ಬುಧವಾರ, ಜನವರಿ 29, 2020
26 °C

ಗುಡ್ಡಗಾಡು ಓಟ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಡಿ. 14 ರಂದು ಬೆಳಿಗ್ಗೆ 8ಕ್ಕೆ ‘48ನೇ ರಾಜ್ಯ ಮಟ್ಟದ ಗುಡ್ಡಗಾಡು ರಸ್ತೆ ಓಟ ಸ್ಪರ್ಧೆ’ ನಡೆಯಲಿದೆ.

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಸಂಘಟಿಸಿರುವ ಈ ಸ್ಪರ್ಧೆಯಲ್ಲಿ 2,500 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.ನೋಂದಣಿಗೆ ಡಿ. 12 ಕಡೆಯ ದಿನಾಂಕ. 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ 3 ಕಿ.ಮೀ., 18 ವರ್ಷದೊಳಗಿನ ಬಾಲ ಕರ ವಿಭಾಗಕ್ಕೆ 6 ಕಿ.ಮೀ., ಬಾಲಕಿಯರ ವಿಭಾಗಕ್ಕೆ 4 ಕಿ.ಮೀ., 20 ವರ್ಷ ದೊಳಗಿನ ಬಾಲಕರ ವಿಭಾಗಕ್ಕೆ 8 ಕಿ.ಮೀ., ಬಾಲಕಿಯರ ವಿಭಾಗಕ್ಕೆ 6 ಕಿ.ಮೀ., 20 ವರ್ಷ ಮೇಲ್ಪಟ್ಟ ಪುರುಷ ರಿಗೆ 12 ಕಿ.ಮೀ., ಮಹಿಳೆಯರಿಗೆ 8 ಕಿ.ಮೀ. ಅಂತರ ನಿಗದಿಗೊಳಿಸಲಾಗಿದೆ.ಮಾಹಿತಿಗೆ ಮೊಬೈಲ್‌: 97318 08008 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)