ಶನಿವಾರ, ಜನವರಿ 18, 2020
20 °C

ಗಾಲ್ಫ್: ಭಾರತದ ಬಾಲಕ, ಬಾಲಕಿಯರಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್ಫ್: ಭಾರತದ ಬಾಲಕ, ಬಾಲಕಿಯರಿಗೆ ಪ್ರಶಸ್ತಿ

ಕೋಲ್ಕತ್ತಾ(ಪಿಟಿಐ): ಭಾರತದ ಬಾಲಕ ಹಾಗೂ ಬಾಲಕಿಯರ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ಬರೆದಿದೆ.ಭಾನುವಾರ ನಡೆದ ಬಾಲಕಿಯರ ವೈಯಕ್ತಿಕ ವಿಭಾಗದ  ಆಟದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಚೀನಾ ತೈಪೆಯ ಮಿನ್ ಜೂ ಚೆನ್ ವಿರುದ್ಧ ಗೆದ್ದರು.ಬಾಲಕರ ವಿಭಾಗದಲ್ಲಿ ವಿರಾಜ್ ಮಾದಪ್ಪ ಮತ್ತು ಮನು ಗಂದಾಸ್ (586) ಜೋಡಿ ಭಾರತ ‘ಎ’ ತಂಡವನ್ನೂ, ಬಾಲಕಿಯರ ವಿಭಾಗದಲ್ಲಿ ಅದಿತಿ ಅಶೋಕ್ ಮತ್ತು ರಿಧಿಮಾ ದಿಲವಾರಿ (442)ಜೋಡಿ ಭಾರತ ‘ಬಿ’ ತಂಡವನ್ನೂ ಗೆಲುವಿನತ್ತ ಕೊಂಡೊಯ್ದಿತು.

ಪ್ರತಿಕ್ರಿಯಿಸಿ (+)