ಗುರುವಾರ , ಮಾರ್ಚ್ 4, 2021
20 °C

ಗಮನ ಸೆಳೆದ ಯಾತ್ರೆಯ ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನ ಸೆಳೆದ ಯಾತ್ರೆಯ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಶಿವಶಕ್ತಿ ಸೇವಾ ಮಂಡಲ್‌ ವತಿಯಿಂದ ನಗರದಲ್ಲಿ ಭಾನುವಾರ ಅಮರನಾಥ ಕ್ಷೇತ್ರದ ಕುರಿತು ಛಾಯಾಚಿತ್ರ ಪ್ರದರ್ಶನ ಹಾಗೂ  ಅಮರನಾಥ ಯಾತ್ರಿಗಳಿಗೆ ಉಚಿತ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಅಮರನಾಥ ಕ್ಷೇತ್ರದ ಕುರಿತ 60 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರದರ್ಶನ ಉದ್ಘಾಟಿಸಿದ ಸಚಿವ ದಿನೇಶ್‌ ಗುಂಡೂರಾವ್‌, ‘ಛಾಯಾಚಿತ್ರಗಳು ಅತ್ಯಂತ ಆಕರ್ಷಣೀಯವಾಗಿವೆ. ಛಾಯಾಚಿತ್ರಗಳನ್ನು ವೀಕ್ಷಿಸಿದರೆ ಅಮರನಾಥ ಕ್ಷೇತ್ರದ ಯಾತ್ರೆ ಕೈಗೊಂಡ ಅನುಭವವಾಗುತ್ತದೆ’ ಎಂದರು.ಸಚಿವ ಆರ್‌.ರೋಷನ್‌ ಬೇಗ್‌ ಮಾತನಾಡಿ, ‘ಮುಸ್ಲಿಮರಿಗೆ ಹಜ್‌ ಯಾತ್ರೆಯಂತೆ ಹಿಂದೂಗಳಿಗೆ ಅಮರನಾಥ ಯಾತ್ರೆ ಪವಿತ್ರವಾದುದ್ದು. ಅಮರನಾಥ ಯಾತ್ರೆ ಕೈಗೊಳ್ಳುವವರಿಗೆ ಮಾಹಿತಿ ನೀಡಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕೆಲಸ’ ಎಂದು ಹೇಳಿದರು.ಮಂಡಲ್‌ನ ನಗರ ಶಾಖೆ ಅಧ್ಯಕ್ಷ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಮಾತನಾಡಿ, ‘ಮೊದಲ ಬಾರಿಗೆ ಅಮರನಾಥ ಯಾತ್ರೆ ಕೈಗೊಳ್ಳುವವರಿಗೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗೊತ್ತಿರುವುದಿಲ್ಲ. ಹೀಗಾಗಿ ಯಾತ್ರಿಗಳಿಗೆ ಮಾಹಿತಿ ನೀಡಲು ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.