ಮಂಗಳವಾರ, ಮೇ 11, 2021
25 °C

ಗಾಂಧಿ ಸ್ಮರಣಿಕೆ; ನಮ್ಮ ದೌರ್ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮ ಗಾಂಧೀಜಿ ಅವರನ್ನು ನೆನಪಿಸುವ ಕೆಲವು ವಸ್ತುಗಳು ಲಂಡನ್‌ನಲ್ಲಿ ಹರಾಜಾಗುತ್ತಿವೆ. ಅದನ್ನು ತಡೆಯಲು ಆಗದೇ ಇರುವುದು ನಮ್ಮ ದೇಶದ ದುರಂತ.

ಗಾಂಧೀಜಿ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಅವರ ಕನ್ನಡಕ ಹಾಗೂ ಚರಕ. ಅವರು ಬಳಸುತ್ತಿದ್ದ ವಸ್ತುಗಳು. ಅವರು ಬರೆದ ಪತ್ರಗಳು ಅವರ ರಕ್ತದ ಕಲೆ ಇತ್ಯಾದಿಗಳು ಈಗ ಹರಾಜಿನಲ್ಲಿ ಬಿಕರಿಯಾಗಿವೆ.ಈ ಅಮೂಲ್ಯ ವಸ್ತುಗಳನ್ನು ಕೇಂದ್ರ ಸರ್ಕಾರ ನಮ್ಮ ದೇಶಕ್ಕೆ ತರಿಸಿಕೊಳ್ಳುವಲ್ಲಿ ಪ್ರಯತ್ನಿಸದೇ ಇರುವುದು ದೇಶದ ದೌರ್ಭಾಗ್ಯ. ವಿಶ್ವ ಮಟ್ಟದ ಭಾರತೀಯ ಶ್ರಿಮಂತರು ಇವನ್ನು ಹರಾಜಿನಲ್ಲಿ ಖರೀದಿಸುವ ಪ್ರಯತ್ನ ಮಾಡಬಹುದಿತ್ತು.ಹಿಂದೆ ಉದ್ಯಮಿ ವಿಜಯ ಮಲ್ಯರು ಟಿಪ್ಪು ಖಡ್ಗ ಖರೀದಿಸಿ ಅದನ್ನು ದೇಶಕ್ಕೆ ನೀಡಿದ್ದರು. ದೇಶದಲ್ಲಿ ಗಾಂಧೀಜಿ ಅವರನ್ನು ಬಂಡವಾಳ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ವಸ್ತುಗಳನ್ನು ಖರೀದಿಸುವ ಒಬ್ಬ ಭಾರತೀಯನು ಇಲ್ಲದಿರುವುದು ದುರಂತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.