ಬೆಂಗಳೂರಿಗೆ ಹಸಿರು ಹೊದ್ದ ನಗರ ಎಂಬ ಖ್ಯಾತಿ ಇದೆ. ಆದರೆ ಏರುತ್ತಿರುವ ವಾಹನ ದಟ್ಟಣೆಯಿಂದ ಸ್ವಲ್ಪಮಟ್ಟಿಗೆ ಮಲಿನವಾಗಿರಬಹುದು. ಆದರೆ ಉತ್ತರ ಭಾರತದಂತೆ ಇಲ್ಲಿ `ಮ್ಯೂಸಿಕ್ ಪೊಲ್ಯೂಷನ್~ ಆಗಿಲ್ಲವಂತೆ. ಗಾಯಕರಾದ ಕುಮಾರ್ ಸಾನು ಹಾಗೂ ಅಲ್ಕಾ ಯಾಜ್ಞಿಕ್ ಇಬ್ಬರೂ ಹೀಗೆಂದರು.

ಗೋಲ್ಡನ್ ಗ್ರಾಂಡ್ ಸಂಸ್ಥೆಯು `ಸೇವ್ ಎ ಮದರ್~ ಸಂಸ್ಥೆಯ ಸಹಾಯಾರ್ಥವಾಗಿ 1990ರ ದಶಕದಲ್ಲಿ ಮೋಡಿ ಮಾಡಿದ್ದ ಕುಮಾರ್ ಸಾನು- ಅಲ್ಕಾ ಯಾಜ್ಞಿಕ್ ಅವರ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಅಲ್ಕಾ ಅವರ ಬೆಳ್ಳಗಿನ ಮೊಗದ ಮೇಲಿದ್ದ ಕಣ್ಣುಗಳನ್ನು ಅಗಲವಾದ ಕಡುಗಪ್ಪು ಬಣ್ಣದ ತಂಪು ಕನ್ನಡಕ ಆವರಿಸಿತ್ತು. ಬರುತ್ತಲೇ `ಅಬ್ತಕ್ ಶಾನು ನಹೀ ಆಯೇ?~ ಎಂದು ಆಯೋಜಕರನ್ನು ಪ್ರಶ್ನಿಸಿದರು. `ಬರುತ್ತಿದ್ದಾರೆ~ ಎಂದಷ್ಟೇ ಹೇಳಿ ಆಯೋಜಕರು ಅಲ್ಕಾ ಯಾಜ್ಞಿಕ್ರನ್ನು ವೇದಿಕೆಗೆ ಕರೆತಂದರು.

ಗೋಲ್ಡನ್ ಗೇಟ್ಸ್ ಪ್ರಾಪರ್ಟೀಸ್ ನಡೆಸುತ್ತಿರುವ `ಸೇವ್ ಎ ಮದರ್~ ಕಾರ್ಯಕ್ರಮದಡಿ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಅನುಷ್ಠಾನಕ್ಕೆ ತಂದ ಕಾರ್ಯಕ್ರಮ ಯಶಸ್ವಿಯಾದ ಬೆನ್ನಲ್ಲೇ ಕರ್ನಾಟಕದ ಗದಗದಲ್ಲಿ ಪ್ರಸವ ಸಂದರ್ಭದಲ್ಲಿ ಸಾವಿಗೀಡಾಗುವ ತಾಯಂದಿರನ್ನು ರಕ್ಷಿಸಲು ಸಂಸ್ಥೆ ಟೊಂಕಕಟ್ಟಿ ನಿಂತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು. ಇಂಥ ತಾಯಂದಿರ ಸಹಾಯಾರ್ಥ ಈ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿಯೂ ಅವರು ತಿಳಿಸಿದರು.

ನಂತರ ಅಲ್ಕಾ ಹಾಗೂ ಕುಮಾರ್ ಸಾನು ಅವರ ಮಾತಿನ ಜುಗಲ್ಬಂದಿ ಶುರುವಾಯಿತು.

