ಸೋಮವಾರ, ಜೂನ್ 21, 2021
29 °C

ಗಾಂಧಿಯೊಂದಿಗೆ ಒಬ್ಬ ನಾಸ್ತಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿಯೊಂದಿಗೆ ಒಬ್ಬ ನಾಸ್ತಿಕ

ಲೇ: ಗೋರಾ

ಕನ್ನಡಕ್ಕೆ: ವೆಂಕಟೇಶ ಮಾಚಕನೂರ

ಪು: 76; ಬೆ: ರೂ. 30

ಪ್ರ: ಲೋಹಿಯಾ ಪ್ರಕಾಶನ

‘ಕ್ಷಿತಿಜ’, ಕಪ್ಪಗಲ್ಲು ರಸ್ತೆ,

ಗಾಂಧಿನಗರ,

ಬಳ್ಳಾರಿ– 583103ಗಾಂಧಿ ಅವರ ಅನುಯಾಯಿ ಗೋಪರಾಜು ರಾಮಚಂದ್ರ ರಾವ್ (1902--–1975) ಒಡಿಶಾದವರು. ನಾಸ್ತಿಕರು. ಅವರು ಕೃಷ್ಣಾ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಜಗತ್ತಿನ ಮೊದಲ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದವರು. ಪಕ್ಕಾ ನಾಸ್ತಿಕವಾದಿ ಗೋರಾ ಹಾಗೂ ಗಾಂಧಿಯ ನಡುವೆ ನಾಸ್ತಿಕತೆ ಮತ್ತು ಆಸ್ತಿಕತೆಗೆ ಕುರಿತಂತೆ ನಡೆದ ಚರ್ಚೆ, ಅದು ಪಡೆದುಕೊಂಡ ಹಲಬಗೆಯ ಆಯಾಮ ಇದರಲ್ಲಿ ದಾಖಲಾಗಿದೆ. ಈ ಕೃತಿ ಮೊದಲಿಗೆ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡು ಆರು ದಶಕಗಳೇ ಸಂದಿವೆ.ಒಬ್ಬ ನಿರೀಶ್ವರವಾದಿ ದೇವರಿಲ್ಲ ಎಂಬುದನ್ನು ತನಗೆ ತಾನೇ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಆದರೆ ಬಾಪುವಿನ ಮುಂದೆ ತನ್ನ ನಾಸ್ತಿಕತೆಯನ್ನು ಗೋರಾ ಸಮರ್ಥಿಸಿಕೊಳ್ಳುವುದಿಲ್ಲ, ಬದಲಾಗಿ ಅದನ್ನು ತಮಗೆ ಕಂಡಂತೆ, ತಮ್ಮ ಅನುಭವದ ಬೆಳಕಿನಲ್ಲಿ ಕಂಡಂತೆ ವಿವರಿಸುತ್ತ ಹೋಗುತ್ತಾರೆ. ಅದರ ಅಗತ್ಯವನ್ನು ಮನದಟ್ಟು ಮಾಡುತ್ತಾ ಹೋಗುತ್ತಾರೆ. ‘ನಾನು ನನ್ನ ಈಶ್ವರವಾದ ಸರಿ, ನಿಮ್ಮ ನಿರೀಶ್ವರವಾದ ತಪ್ಪು ಎಂದು ಹೇಳಲಾರೆ...ನಿಮ್ಮ ವಿಧಾನ ನನಗಿಂತ ಭಿನ್ನವಾಗಿದ್ದರೂ ನಿಮಗೆ ನಾನು ಸಹಾಯ ಮಾಡುತ್ತೇನೆ...’ (ಪು ೫೪) ಎಂದು ಗೋರಾ ಅವರಿಗೆ ಒಮ್ಮೆ ಬಾಪು ಹೇಳುತ್ತಾರೆ. ಇದು ತನ್ನ ಮಾರ್ಗವನ್ನು ಬಿಟ್ಟುಕೊಡದೆ, ಇನ್ನೊಬ್ಬರ ನಂಬಿಕೆ, ವಿಚಾರಗಳನ್ನು ಗೌರವಿಸುವ ಬಾಪು ಅವರ ಸ್ವಭಾವಕ್ಕೆ, ವಿಚಾರಗಳಿಗೆ ಅನುಗುಣವಾಗಿಯೇ ಇದೆ. ಗಾಂಧಿಯವರ ಪತ್ರ, ಅವರೊಂದಿಗಿನ ಸಂವಾದಗಳು ಸೇರಿರುವ ಈ ಪುಸ್ತಕದಲ್ಲಿ ಎರಡೂ ನಂಬಿಕೆಗಳ ಮುಕ್ತವೂ ಅಸೀಮವೂ ಆದ ನಿಷ್ಠೆ ಇದೆ. ಅದು ಎಂದೂ ಮುಗಿಯಲಾರದ್ದು. ಹಾಗಾಗಿ ವೆಂಕಟೇಶ ಮಾಚಕನೂರ ಅವರ ಸರಳ ಅನುವಾದದ ಈ ಪುಸ್ತಕ ಈ ವಿಷಯ ಹಾಗೂ ಗಾಂಧಿ ವಿಚಾರಗಳ ಕುರಿತ ಆಸಕ್ತರನ್ನು ಓದಿಸಿಕೊಳ್ಳುವಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.