ಬುಧವಾರ, ಜೂನ್ 23, 2021
30 °C

ಗಾಂಜಾ ಮಾರಾಟ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಆಂಧ್ರ ಪ್ರದೇಶದ ಗಡಿ ಗ್ರಾಮಗಳಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಚಳ್ಳಕೆರೆ ಪೊಲೀಸರು ಭೇದಿಸಿದ್ದಾರೆ. ಇದನ್ನು ಮೈಸೂರಿನ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಬೊಮ್ಮನಹಾಳ್ ರಸ್ತೆಯ ರಾಣಿ ತೋಟದಲ್ಲಿ ವಾಸವಿರುವ ವೆಲ್ಡಿಂಗ್ ಕೆಲಸಗಾರ ಮೌಲಾಸಾಬ್ (27), ಆಟೋ ಚಾಲಕರಾದ ದಾದಾಪೀರ್ (19), ದಾದಾ ಖಲಂದರ್ (20), ವೆಲ್ಡಿಂಗ್ ಕೆಲಸಗಾರ ವಾಹೀದ್ (26) ಅವರನ್ನು ಬಂಧಿಸಲಾಗಿದೆ.ಆರೋಪಿಗಳಿಂದ ಮೂರು ಲಗೇಜ್ ಬ್ಯಾಗ್‌ಗಳಲ್ಲಿದ್ದ ರೂ.54 ಸಾವಿರ ಮೌಲ್ಯದ 27 ಕೆ.ಜಿ. ತೂಕದ ಒಣಗಿದ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಜಿ. ಕ್ಯಾತನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಗುರುವಾರ ಬೆಳಗಿನ ಜಾವ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಳ್ಳಕೆರೆಗೆ ಆಗಮಿಸಿದ್ದ ಆರೋಪಿಗಳನ್ನು ನೆಹರು ವೃತ್ತದಲ್ಲಿ ಮೈಸೂರು ಬಸ್‌ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.