`ಇಂಥದ್ದೊಂದು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎರಡು ವರ್ಷಗಳ ಹಿಂದೆ ಎ. ಆರ್. ರೆಹಮಾನ್ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದೆ. ಅಂದು ಅವರ ಸಂಗೀತ ಸಂಯೋಜನೆಯ ಕೆಲವು ಗೀತೆಗಳನ್ನು ಮಾತ್ರ ಹಾಡಿದ್ದೆ. ಅದಾದ ನಂತರ ಬೆಂಗಳೂರಿಗೆ ಇದು ನನ್ನ ಎರಡನೇ ಭೇಟಿ. ಆದರೆ ಇಂದು ನಾನು ಸಾನು ಜತೆ ಹಾಡಿದ ನನಗಿಷ್ಟವಾದ ಗೀತೆಗಳನ್ನು ಮತ್ತೆ ಹಾಡಲಿದ್ದೇನೆ~ ಎಂದು ಅಲ್ಕಾ ಹೇಳಿದರು.

ಅಲ್ಕಾ ಮಾತು ಮುಗಿಯುತ್ತಿದ್ದಂತೆ ಮಾತು ಆರಂಭಿಸಿದ ಕುಮಾರ್ ಸಾನು, `ಬೆಂಗಳೂರಿಗೆ ಇದು ನನ್ನ ಮೂರನೇ ಭೇಟಿ. ಪ್ರತಿ ಬಾರಿಯೂ ಇಲ್ಲಿಗೆ ಬರುವ ಮುನ್ನ ನಗರದ ಕುರಿತು ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ. ನನ್ನ ಆ ಪರಿಕಲ್ಪನೆ ಎಂದೂ ಸುಳ್ಳಾಗಿಲ್ಲ. ನಾನಿಷ್ಟಪಡುವ ಕೆಲವೇ ಕೆಲವು ನಗರಗಳಲ್ಲಿ ಇದೂ ಒಂದು~ ಎಂದು ತಮ್ಮ ಸಾಲನ್ನು ಮುಗಿಸಿದರು.

ಬೆಂಗಳೂರಿನಲ್ಲಿ ತಮಗಿಷ್ಟವಾದ ಜಾಗ ಯಾವುದು ಎಂದು ಕೇಳಿದಾಗ, `ಇಲ್ಲಿ ನೋಡಲು ಬಹಳಷ್ಟು ಸ್ಥಳಗಳಿವೆ ಎಂಬುದನ್ನು ಕೇಳಿದ್ದೇನೆ. ಆದರೆ ಈ ಹಿಂದೆ ಬೆಂಗಳೂರಿಗೆ ಬಂದಾಗಲೂ ಸುತ್ತಾಡಲು ಹೆಚ್ಚು ಸಮಯ ಸಿಗಲಿಲ್ಲ. ಈ ಸಲವೂ ಸಮಯವಿಲ್ಲ. ಇಲ್ಲಿಯ ಹವೆ ನನಗೆ ಬಹಳ ಹಿಡಿಸಿತು. ಮುಂದಿನ ಬಾರಿಯಾದರೂ ಒಂದೆರಡು ದಿನ ಬಿಡುವು ಮಾಡುಕೊಂಡು ಬೆಂಗಳೂರನ್ನು ಸುತ್ತಬೇಕೆಂದಿದ್ದೇನೆ~ ಎಂದು ಅಲ್ಕಾ ಮನದ ಬಯಕೆಯನ್ನು ಹಂಚಿಕೊಂಡರು. ಇದೇ ಮಾತನ್ನು ಕುಮಾರ್ ಕೂಡ ಪುನರುಚ್ಚರಿಸಿದರು.

