ಶುಕ್ರವಾರ, ಮೇ 7, 2021
21 °C

ಗುಂಡಿಯಲ್ಲಿ ಆಯತಪ್ಪಿ ಬ್ದ್ದಿದು ಬಾಲಕನ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ ನೀರು ತುಂಬಿಕೊಂಡಿದ್ದ ಗುಂಡಿಯಲ್ಲಿ ಆಯತಪ್ಪಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ.ಕೃಷ್ಣಮೂರ್ತಿ ಮತ್ತು ಶಾರದಾ ದಂಪತಿಯ ಏಕೈಕ ಪುತ್ರ ಸಂದೀಪ್ (11) ಮೃತಪಟ್ಟ ಬಾಲಕ.ಕುರುಬರಹಳ್ಳಿಯ ಕೆಂಪೇಗೌಡ ಮೈದಾನದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ಹಲವು ದಿನಗಳ ಹಿಂದೆ ಬೃಹತ್ ಗುಂಡಿಗಳನ್ನು ಅಗೆಯಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆ ಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು.

 

ತನ್ನ ಗೆಳೆಯರೊಂದಿಗೆ ಮೈದಾನದಲ್ಲಿ ಆಟವಾಡಲು ಹೋದ ಬಾಲಕ ಆಯತಪ್ಪಿ ನೀರಿನಲ್ಲಿ ಮುಳುಗಿಹೋದ. ನಂತರ ಸ್ಥಳೀಯರು ಮತ್ತು ಪೊಲೀಸರ ನೆರವಿನೊಂದಿಗೆ ಬಾಲಕನನ್ನು ಮೇಲೆತ್ತಲಾಯಿತು. ಇನ್ನೂ ಉಸಿರಾಡುತ್ತಿದ್ದ ಸಂದೀಪನನ್ನು ಸಮೀಪದ ಪೆನೆಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೆಲ ಹೊತ್ತಿನಲ್ಲಿಯೇ ಬಾಲಕ ಮೃತಪಟ್ಟಿದ್ದನ್ನು ವೈದ್ಯರು ಘೋಷಿಸಿದರು ಎಂದು ಬಸವೇಶ್ವರ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗೀತಾ ಕುಲಕರ್ಣಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.