ಸೋಮವಾರ, ಜನವರಿ 20, 2020
20 °C

ಗುಣಮಟ್ಟದ ಕಾಫಿ ಉತ್ಪಾದಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಭಾರತದ ಕಾಫಿಗೆ ವಿಶ್ವಮಟ್ಟದಲ್ಲಿ ಭಾರೀ ಬೇಡಿಕೆಯಿದ್ದು, ಈ ದಿೆಯಲ್ಲಿ ಕಾಫಿ  ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದಿಸಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಜಾವೇದ್ ಅಖ್ತರ್ ಹೇಳಿದರು.ಉತ್ತರ ಕೊಡಗಿನ ಏಳನೇ ಹೊಸಕೋಟೆ ಗ್ರಾಮದ ಬಿಂದು ಕಾಫಿ ತೋಟದಲ್ಲಿ ನೆಸ್ಲೆ ಇಂಡಿಯಾ ಕಂಪನಿ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ನೆಸ್ಲೆ ಕಾಫಿ ಕುರಿತ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬೆಳೆಗಾರರು ಉತ್ತಮ ತಂತ್ರಜ್ಞಾನದೊಂದಿಗೆ ಸುಸ್ಥಿರ ಕಾಫಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.ನೆಸ್‌ಕೆಫೆ ಇನ್‌ಸ್ಟಂಟ್ ಕಾಫಿಯ ಉನ್ನತ ಗುಣಮಟ್ಟದ ಬಗ್ಗೆ ಗ್ರಾಹಕರ ದೃಷ್ಟಿಕೋನ ವೃದ್ಧಿಸಲು ಮತ್ತು ಮಾರುಕಟ್ಟೆ ವಿಸ್ತರಿಸುವ ದಿಸೆಯಲ್ಲಿ ನೆಸ್ಲೆ ಕಂಪನಿ ವತಿಯಿಂದ ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ನೆಸ್ಲೆ ಕಾಫಿ ಕಂಪನಿಯ ಅಧ್ಯಕ್ಷ ಆ್ಯಂಟೋನಿ ಹೆಲ್ಲೋ ವಾಸಿಕ್  ಕಾಫಿ ಕೃಷಿಯಲ್ಲಿ ದಕ್ಷತೆ ತರುವ ದಿಸೆಯಲ್ಲಿ ಬೆಳೆಗಾರರು ಕಾರ್ಯೋನ್ಮುಖರಾಗಬೇಕು ಎಂದರು.ಇದೇ ಸಂದರ್ಭದಲ್ಲಿ ನೆಸ್ಲೆ ಕಾಫಿ ಕುರಿತ ಕೈಪಿಡಿ ಬಿಡುಗಡೆಗೊಳಿಸಿದರು. ನೆಸ್ಲೆ ಕಂಪನಿಯ ಉಪಾಧ್ಯಕ್ಷ ಸೌಜಯ್ ಖಜೂಲ, ವಲಯ ನಿರ್ದೇಶಕ ನಂದು ನಂದಕಿಶೋರ್, ಕಾಫಿ ತೋಟದ ಮಾಲೀಕ ಟಿ.ಎನ್.ಮುರಳೀಧರ್ ಇತರರು ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಕಾಫಿ ಬೆಳೆಗಾರರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)