ಶನಿವಾರ, ಏಪ್ರಿಲ್ 17, 2021
33 °C

ಗರ್ವಾಲೆ ಕಲಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಭಾರತೀಯ ವಿದ್ಯಾಭವನ, ಮೈಸೂರು ಮತ್ತು ಮಡಿಕೇರಿ ವಿದ್ಯಾಭವನಗಳ ಸಹಯೋಗದಲ್ಲಿ ಕೊಡಗಿನಲ್ಲಿ ಮಾರ್ಚ್ 18ರಿಂದ ಮೂರು ದಿನಗಳ ಕಾಲ ‘ಗರ್ವಾಲೆ ಭವನೋತ್ಸವ 2011’ ಎಂಬ ವಿಶಿಷ್ಟ ಸಾಂಸ್ಕೃತಿಕ ಉತ್ಸವ ಏರ್ಪಡಿಸಿದೆ. ಇದರ ಅಂಗವಾಗಿ ಗರ್ವಾಲೆಯ ದಟ್ಟ ಕಾಡಿನಲ್ಲಿ ‘ಗರ್ವಾಲೆ ಭೂವಿನ್ಯಾಸ ರಚನೆ’ ಎಂಬ ವಸ್ತು ಆಧರಿಸಿದ ಮೂರು ದಿನಗಳ ಕಲಾ ಶಿಬಿರ ನಡೆಯಲಿದೆ.ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಮತ್ತು ನೆರೆ ರಾಜ್ಯಗಳ 25 ಚಿತ್ರ ಕಲಾವಿದರು ಭಾಗವಹಿಸುವರು. ವಿದ್ಯಾಭವನದ ಕಾರ್ಯಕ್ರಮ ನಿರ್ವಾಹಕರಾದ ಎಚ್. ಎನ್. ಸುರೇಶ್ ಶಿಬಿರದ ನಿರ್ದೇಶಕರು. ಇದೇ ಸಂದರ್ಭದಲ್ಲಿ ದರ್ಬಾರಿ ಸೇಥ್ ಸ್ಮರಣಾರ್ಥ ದತ್ತಿ ಉಪನ್ಯಾಸ ಏರ್ಪಡಿಸಲಾಗಿದೆ. ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಭವನೋತ್ಸವ ಉದ್ಘಾಟಿಸಿ ದತ್ತಿ ಉಪನ್ಯಾಸ ನೀಡುವರು. ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ, ಅಧ್ಯಕ್ಷ ಎನ್. ರಾಮಾನುಜ, ಮೈಸೂರು ಮತ್ತು ಮಡಿಕೇರಿ ಭವನಗಳ ಅಧ್ಯಕ್ಷರಾದ ಎ.ವಿ. ನರಸಿಂಹ ಮೂರ್ತಿ, ಕೆ.ಪಿ. ಉತ್ತಪ್ಪ ಅತಿಥಿಗಳು.ಕಲಾ ಶಿಬಿರದ ಉದ್ಘಾಟನೆಯ ನಂತರ ಗರ್ವಾಲೆಯ ಶಾಲಾ ಮಕ್ಕಳಿಂದ ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ ಇರುತ್ತದೆ. ಆ ದಿನ ಸಂಜೆ ಅಪರಂಜಿ-ಕೊರವಂಜಿ ತಂಡದಿಂದ ಹಾಸ್ಯ ಸಂಜೆ ನಡೆಯಲಿದೆ. ಶನಿವಾರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಮತ್ತು ಅಮೆರಿಕನ್ ಕಾರ್ನರ್ ವತಿಯಿಂದ ಚಲನಚಿತ್ರ ಪ್ರದರ್ಶನ.ಭಾನುವಾರ ಸಮಾರೋಪ ಸಮಾರಂಭ. ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ. ಪ್ರಕೃತಿಯ ಮಡಿಲಲ್ಲಿ ನಡೆಯುವ ಈ ಭವನೋತ್ಸವದಲ್ಲಿ ಭಾಗವಹಿಸುವುದು ವಿಭಿನ್ನ ಅನುಭವ ನೀಡಲಿದೆ. ಕಲಾ ಶಿಬಿರ ವೀಕ್ಷಿಸಲು ಆಸಕ್ತರು ಮಡಿಕೇರಿಯಿಂದ, ಸುಂಠಿಕೊಪ್ಪ -ಮಾದಪುರ ಮೂಲಕ ಅಥವಾ ಮೈಸೂರಿನಿಂದ ಕುಶಾಲನಗರ, ಸೋಮವಾರಪೇಟೆ ಮೂಲಕ ತಲುಪಬಹುದು. ವಿವರಗಳಿಗೆ ಕೊಡಗು ವಿದ್ಯಾಭವನದ ಗೌರವ ಕಾರ್ಯದರ್ಶಿ ಜಿ. ಬಾಲಾಜಿ ಕಶ್ಯಪ್ ಅವರನ್ನು 98458 31683 ಮೂಲಕ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.