ಕೊಲಂಬೊ: ವೇಗದ ಬೌಲರ್ ಮ್ಯಾಟ್ ಹೆನ್ರಿ (3ಕ್ಕೆ2) ಆರಂಭದಲ್ಲಿ ಶ್ರೀಲಂಕಾಕ್ಕೆ ಪೆಟ್ಟುಕೊಟ್ಟರೆ, ಎಡಗೈ ಸ್ಪಿನ್ನರ್ ರಚಿನ್ ರವೀಂದ್ರ (27ಕ್ಕೆ4) ಅವರು ಆತಿಥೇಯರ ಕುಸಿತಕ್ಕೆ ಕಾರಣರಾದರು. ಇದರಿಂದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ನ ಸೂಪರ್ ಎಂಟರ ಪಂದ್ಯದಲ್ಲಿ ಬುಧವಾರ 61 ರನ್ಗಳ ಸುಲಭ ಜಯಗಳಿಸಿ ಸೆಮಿಫೈನಲ್ನತ್ತ ಹೆಜ್ಜೆಯಿಟ್ಟಿತು.

ಆತಿಥೇಯ ಶ್ರೀಲಂಕಾಕ್ಕೆ ಇನ್ನೊಂದು ಪಂದ್ಯ ಉಳಿದಿದ್ದರೂ, ಸತತ ಎರಡನೇ ಸೋಲಿನಿಂದಾಗಿ ನಾಲ್ಕರ ಘಟ್ಟದ ರೇಸ್ನಿಂದ ಹೊರಬಿತ್ತು. ನ್ಯೂಜಿಲೆಂಡ್ ತಂಡ ಮೂರು ಪಾಯಿಂಟ್ಸ್ ಗಳಿಸಿದ್ದು, ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಎರಡು ಪಂದ್ಯ ಗೆದ್ದಿರುವ ಇಂಗ್ಲೆಂಡ್ ಈ ಮೊದಲೇ ಸೆಮಿಫೈನಲ್ ತಲುಪಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಗೆಲುವಿಗೆ 169 ರನ್ಗಳ ಸವಾಲಿನ ಗುರಿ ಎದುರಿಸಿದ್ದ ಶ್ರೀಲಂಕಾ ತಂಡ ಉತ್ತಮ ಆರಂಭವನ್ನೇ ಪಡೆಯಲಿಲ್ಲ. ಮ್ಯಾಟ್ ಹೆನ್ರಿ (2–1–3–2), ಇನಿಂಗ್ಸ್ನ ಮೊದಲ ಎಸೆತದಲ್ಲೇ ಪಥುಮ್ ನಿಸಾಂಕ ವಿಕೆಟ್ ಪಡೆದರು. ಎರಡನೇ ಓವರಿನಲ್ಲಿ ಚರಿತ್ ಅಸಲಂಕಾ (5) ಅವರ ವಿಕೆಟ್ ಸಹ ಪಡೆದರು. ಹೀಗಾಗಿ ಲಂಕಾ ತೆವಳುತ್ತಾ ಸಾಗಿತು. ಪವರ್ಪ್ಲೇ ಅವಧಿಯಲ್ಲಿ 2 ವಿಕೆಟ್ಗೆ 20 ರನ್ ಗಳಿಸಿದ್ದ ಆತಿಥೇಯರು ಯಾವ ಹಂತದಲ್ಲೂ ಹೋರಾಟ ತೋರಲಿಲ್ಲ.

ಇದಕ್ಕೆ ಮೊದಲು, ಮಿಚೆಲ್ ಸ್ಯಾಂಟ್ನರ್ (47, 26 ಎ) ಮತ್ತು ಕೋಲ್ ಮೆಕ್ಕೊಂಚಿ (ಅಜೇಯ 31, 23ಎ) ಅವರ ಅಮೋಘ ಪ್ರತಿ ಹೋರಾಟದಿಂದಾಗಿ ನ್ಯೂಜಿಲೆಂಡ್ ತಂಡ 7 ವಿಕೆಟ್ಗೆ 168 ರನ್ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು.

ಒಂದು ಹಂತದಲ್ಲಿ 2 ವಿಕೆಟ್ಗೆ 75 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡವು, ಆಫ್ ಸ್ಪಿನ್ನರ್ ಮಹೀಷ ತೀಕ್ಷಣ (30ಕ್ಕೆ4) ದಾಳಿಗೆ ಸಿಲುಕಿ ಕುಸಿತ ಕಂಡಿತು; 84 ರನ್ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ತೀಕ್ಷಣ (30ಕ್ಕೆ3) ಅವರು ಸತತ ಎಸೆತಗಳಲ್ಲಿ ರಚಿನ್ ರವೀಂದ್ರ (32) ಮತ್ತು ಮಾರ್ಕ್ ಚಾಪ್ಮನ್ ವಿಕೆಟ್ಗಳನ್ನು ಪಡೆದರು. ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಅವರು ಡೇರಿಲ್ ಮಿಚೆಲ್ (3) ವಿಕೆಟ್ ಪಡೆದು ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸಿದ್ದರು.

ಆದರೆ ಅನುಭವಿ ಸ್ಯಾಂಟ್ನರ್ ಜೊತೆಗೂಡಿದ ಮೆಕ್ಕೊಂಚಿ ಅವರು ಏಳನೇ ವಿಕೆಟ್ಗೆ ಕೇವಲ 47 ಎಸೆತಗಳಲ್ಲಿ ಅಮೂಲ್ಯ 87 ರನ್ ಸೇರಿಸಿದ್ದರಿಂದ ನ್ಯೂಜಿಲೆಂಡ್ ಮೇಲುಗೈ ಪಡೆಯಿತು. ಸ್ಯಾಂಟ್ನರ್ ಇನಿಂಗ್ಸ್ನ ಅಂತಿಮ ಎಸೆತದಲ್ಲಿ ಔಟ್ ಆಗುವ ಮೊದಲು ಎರಡು ಬೌಂಡರಿ, ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದರು. ಕೊನೆಯ 24 ಎಸೆತಗಳಲ್ಲಿ 70 ರನ್ಗಳು ಹರಿದುಬಂದವು.

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್: 20 ಓವರುಗಳಲ್ಲಿ 7 ವಿಕೆಟ್ಗೆ 168 (ಫಿನ್ ಅಲೆನ್ 23, ರಚಿನ್ ರವೀಂದ್ರ 32, ಮಿಚೆಲ್ ಸ್ಯಾಂಟ್ನರ್ 47, ಕೋಲ್ ಮೆಕ್ಕೊಂಚಿ 31; ಮಹೀಷ ತೀಕ್ಷಣ 30ಕ್ಕೆ3, ದುಷ್ಮಂತ ಚಮೀರ 38ಕ್ಕೆ3); ಶ್ರೀಲಂಕಾ: 20 ಓವರುಗಳಲ್ಲಿ 8 ವಿಕೆಟ್ಗೆ 107 (ಕಮಿಂದು ಮೆಂಡಿಸ್ 31, ದುನಿತ್ ವೆಲ್ಲಾಳಗೆ 29; ಮ್ಯಾಟ್ ಹೆನ್ರಿ 3ಕ್ಕೆ2, ರಚಿನ್ ರವೀಂದ್ರ 27ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.