ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಡ್ಗೀಳ್‌ ವರದಿ ನಿರಾಕರಣೆ

ಪಶ್ಚಿಮಘಟ್ಟ: ಕಸ್ತೂರಿ ರಂಗನ್‌ ವರದಿಗೆ ಮಣೆ
Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಮಾಧವ ಗಾಡ್ಗೀಳ್‌ ಸಮಿತಿ ವರದಿಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ಸಮಿತಿ ವರದಿಯನ್ನು ಒಪ್ಪಿ ಕೊಳ್ಳುವುದಾಗಿ ಬುಧವಾರ ಹೇಳಿದೆ.

ರಾಷ್ಟ್ರೀಯ ಹಸಿರು ನ್ಯಾಯ ಮಂಡ­ಳಿಯ(ಎನ್‌ಜಿಟಿ)  ಮುಂದೆ ಪರಿಸರ ಮತ್ತು ಅರಣ್ಯ ಸಚಿವಾಲಯ ಸಲ್ಲಿಸಿ­ರುವ ಪ್ರಮಾಣಪತ್ರದಲ್ಲಿ ಕಸ್ತೂರಿ­ರಂಗನ್‌ ಸಮಿತಿಯ ಶಿಫಾರಸುಗಳನ್ನು ಪರಿಗಣಿಸುವುದಾಗಿ ತಿಳಿಸಿದೆ.

ನ್ಯಾಯಮೂರ್ತಿ ಸ್ವತಂತ್ರಕುಮಾರ್‌್ ಅವರ ನೇತೃತ್ವದ ನ್ಯಾಯಮಂಡಳಿ, ಎರಡೂ ಸಮಿತಿಗಳ ವರದಿ  ಕುರಿತು ಅಭಿ­ಪ್ರಾಯ ಸ್ಪಷ್ಟಪಡಿಸುವಂತೆ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ತಿಳಿಸಿತ್ತು. 

ನ್ಯಾಯಮಂಡಳಿಯು, ಗೋವಾ ಪ್ರತಿಷ್ಠಾನ ಮತ್ತು ಪೀಸ್‌ಪುಲ್‌ ಸೊಸೈಟಿ ಎಂಬ ಎರಡು ಸರ್ಕಾರೇತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು.

ಸೆಪ್ಟೆಂಬರ್‌ 9ರಂದು ಈ ಕುರಿತು ಮತ್ತಷ್ಟು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ನ್ಯಾಯಮಂಡಳಿ ಪರಿಸರ ಸಚಿವಾಲಯಕ್ಕೆ ಸೂಚಿಸಿದೆ.
ಮಾಧವ ಗಾಡ್ಗೀಳ್ ಸಮಿತಿಯು 2011 ರ ಆ.31 ರಂದು ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT