ಶುಕ್ರವಾರ, ಜನವರಿ 24, 2020
17 °C

ಗುಡಿಸಲುಮುಕ್ತ ಅಜ್ಜನ ಹಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್: ಕೋಳಗುಂದ ಪಂಚಾಯತಿ ವ್ಯಾಪ್ತಿಯ ಕೆ.ಅಜ್ಜನ ಹಟ್ಟಿ ಗ್ರಾಮದಲ್ಲಿ ಸುಮಾರು 40 ಮನೆಗಳಿದ್ದು, ಗುಡಿಸಲು ರಹಿತ ಗ್ರಾಮವಾಗಿ ಪರಿವರ್ತನೆ ಯಾಗಿದೆ. ಗ್ರಾಮದ ಜನ ಸಂಖ್ಯೆ 250 ದಾಟಿದೆ. ಈ ಗ್ರಾಮದೊಳಗೆ ಸಿಮೆಂಟ್ ರಸ್ತೆ, ಬಾಕ್ಸ್ ಚರಂಡಿ ಮಾಡಲಾಗಿದೆ. ಮೂರು  ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕಟ್ಟಡದ ಕಾಮಗಾರಿ ನಡೆಯುತ್ತಿದೆ.ಗ್ರಾಮದ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆರಾಧನಾ ಯೋಜನೆಯಡಿ ಗ್ರಾಮದ           ದೇವಾ ಲಯಗಳ ಜೀರ್ಣೋದ್ಧಾರ ಮಾಡಿಸಲಾಗಿದೆ.ಇಂದಿರಾ  ಆವಾಜ್, ರಾಜೀವ್‌ಗಾಂಧಿ, ಆಶ್ರಯ ಯೋಜನೆಗಳಲ್ಲಿ ಸಾಕಷ್ಟು ಮನೆ ಕಲ್ಪಿಸಲಾಗಿದೆ. ಪ್ರತಿ ಕುಟುಂಬಕ್ಕೂ ಬಗರ್ ಹುಕುಂ ಸಾಗುವಳಿಯಲ್ಲಿ ಒಂದರಿಂದ ಎರಡು ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ.ಒಟ್ಟಾರೆ ಗ್ರಾಮದ ಅಭಿವೃದ್ದಿಗೆ ಸರ್ಕಾರದ ವಿವಿಧ ಇಲಾಖಾ ಯೋಜನೆ ಗಳಿಂದ ಸಾಕಷ್ಟು ಅಭಿವೃದ್ಧಿ           ಕಂಡಿದೆ. ಗ್ರಾಮದಲ್ಲಿ ಶಾಂತ ವಾತಾ ವರಣವಿದ್ದು, ಜನತೆ ಪೋಲೀಸ್ ಠಾಣೆ ಮೆಟ್ಟಿಲೇರಿ ರುವುದೇ ಅಪರೂಪ.

ಗ್ರಾಮದಲ್ಲಿ ಕೇವಲ ನಾಲ್ಕು ಶೌಚಾಲ ಯಗಳಿದ್ದು, ಸಂಪೂರ್ಣ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಗ್ರಾಮಸ್ಥರು ಮನಸ್ಸು ಮಾಡ ಬೇಕಾಗಿದೆ. 

 

 

ಪ್ರತಿಕ್ರಿಯಿಸಿ (+)