ಹೋಬಾರ್ಟ್: ಎಫ್ಐಎಚ್ ಪ್ರೊ ಲೀಗ್ ಋತುವಿನಲ್ಲಿ ಭಾರತ ತಂಡದ ಸೋಲಿನ ಸರಪಳಿ ಕೊನೆಗೂ ಮುರಿಯಿತು. ಹಾರ್ದಿಕ್ ಸಿಂಗ್ ನೇತೃತ್ವದ ತಂಡ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 3–1 ಗೋಲುಗಳಿಂದ ಸೋಲಿಸಿತು. ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು.

ಆಸ್ಟ್ರೇಲಿಯಾ ವಿಶ್ವಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಗೆಲುವು ಭಾರತಕ್ಕೆ ಆತ್ಮವಿಶ್ವಾಸ ಗಳಿಸಲು ನೆರವಾಗಲಿದೆ. ಭಾರತ ಈ ಋತುವಿನಲ್ಲಿ ಈ ಮೊದಲು ಆಡಿದ ಎಲ್ಲಾ ಏಳು ಪಂದ್ಯಗಳನ್ನು ಸೋತಿತ್ತು.

ಬುಧವಾರ ನಡೆದ ಪಂದ್ಯದ ಮೊದಲ ಮೂರು ಕ್ವಾರ್ಟರ್ಗಳಲ್ಲಿ ಎರಡೂ ತಂಡಗಳಿಂದ ಉತ್ತಮ ಪೈಪೋಟಿ ಕಂಡುಬಂದಿತು. ಆದರೆ ಈ ಅವಧಿ ಗೋಲುರಹಿತವಾಯಿತು. 49ನೇ ನಿಮಿಷ ಜೆರೆಮಿ ಹೆವಾರ್ಡ್ ಅವರು ಪೆನಾಲ್ಟಿ ಕಾರ್ನರ್ಅನ್ನು ಗೋಲಾಗಿ ಪರಿವರ್ತಿಸಿ ಆಸ್ಟ್ರೇಲಿಯಾ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಆತಿಥೇಯ ತಂಡದ ಸಂತಸ ಕ್ಷಣಿಕವಾಯಿತು. ಎರಡೇ ನಿಮಿಷಗಳ ನಂತರ ಶಿಲಾನಂದ ಲಾಕ್ರಾ ಫೀಲ್ಡ್ ಗೋಲಿನ ಮೂಲಕ ಭಾರತ ತಂಡ ಸಮಬಲ ಸಾಧಿಸಲು ನೆರವಾದರು.

ಶೂಟೌಟ್ನಲ್ಲಿ ಲಾಕ್ರಾ, ಮಣಿಂದರ್ ಸಿಂಗ್ ಹಾಗೂ ವಿಷ್ಣುಕಾಂತ್ ಸಿಂಗ್ ಅವರು ಚೆಂಡನ್ನು ಗುರಿತಲುಪಿಸಿದರು. ಆಸ್ಟ್ರೇಲಿಯಾ ಪರ ಹೆವಾರ್ಡ್ ಮಾತ್ರ ಚೆಂಡನ್ನು ಗುರಿಮುಟ್ಟಿಸುವಲ್ಲಿ ಯಶಸ್ವಿ ಯಾದರು. ಕನ್ನಡಿಗ ಗೋಲ್ಕೀಪರ್ ಎಚ್. ಶಶಿಕುಮಾರ್ ಮೋಹಿತ್ ಮಹತ್ವದ ಸೇವ್ಗಳೊಂದಿಗೆ ಮಿಂಚಿದರು.

ಭಾರತ ತಂಡವು, ಒಂಬತ್ತು ತಂಡಗಳ ಪ್ರೊ ಲೀಗ್ನಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, ನಾಲ್ಕು ಪಾಯಿಂಟ್ಸ್ ಗಳಿಸಿ ಎಂಟನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.