ಸೋಮವಾರ, ಜೂನ್ 21, 2021
27 °C

ಗುಣಮಟ್ಟದ ಕೆಲಸವಾಗದಿದ್ದರೆ ಶಿಸ್ತುಕ್ರಮ: ಸಚಿವರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ’ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿರಬೇಕು. ಗುಣಮಟ್ಟದಲ್ಲಿ ದೋಷಕಂಡು ಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡುರಾವ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಇಲ್ಲಿಯ ಮಾಡೆಲ್ ಹೈಸ್ಕೂಲ್ ಪ್ರಾರ್ಥನಾ ಭವನದಲ್ಲಿ  ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ  2013–-2014ನೇ ಸಾಲಿನ  ಜನವರಿ ಅಂತ್ಯದ ವರೆಗಿನ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.‘ನವಲಗುಂದದಲ್ಲಿ ಐದು ಸಾವಿರ ಪಡಿತರ ಚೀಟಿಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿರುವುದನ್ನು ಕೇಳಿ ಕಕ್ಕಾಬಿಕ್ಕಿ ಯಾದರು. ಈ ರೀತಿಯ ಆಮೆಗತಿಯ ಕೆಲಸವನ್ನು ಸಹಿಸುವು ದಿಲ್ಲ. ಅವಶ್ಯ ಬಿದ್ದರೆ ಇನ್ನೊಂದು ಕಂಪ್ಯೂಟರ್ ಪಡೆದು  ಅರ್ಜಿ ಗಳನ್ನು ತುರ್ತಾಗಿ ಪರಿಶೀಲನೆ ಮಾಡಿ ಒಂದು ವಾರದ ಒಳ ಗಾಗಿ ವಿತರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಶಾಸಕ ಎನ್.ಎಚ್. ಕೋನರಡ್ಡಿ, ಗೋವಿನಜೋಳ ಖರೀದಿ ಕೇಂದ್ರದಲ್ಲಿ ಸುಮಾರು 2 ಲಕ್ಷ ಕ್ವಿಂಟಲ್ ಗೋವಿನಜೋಳ  ಬಯಲಲ್ಲಿಯೇ ಉಳಿದಿದೆ. ಎಲ್ಲಿ ಅಕಾಲಿಕ ಮಳೆ ಬರುತ್ತದೆ ಎಂದು ರೈತರು ಆತಂಕ ಎದುರಿಸುತ್ತಿದ್ದಾರೆ. ಕೂಡಲೇ ಸಾಗಾ ಣೆ  ಮಾಡಲು ವ್ಯವಸ್ಥೆ ಮಾಡುವಂತೆ ಸಚಿವರಿಗೆ  ಮನವಿ ಮಾಡಿದರು.ಈ ಸಮಸ್ಯೆ ಕುರಿತು ಅಧಿಕಾರಿಗಳನ್ನು ವಿಚಾರಿಸಿ,  ಗೋದಾಮುಗಳ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದಾಗ ಕೂಡಲೇ ಹೆಚ್ಚಿನ ಹಣ ತೆತ್ತಾದರೂ ಗೋದಾಮು ಬಾಡಿಗೆಗೆ ಪಡೆದು ತುರ್ತಾಗಿ  ಸಾಗಿಸಬೇಕು ಎಂದು ಸೂಚನೆ ನೀಡಿದರು.  ನವಲಗುಂದ ಬಸ್ ನಿಲ್ದಾಣದ ಶೌಚಾಲಯದ ಒಳಚರಂಡಿ ಸಮಸ್ಯೆ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆ ವಿಳಂಬದ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸಲು ವಿಫಲವಾದದ್ದಕ್ಕೆ ಅಸಮಾ ಧಾನ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಧಿಕಾರಿ ಪಿ.ಎ.ಮೇಘಣ್ಣ ವರ, ಜಿ.ಪಂ.ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಸದಸ್ಯರಾದ ಶಾಂತಾ ನಿಡವಣಿ, ಸುರೇಶ ಗಾಣಿಗೇರ, ಅಡಿವೆಪ್ಪ ಮನಮಿ, ತಾ.ಪಂ.ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಎಸ್‌ಪಿ ಲೋಕೇಶ ಕುಮಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.