ಶನಿವಾರ, ಮೇ 8, 2021
17 °C
ಬೈಂದೂರಿನಲ್ಲಿ ಶಿವರಾಜ್‌ಕುಮಾರ್‌, ನಟಿ ಸಂಜನಾ

ಗೀತಾ ರೋಡ್‌ ಶೋ, ಮತ ಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು:  ಮುಖ್ಯಮಂತ್ರಿಯಾಗಿ ಹತ್ತಾರು ಜನ­ಪರ ಕಾರ್ಯ­ಕ್ರಮಗಳ ಮೂಲಕ ರಾಜ್ಯದ ಅಭಿ­ವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿರುವ ಬಂಗಾರಪ್ಪ ಅವರ ಪುತ್ರಿ ಗೀತಾ ಅವರಿಗೆ ತಮ್ಮದೇ ಆದ ರಾಜಕೀಯ ಚಿಂತನೆಗಳಿವೆ. ಅವುಗಳನ್ನು ಮತ್ತು ತಂದೆಯ ಆಶಯಗಳನ್ನು ಈಡೇರಿಸುವ ಉದ್ದೇಶ­ದಿಂದ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಜನಸೇವಾ ಪರ ಚಟುವಟಿಕೆಗಳ ಮೂಲಕ ಅವರು ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಬಯಸಿದ್ದಾರೆ. ಬೈಂದೂರು ಕ್ಷೇತ್ರದ ಜನರು ಅವರನ್ನು ಬೆಂಬಲಿಸಿ, ಅವಕಾಶ ನೀಡಬೇಕು’ ಎಂದು ಖ್ಯಾತ ಚಲನಚಿತ್ರ ನಟ ಶಿವರಾಜಕುಮಾರ್‌ ವಿನಂತಿಸಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪತ್ನಿ ಗೀತಾ ಪರ  ಸೋಮ­ವಾರ ಬೈಂದೂರು ಕ್ಷೇತ್ರದ ಹಲವೆಡೆ ರೋಡ್‌ ಶೋ, ಸಭೆ ಮೂಲಕ ಪ್ರಚಾರ ನಡೆಸಿದ ಅವರು  ಬೈಂದೂರಿನಲ್ಲಿ  ಸೇರಿದ್ದ ಜನರನ್ನು ಉದ್ದೇ­ಶಿಸಿ ಮಾತನಾಡಿದರು.

ಸಿದ್ಧಾಪುರದಿಂದ ಗೀತಾ, ನಟಿ ಸಂಜನಾ ಮತ್ತು ಪಕ್ಷದ ಪ್ರಮುಖರ ಜತೆ ರಾತ್ರಿ 9ರ ಹೊತ್ತಿಗೆ ಬೈಂದೂರು ತಲುಪಿದರು.ಅವರು ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಕುಣಿದಾಡಿ ಸಂತಸಪಟ್ಟರು ಮತ್ತು ಅವರಿಗೆ ಹಸ್ತಲಾಘವ ನೀಡಲು ಮುಗಿ­ಬಿದ್ದರು. ಅವರ ಕೋರಿಕೆಯ ಮೇರೆಗೆ ’ಗಂಧದಗುಡಿ’ ಚಲನಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ...’ ಹಾಡು ಹಾಡಿದರು.ಸಂಜನಾ ಮಾತನಾಡಿ ಗೀತಾ ಅವರನ್ನು ಆಯ್ಕೆಮಾಡಿದರೆ ಮಾಜಿ ಮುಖ್ಯಮಂತ್ರಿಯ ಪುತ್ರಿ, ಕನ್ನಡದ ಮೇರುನಟನ ಸೊಸೆ, ವರನಟನ ಪತ್ನಿಯ ಸೇವೆ ಪಡೆಯುವ ಭಾಗ್ಯ ಮತದಾರರದ್ದಾಗುತ್ತದೆ. ಜನರ ಸೇವೆಯ ಉದ್ದೇಶಕ್ಕಾಗಿ ರಾಜಕೀಯ ಪ್ರವೇಶಿಸಿ­ರುವ ಅವರೆಂದೂ ಜನರನ್ನು ನಿರಾಶೆಗೊಳಿಸರು’ ಎಂದರು.ಗೀತಾ  ಶಿವರಾಜಕುಮಾರ್ ತಮ್ಮನ್ನು ಗೆಲ್ಲಿಸ­ಬೇಕೆಂದು ವಿನಂತಿಸಿದರು. ಜೆಡಿಎಸ್ ಮುಖಂಡರಾದ ಮಧು ಬಂಗಾರಪ್ಪ, ವಿ. ಕೆ. ಮೋಹನ್‌, ದೇವಿ­ಪ್ರಸಾದ ಶೆಟ್ಟಿ, ಗುಲಾಂ ಮಹಮದ್, ರಂಜಿತ್‌­ಕುಮಾರ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಾಲಿನಿ ಶೆಟ್ಟಿ ಕೆಂಚನೂರು, ವೇದಾವತಿ ಹೆಗ್ಡೆ, ಇತರರು ಇದ್ದರು.ಕ್ಷೇತ್ರದ ಒಂದು ತುದಿಯಾದ ಸಿದ್ಧಾಪುರದಲ್ಲಿ ಆರಂಭವಾದ ಪ್ರಚಾರ ಸತ್ರ ವಿವಿಧ ಊರುಗಳ ಮೂಲಕ ಬೈಂದೂರು ತಲುಪಿ, ಅಂತಿಮವಾಗಿ ತಡ­ರಾತ್ರಿ ತಲ್ಲೂರಿನಲ್ಲಿ ಕೊನೆಗೊಂಡಿತು. ಉಪೇಂದ್ರ ಅವರ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳನ್ನು ಅವರ ಗೈರುಹಾಜರಿ ನಿರಾಶೆಗೊಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.