ಸೋಮವಾರಪೇಟೆ: ನಗರದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಗಣಗೂರು ಪಂಚಾಯಿತಿ ವ್ಯಾಪ್ತಿ ಗೊಳಪಟ್ಟ ನಿಡ್ತ ಮೀಸಲು ಅರಣ್ಯದ ಅಂಚಿನಲ್ಲಿರುವ ಬಾಣಾವಾರ ಗಿರಿಜನ ಹಾಡಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನ್ನೊಳಗೊಂಡ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ಅವರ ಸಮಸ್ಯೆ ಹಾಗೂ ದೂರುಗಳ ಪರಾಮರ್ಶೆ ನಡೆಸಿದರು.

ಹಾಡಿಯಲ್ಲಿ 16 ಕುಟುಂಬಗಳು ವಾಸವಿದ್ದು, ಇಂದಿಗೂ ನಾವು ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಪಡೆಯಲು ವಿಫಲರಾಗಿದ್ದೇವೆ. ಅರಣ್ಯ ಹಕ್ಕು ಕಾಯಿದೆ 2006 ರಲ್ಲಿ ಜಾರಿಗೆ ಬಂದರೂ ಇದುವರೆಗೂ ಜಾಗದ ದಾಖಲಾತಿ ದೊರೆತಿಲ್ಲ. ತಕ್ಷಣವೇ ನಮಗೆ ವಾಸದೃಢೀಕರಣ ಮತ್ತು ಚೆಕ್ಕುಬಂದಿ ಒದಗಿಸಿ ಸರ್ಕಾರದ ಬಸವ, ಇಂದಿರಾ ಮತ್ತು ಆಶ್ರಯ ಯೋಜನೆಯಲ್ಲಿ ಸಿಗುವ ಮನೆಯ ಸೌಲಭ್ಯ ಪಡೆಯಲು ಅನುವು ಮಾಡಿ ಕೊಡಬೇಕು ಎಂದು ಹಾಡಿ ನಿವಾಸಿ ಯಾದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಧರ್ಮ ಅವರು ಒತ್ತಾಯಿಸಿದರು.

ಇದೇ ಸಂದರ್ಭ ಜಾಗಕ್ಕೆ ಸಂಬಂಧಿ ಸಿದಂತೆ ಇರುವ ದಾಖಲಾತಿಗಳನ್ನು ನೀಡಿದರು. ಸರ್ವೆ ನಂಬರ್ 20/1ಪಿ1 ರಲ್ಲಿ 10 ಎಕರೆ ಪೈಸಾರಿ ಜಾಗ ಎಂದಿದ್ದರೂ ಅರಣ್ಯ ಇಲಾಖೆ ನಮಗೆ ಜಾಗದ ಹಕ್ಕು ಪಡೆಯಲು ಅಡ್ಡಗಾಲು ಹಾಕುತ್ತಿದೆ ಎಂದು ದೂರಿದರು.

ರವಿಕುಶಾಲಪ್ಪ ಮಾತನಾಡಿ, ತಕ್ಷಣವೇ 16 ಮನೆಗಳಿಗೆ ಹಕ್ಕು ಪತ್ರ ನೀಡಲು ವ್ಯವಸ್ಥೆ ಮಾಡಬೇಕು ಎಂದು ಗಣಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಹಾಡಿಯಲ್ಲಿರುವ 6 ಸೋಲಾರ್ ದೀಪಗಳು ದುಃಸ್ಥಿತಿಯಲ್ಲಿದ್ದು, ಐಟಿಡಿಪಿ ಇಲಾಖೆಗೆ ಇದರ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪಂಚಾ ಯಿತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ವಿನಿಯೋಗಿಸ ಲಾಗಿರುವ ಶೇ. 22.75ರ ನಿಧಿಯಲ್ಲಿ ದುರಸ್ತಿ ಮಾಡಬೇಕು ಎಂದು ಗ್ರಾ.ಪಂ. ಅಧ್ಯಕ್ಷರಿಗೆ ಸೂಚಿಸಿದರು.

ಮೂರು ದಿನಗಳೊಳಗೆ ನೂತನ ಪೈಪ್ಲೈನ್ ಅಳವಡಿಸಿ ಕುಡಿಯುವ ನೀರಿನ ಸಂಪರ್ಕವನ್ನು ಹಾಡಿಯ ಜನರಿಗೆ ಒದಗಿಸಬೇಕು ಎಂದು ಸೂಚನೆ ನೀಡಿದರು. ಹಾಡಿಯ 23 ಮಕ್ಕಳಿಗೆ ಕಾರ್ಡ್ ಸಂಸ್ಥೆಯ ಆಶ್ರಯದಲ್ಲಿ ರಾಜೀವ್ಗಾಂಧಿ ಶಿಶುಪಾಲನಾ ಕೇಂದ್ರ ವನ್ನು ತೆರೆಯಲಾಗಿದ್ದು, ಸದರಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಸೋಮವಾರಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಅಂಗನ ವಾಡಿ ಕೇಂದ್ರ ನಡೆಸುವಂತೆ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ನಿರ್ದೇಶಿಸಿದರು.

ಐಟಿಡಿಪಿ ಇಲಾಖೆ ವತಿಯಿಂದ ಗಿರಿಜನರಿಗೆ ಹಂದಿ ಸಾಕಾಣಿಕೆ ಘಟಕದ ವ್ಯವಸ್ಥೆಯನ್ನು ಕಲ್ಪಿಸಿ ಓರ್ವ ಫಲಾ ನುಭವಿಗೆ ರೂ. 50 ಸಾವಿರ ಸಹಾಯ ಧನ ನೀಡುವಂತೆ ಇಲಾಖಾಧಿಕಾರಿ ಘಂಟಿಯವರಿಗೆ ಸೂಚಿಸಿದರು.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಯೊಂದಿಗೆ ಹಾಡಿಯ ಜಾಗಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆ ನಡೆಸುವ ಕುರಿತು ಜನಪ್ರತಿನಿಧಿಗ ಳೊಂದಿಗೆ ಪಂಚಾಯಿತಿ ಆಡಳಿತ ಮತ್ತು ಆಧಿಕಾರಿಗಳು ಹಾಗೂ ಹಾಡಿಯ ವಾಸಿಗಳೊಂದಿಗೆ ಏಪ್ರಿಲ್ 25 ರಂದು ವಿಶೇಷ ಗ್ರಾಮ ಸಭೆ ನಡೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಪ್ಪ, ಗಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಂಗಾಮಣಿ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕಾನಂದ, ತಾಲ್ಲೂಕು ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ಅಧ್ಯಕ್ಷ ವರದರಾಜ್, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ರೆಹಮಾನ್, ಸೆಸ್ಕ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಪ್ರದೀಪ್, ಜಿಲ್ಲಾ ಗಿರಿಜನ ಸಮಗ್ರ ಯೋಜನೆ ಅಧಿಕಾರಿ ಘಂಟಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.