ಮಾಗಡಿ: ಅಂಗನವಾಡಿ ಮಕ್ಕಳಿಗೆ ಪೌಷ್ಟಿ ಕಾಂಶದ ಹೆಸರಿನಲ್ಲಿ ನೀಡುತ್ತಿರುವ ಆಹಾರ ತೀರಾ ಕಳಪೆ ಗುಣಮಟ್ಟ ದಾಗಿದೆ. ತಕ್ಷಣ ಅಧಿಕಾರಿಗಳು ಕಳಪೆ ಆಹಾರವನ್ನು ಬದಲಿಸಿ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ತಾ.ಪಂ ಅಧ್ಯಕ್ಷ ಜಿ.ಕೃಷ್ಣ ತಾಕೀತು ಮಾಡಿದರು.

ಕಲ್ಯಾ ಬಾಗಿಲು ಬಳಿಯಿರುವ ಮಾಗಡಿ ರಾಮನಗರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರದ ಗೋಡನ್ಗೆ ಭೇಟಿ ನೀಡಿ ಆಹಾ ರದ ಸಿದ್ಧತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪೌಷ್ಟಿಕ ಆಹಾರದ ಹೆಸರಿನಲ್ಲಿ ಮಕ್ಕಳಿಗೆ ಕಲುಷಿತ ಆಹಾರದ ಪದಾರ್ಥಗಳನ್ನು ನೀಡಲಾಗುತ್ತಿದೆ. ಒಣಗಿ ಸದೆ ಹಸಿಯಾಗಿರುವ ಕಳಪೆ ದರ್ಜೆಯಿಂದ ಕೂಡಿರುವ ಕಡಲೆ ಬೀಜ, ಹೆಸರು ಬೇಳೆ, ಕಡಲೆ ಬೇಳೆ, ಗೋಧಿ, ಅಕ್ಕಿಯನ್ನು ಈ ವೇಳೆ ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಳಪೆ ದರ್ಜೆಯ ಆಹಾರ ಪದಾರ್ಥಗಳನ್ನು ನೀಡುತ್ತಿರುವ ಗುತ್ತಿಗೆದಾ ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.

ಮುಗ್ಗಲು ಗೋಧಿಯಲ್ಲಿ ಕಲ್ಲು, ಧೂಳು ತುಂಬಿದೆ. ಕಡಲೆ ಬೀಜ ಮತ್ತು ಕಡಲೆ ಬೇಳೆಯ ಚೀಲಗಳಲ್ಲಿ ಕೊಳೆತ ವಾಸನೆ ಬರುತ್ತಿದೆ. ಹೆಸರು ಬೇಳೆಯ ಜೊತೆಗೆ ಹಳೆಯ ಮತ್ತು ತಿನ್ನಲು ಯೋಗ್ಯವಲ್ಲದ ಹಳೆಯ ಮುಗ್ಗಲು ಹೆಸರು ಬೇಳೆಯನ್ನು ಬೆರೆಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಳೆ ಕತ್ತಲೆ ಕೊಠಡಿಯಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರವನ್ನು ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪೌಷ್ಟಿಕ ಆಹಾರ ವನ್ನು ಕತ್ತಲೆ ಕೋಣೆಯಲ್ಲಿ ಪ್ಯಾಕ್ ಮಾಡುವುದು ಸರಿಯಲ್ಲ.

ಜೊತೆಗೆ ಪೌಷ್ಟಿಕ ಆಹಾರ ತಯಾರಿ ಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೂಕ್ತ ವೇತನ ಇತರೆ ಸವಲತ್ತುಗಳನ್ನು ನೀಡದೆ ವಂಚಿಸ ಲಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷರು ಆರೋಪಿಸಿ ದರು. ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.