ಬೆಂಗಳೂರಿನ ಶ್ರೋತೃಗಳ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, `ಉತ್ತರ ಭಾರತಕ್ಕೆ ಹೋಲಿಸಿದಲ್ಲಿ ಬೆಂಗಳೂರು ನಮಗಿಷ್ಟವಾಗುವ ಸ್ಥಳ ಇದು. ಇಲ್ಲಿ ಉತ್ತಮ ಶ್ರೋತೃವರ್ಗವಿದೆ. ಏಕೆಂದರೆ ಮುಂಬೈ ಸೇರಿದಂತೆ ಉಳಿದ ಉತ್ತರ ಭಾರತದ ನಗರಗಳು ಈಗ ಐಟಂ ನಂಬರ್ಗಳಲ್ಲಿ ಮುಳುಗಿವೆ. ಬೆಂಗಳೂರು ಮಾತ್ರ ಈಗಲೂ ಮಧುರ ಗೀತೆಗಳನ್ನೇ ಇಷ್ಟಪಡುತ್ತಿದೆ. ಹೀಗಾಗಿ ಗುಣಮಟ್ಟದ ರಸಿಕರು ಇಲ್ಲಿರುವುದು ನಮ್ಮ ಪುಣ್ಯ~ ಎಂದು ಅಲ್ಕಾ ನುಡಿದರು.

ಕುಮಾರ್ ಸಾನು ಮಾತಿಗೆ ಧ್ವನಿಗೂಡಿಸಿದ ಅಲ್ಕಾ, `90ರ ದಶಕದ ಗೀತೆಗಳಿಗೆ ನಮ್ಮ ಶಾರೀರ ಸರಿ ಹೊಂದುತ್ತಿತ್ತು. ಅದು ಯುಗಳ ಗೀತೆಗಳ ಯುಗ. ಒಂದು ಚಿತ್ರದಲ್ಲಿ ಐದು ಯುಗಳ ಗೀತೆಗಳಿದ್ದರೆ ಅದರ ಏತಕಾನತೆಯನ್ನು ಮುರಿಯಲು ಒಂದು ಐಟಂ ಗೀತೆ ಇರುತ್ತಿತ್ತು. ಆದರೆ ಇಂದು ಐದು ಐಟಂ ಗೀತೆಗಳ ಏಕತಾನತೆ ಮುರಿಯಲು ಒಂದು ಮಧುರ ಯುಗಳ ಗೀತೆ ಸೇರಿಸುವ ಕಾಲ ಬಂದಿದೆ~ ಎಂದು ಬೇಸರ ವ್ಯಕ್ತಪಡಿಸಿದರು.
ದಕ್ಷಿಣದತ್ತ ಬರುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ, `ದಕ್ಷಿಣದಲ್ಲಿ ಈಗಾಗಲೇ ನಾನು ಅನೇಕ ಗೀತೆಗಳನ್ನು ಹಾಡಿದ್ದೇನೆ.

ಬರುವ ಅವಕಾಶಗಳನ್ನು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಿದ್ದೇನೆ~ ಎಂದು ಕುಮಾರ್ ಸಾನು ಹೇಳಿದರೆ, `ನಾನಿನ್ನೂ ದಕ್ಷಿಣದಲ್ಲಿ ಯಾವ ಪ್ರಾಜೆಕ್ಟ್ ಅನ್ನೂ ಮಾಡಿಲ್ಲ. ಆದರೆ ಅವಕಾಶಗಳ ಬಾಗಿಲು ತೆರೆದೇ ಇದೆ~ ಎಂದು ಅಲ್ಕಾ ತಿಳಿಸಿದರು.

ತಾವು ಹಾಡಿದ ಕನ್ನಡದ ಯಾವ ಹಾಡು ಇಷ್ಟ ಎಂಬ ಪತ್ರಕರ್ತರ ಪ್ರಶ್ನೆಗೆ `ದೇವರು ವರವನು ಕೊಟ್ರೇ...~ ಹಾಡು ನನಗಿಷ್ಟ ಎಂದು ಕುಮಾರ್ ಮುಖ ಅರಳಿಸಿದರು.

-ಚಿತ್ರಗಳು: ಬಿ. ಕೆ. ಜನಾರ್ದನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.