ಗಿಬ್ಸನ್ಗೆ ತಿರುಗೇಟು
ಢಾಕಾ (ಪಿಟಿಐ): ಕ್ವಾರ್ಟರ್ ಫೈನಲ್ನಲ್ಲಿ ಪಾಕ್ ವಿರುದ್ಧ ಸೋಲು ಅನುಭವಿಸಿದ ವೆಸ್ಟ್ ಇಂಡೀಸ್ ತಂಡದಲ್ಲಿ ಈಗ ಪರಸ್ಪರ ‘ಟೀಕೆ’ ಕೇಳಿಬರುತ್ತಿದೆ.
ಕ್ರಿಸ್ ಗೇಲ್ ಅವರು ತಂಡದ ಕೋಚ್ ಆಟಿಸ್ ಗಿಬ್ಸನ್ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿದ್ದಾರೆ. ತಂಡದ ಸೋಲಿಗೆ ಹಿರಿಯ ಆಟಗಾರರನ್ನು ಟೀಕಿಸುವುದು ಸುಲಭ ಎಂದು ಗೇಲ್ ತಿರುಗೇಟು ನೀಡಿದ್ದಾರೆ.
ಗಿಬ್ಸನ್ ಅವರು, ‘ಸೋಲಿಗೆ ಹಿರಿಯ ಆಟಗಾರರೇ ಕಾರಣ’ ಎಂದಿದ್ದರು. ಇದಕ್ಕೆ ಗೇಲ್ ‘ಸೋಲಿಗೆ ಹಿರಿಯ ಆಟಗಾರರನ್ನು ಟೀಕಿಸುವುದು ಸುಲಭ. ಆದರೆ ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದು ಗೇಲ್ ಪ್ರತ್ಯುತ್ತರ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.