‘ಬೆಂಗಳೂರು ಬೇಕಿಂಗ್ ಬಡ್ಡೀಸ್’ ತಂಡ ತಯಾರಿಸಿದ ‘ಡರ್ಟ್ ಪಡ್ಡಿಂಗ್ ಕೇಕ್’ ಪ್ರಪಂಚದ ಅತಿ ದೊಡ್ಡ ಕೇಕ್ ಎಂಬ ಅಗ್ಗಳಿಕೆಯೊಂದಿಗೆ ಗಿನ್ನೆಸ್ ದಾಖಲೆ ನಿರ್ಮಿಸಿದೆ.

ಬಾಯಲ್ಲಿ ನೀರೂರಿಸುವ, ಘಮ ಘಮ ಬೃಹತ್ ಕೇಕ್ ತಯಾರಿಕೆಯನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ನೆರೆದಿತ್ತು.

ಈ ಕೇಕ್ ಬರೋಬ್ಬರಿ ಒಂದು ಟನ್ಗೂ ಹೆಚ್ಚು ತೂಕವಿದೆ. ತಯಾರಿಕೆಗೆ 220 ಕೆ.ಜಿ ಕ್ರೀಮ್, 190 ಲೀಟರ್ ವೈಪಿಂಗ್ ಕ್ರೀಮ್, 550 ಕೆ.ಜಿ ಸ್ಯಾಂಡ್ವಿಚ್ ಕುಕೀಸ್, 65 ಕೆ.ಜಿ ಸಕ್ಕರೆ, 180 ಕೆ.ಜಿ ಹಾಲು, 45 ಕೆ.ಜಿ ಕಸ್ಟರ್ಡ್ ಪೌಡರ್, 35ಕೆ.ಜಿ ಕ್ಯಾಂಡಿ, 85 ಕೆ.ಜಿ ಬೆಣ್ಣೆ ಬಳಸಲಾಗಿದೆ. ಅಲಂಕಾರಕ್ಕೆ ಬಳಸಿದ ಗಾರ್ನಿಶ್ 35 ಕೆ.ಜಿ ತೂಗುತ್ತದೆ.

ಬೆಂಗಳೂರಿನ ‘ದಿ ಪಾರ್ಕ್’ ಹೊಟೇಲ್ನಲ್ಲಿ ದನಿಶ್ ಅಲಿ, ಡಾ. ಅರ್ಚನಾ ದಿವಾನ್, ನಿಧಿ, ಪೂನಂ ಅಂಕುರ್, ಶ್ರೀಶ್ರೀಮಲ್ ಅವರ ತಂಡ ಈ ಬೃಹತ್ ಕೇಕ್ ತಯಾರಿಸಿದೆ.

ಜುಲೈ 31 ರ ಶನಿವಾರ ರಾತ್ರಿ 9 ಗಂಟೆಗೆ ಕೇಕ್ ತಯಾರಿ ಆರಂಭವಾಯಿತು. ಕೇಕ್ ಸಿದ್ಧಗೊಂಡಾಗ ಭಾನುವಾರ ಬೆಳಿಗ್ಗೆ 8.15 ಆಗಿತ್ತು. ‘ಸಾಧಿಸಬೇಕೆಂಬ ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಈ ಕೇಕ್ ತಯಾರಿಕೆ ನಮ್ಮ ಗುರಿಯಾಗಿತ್ತು. ಗುರಿ ತಲುಪಿದ್ದೇವೆ. ಬಹಳ ಖುಷಿ ಆಗುತ್ತಿದೆ. ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು’ ಎನ್ನುತ್ತಾರೆ ಪೂನಂ.

‘ಈ ಕೇಕ್ ತಯಾರಿಕೆಗೆ ಸತತ 12 ಗಂಟೆಗಳ ಕಾಲ ಶ್ರಮಿಸಿದ್ದೇವೆ. ದಾಖಲೆ ನಿರ್ಮಿಸಿದ ಖುಷಿಗೆ ಆಯಾಸವೆಲ್ಲ ಮಾಯವಾಗಿದೆ’ ಎನ್ನುತ್ತಾರೆ ನಿಧಿ ಬಗ್ರ.

‘ಇದೊಂದು ಅದ್ಭುತ ದಾಖಲೆ 1000 ಕೆ.ಜಿ ತೂಕದ ಕೇಕ್ ನಿರ್ಮಿಸಲು ಹೊರಟವರು 1078 ಕೆ.ಜಿ. ತೂಕದ ಕೇಕ್ ತಯಾರಿಸಿದ್ದಾರೆ. ಈ ದಾಖಲೆ ಮುರಿಯುವುದು ಅಷ್ಟು ಸುಲಭವಲ್ಲ’ ಎನ್ನುತ್ತಾರೆ ಗಿನ್ನೆಸ್ ದಾಖಲೆಯ ತೀರ್ಪುಗಾರ ರಿಷಿ ನಾಥ್.

ಈ ಬೃಹತ್ ಕೇಕ್ ಅನ್ನು ಅನಾಥ, ವಿಕಲಚೇತನ ಮಕ್ಕಳಿಗೆ ಹಂಚಬೇಕೆಂದು ಬೆಂಗಳೂರು ಬೇಕಿಂಗ್ ಬಡ್ಡೀಸ್ ತಂಡ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.