ಶುಕ್ರವಾರ, ಮೇ 7, 2021
20 °C

ಗರ್ಭಕೋಶ, ಸ್ತನ ಕ್ಯಾನ್ಸರ್ ಎಚ್ಚರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾಮಾನ್ಯವಾಗಿ ಹರಡುವ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು ಎಂದು ಡಾ.ಶಾರದಾ ಶೆಟ್ಟಿ ಹೇಳಿದರು.ನಗರದಲ್ಲಿ ಶುಕ್ರವಾರ ಅಕ್ಕಮಹಾದೇವಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ವಿಷಯ ಮಂಡಿಸಿ ಮಾತನಾಡಿದರು.`ಗ್ರಾಮೀಣ ಮಹಿಳೆಯರಲ್ಲಿ ಈಗಲೂ ಮೂಢನಂಬಿಕೆಗಳು ಇವೆ. ಗರ್ಭಿಣಿ ಮತ್ತು ಬಾಣಂತಿಯರನ್ನು ಹಳ್ಳಿಗಳಲ್ಲಿ ಈಗಲೂ ಸರಿಯಾಗಿ ಉಪಚರಿಸುವುದಿಲ್ಲ. ಹೆರಿಗೆಯ ಪೂರ್ವ ದಿನಗಳು ಅತ್ಯಂತ ಸೂಕ್ಷ್ಮವಾಗಿದ್ದು, ನಾನಾ ರೋಗಗಳು ಹರಡುವ ಸಂಭವ ಇರುತ್ತವೆ. ಅಲ್ಲದೇ ಬಾಣಂತಿಯರಿಗೆ ಸರಿಯಾಗಿ ಆಹಾರ ನೀಡುವುದಿಲ್ಲ. ಬಾಣಂತಿಯರು ಬೇಕಾಬಿಟ್ಟಿ ಆಹಾರ ಸೇವಿಸಿದರೆ ಮಗುವಿಗೆ ಒಳ್ಳೆಯದಲ್ಲ ಎಂಬುದಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಹೇಳುತ್ತಾರೆ. ಇದು ನಿಜಕ್ಕೂ ಖೇದಕರ ಸಂಗತಿ.ಬಾಣಂತಿಗೆ ಕನಿಷ್ಠ 1 ಸಾವಿರ ಕ್ಯಾಲೋರಿಯಷ್ಟು ಪೌಷ್ಟಿಕಾಂಶ ಇರುವ ಆಹಾರದ ಸೇವನೆ ಅಗತ್ಯವಿದೆ. ನಮ್ಮಲ್ಲಿ ಪೌಷ್ಟಿಕಾಂಶ ಆಹಾರ ಕೊರತೆಯಿಂದಾಗಿ ಅನೇಕ ಬಾಣಂತಿ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ತಾಯಿ-ಮಗುವಿನ ಆರೋಗ್ಯಕ್ಕೆ ಉತ್ತಮ ಆಹಾರ ಆವಶ್ಯ' ಎಂಬುದನ್ನು ಅರಿಯಬೇಕು ಎಂದರು.ಎದೆ ಹಾಲುಣಿಸದ ಮಹಿಳೆಯರಲ್ಲಿ, ಮದುವೆ ಆಗದ ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ದೇಹ ಶ್ರಮ ಇಲ್ಲದ ಗೃಹಿಣಿಯರಲ್ಲಿ ಗರ್ಭಕೋಶ ಕ್ಯಾನ್ಸರ್ ಕಂಡುಬರುತ್ತಿದೆ. ರೋಗ ತೀವ್ರತೆ ಹೆಚ್ಚಾದ ಮೇಲೆ ಚಿಕಿತ್ಸೆಗಾಗಿ ವೈದ್ಯರಲ್ಲಿ ಬರುತ್ತಾರೆ. ಆದರೆ, ಚಿಕಿತ್ಸೆ ನೀಡಿದರೂ ಫಲಿತಾಂಶ ನಿರಾಶಾದಾಯಕವಾಗಿರುತ್ತದೆ. ರೋಗ ಲಕ್ಷಣ ಕಂಡ ತಕ್ಷಣ ವೈದ್ಯರನ್ನು ಕಾಣುವ ಪರಿಪಾಠವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವಿನೋದಾ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಗುಂಡಿ ಪುಷ್ಪಾ ಸಿದ್ದೇಶ್, ಮಲ್ಲಮ್ಮ, ಪುಷ್ಪಾ ಶಂಕರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.