, ಗರ್ಭಧಾ ರಣೆ, ರೋಗ ನಿರೋಧಕ ಚಿಕಿತ್ಸೆ ಬಗ್ಗೆ ಸಾಕಷ್ಟು ಅರಿವು ಪಡೆದರು.ಬಹುಮಾನ: ಜಗದ್ಗುರು ತೋಂಟ ದಾರ್ಯ ಮಠದ ಜಾತ್ರಾ ಮಹೋತ್ಸವ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯ ಸೇವೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನುವಾರು ಪ್ರದರ್ಶನ ದಲ್ಲಿ ಬಹುಮಾನ ಪಡೆದ ಜಾನು ವಾರುಗಳ ಮಾಲೀಕರು ಹೆಸರುಗಳು ಈ ಕೆಳಗಿನಂತಿವೆ.ಎಚ್.ಎಫ್. ಆಕಳುಗಳ ವಿಭಾಗ: ಬೆಟಗೇರಿಯ ಶಿವಪ್ಪ ಬೆಳಗಲಿ-1, ಗದುಗಿನ ಮಂಗಳೇಶ ಮೈಲಾರಗೌಡ ಬಾವಿ-2, ನೀರಲಗಿಯ ಅಭಿಷೇಕ ಮೇಟಿ-3. ಎಚ್.ಎಫ್. ಮಣಕಗಳ ವಿಭಾಗ: ಗದುಗಿನ ಸುರೇಶ ಗಿಡ್ಡಹನು ಮಣ್ಣವರ-1, ಗದುಗಿನ ಹನು ಮಂತಪ್ಪ ಗಂಗಪ್ಪನವರ-2, ಗೊರಚಿಕ್ಕಣ್ಣ ವರ-3.ಎಚ್.ಎಫ್. ಕರುಗಳ ವಿಭಾಗ: ಗದುಗಿನ ಬಸವರಾಜ ಅಂಗಡಿ-1, ಗದುಗಿನ ದೇವಕ್ಕ ಕಡಿವಾಳ-2

ಜರ್ಸಿ ಆಕಳುಗಳ ವಿಭಾಗ: ಬೆಟ ಗೇರಿಯ ಶಿವಪ್ಪ ಬೆಳಗಲಿ-1, ಗದುಗಿನ ಸಿದ್ದಪ್ಪ ಪರಪ್ಪ ಹರ್ತಿ- 2, ಗದುಗಿನ ಶಿವಪ್ಪ ಬಸಪ್ಪ ಹೊಂಬಳ-3.ಜರ್ಸಿ ಮಣಕಗಳ ವಿಭಾಗ: ಗದುಗಿನ ರಾಘವೇಂದ್ರ ಸೊರಟೂರ-1, ಗದು ಗಿನ ಶಿವಾನಂದ ಅಕ್ಕಮ್ಮನವರ-3.

ಜರ್ಸಿ ಕರುಗಳ ವಿಭಾಗ: ಗದುಗಿನ ರವಿಚಂದ್ರ ಸೊರಟೂರ-1, ಗದುಗಿನ ಪ್ರಶಾಂತ ಹೊಂಬಳ-2, ಗದುಗಿನ ಜಗದೀಶ ಅಂಗಡಿ-3.ಸ್ಥಳೀಯ ಆಕಗಳುಗಳ ವಿಭಾಗ: ಗದುಗಿನ ಬಸನಗೌಡ ಹಿರೇಗೌಡರ-1, ಗದುಗಿನ ನಿಂಗನಗೌಡ ಮರಿಗೌಡರ, ಬೆಟಗೇರಿಯ ಶ್ರೀಕಾಂತ ಗುರಣ್ಣ ವರ-3. ಸ್ಥಳೀಯ ಮಣಕಗಳ ವಿಭಾಗ: ಗದುಗಿನ ಈರಪ್ಪ ಪಲ್ಲೇದ-1, ಮಲ್ಲೇ ಶಪ್ಪ ಸಣ್ಣಲಿಂಗಪ್ಪ ಚಿಕ್ಕಣ್ಣವರ-2, ಚಂದ್ರಶೇಖರ ರೇವಡಿಹಾಳ-3.ಸ್ಥಳೀಯ ಕರುಗಳ ವಿಭಾಗ: ಗದುಗಿನ ಡಿ.ಕೆ. ಸಿಂಧೆ-1, ಬೆಟಗೇರಿಯ ಮುತ್ತಪ್ಪ ಕಟ್ಟಿಮನಿ-2, ಡಿ.ಕೆ. ಸಿಂಧೆ-3.

ಜೋಡಿ ಎತ್ತುಗಳ ವಿಭಾಗ: ಗದುಗಿನ ಕರಿಬಸಯ್ಯ ನಾಲ್ವತ್ತವಾಡ ಮಠ-1, ಗದುಗಿನ ಮಲ್ಲಿಕಾರ್ಜುನ ಅಣ್ಣಿಗೇರಿ- 2, ಗದುಗಿನ ಮಹಾ ದೇವಪ್ಪ ಹೊಂಬಳ-3.ಹೋರಿಗಳ ವಿಭಾಗ: ಗದುಗಿನ ಮಲ್ಲಿ ಕಾರ್ಜುನ ಕಬ್ಬನೂರ-1, ಗದುಗಿನ ನಾರಾಯಣ ಸೊರಟೂರ-2, ಗದುಗಿನ ಮಹೇಶ ಹೊಂಬಳ-3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.