ಶುಕ್ರವಾರ, ಮೇ 7, 2021
26 °C

ಗಾಲ್ಫ್: ಅದಿತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಯ್ಡಾ (ಪಿಟಿಐ): ಅದಿತಿ ಅಶೋಕ್ ಇಲ್ಲಿ ನಡೆದ `ಉಷಾ ದೆಹಲಿ ಮಹಿಳೆಯರ ಮತ್ತು ಜೂನಿಯರ್ ಬಾಲಕಿಯರ~ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡರು.ನೋಯ್ಡಾ ಗಾಲ್ಫ್ ಕ್ಲಬ್‌ನಲ್ಲಿ ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಲು ಬೆಂಗಳೂರಿನ ಅದಿತಿ 74 ಅವಕಾಶಗಳನ್ನು ಬಳಸಿಕೊಂಡರು. ಅವರು ಒಟ್ಟು 222 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ಪಡೆದರು.ಗುರ್‌ಬಾನಿ ಸಿಂಗ್ (225) ಎರಡನೇ ಸ್ಥಾನ ಪಡೆದರು. ಮಿಲೀ ಸರೋಹ ಮೂರನೇ ಸ್ಥಾನ ಪಡೆದರೆ, ಗುರ್‌ಸಿಮರ್ ಬದ್ವಾಲ್ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.