ಸೋಮವಾರ, ಮಾರ್ಚ್ 1, 2021
24 °C

ಗುತ್ತಿಗೆ ಕಾರ್ಮಿಕರ ನಿರ್ಲಕ್ಷ್ಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಿಗೆ ಕಾರ್ಮಿಕರ ನಿರ್ಲಕ್ಷ್ಯ ಸಲ್ಲ

ಬೆಂಗಳೂರು: `ದೇಶದಲ್ಲಿರುವ ಬಹುಸಂಖ್ಯೆಯ ಹೊರ ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷಿಸದೇ, ಅವರನ್ನೂ ಕಾಯಂ ಉದ್ಯೋಗಿಗಳಂತೆಯೇ ನಡೆಸಿಕೊಳ್ಳಬೇಕು~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ಮಾಲೀಕರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸೇರಿದಂತೆ ಬ್ಯಾಂಕಿಂಗ್ ಮತ್ತು ಖಾಸಗಿ ಕಂಪೆನಿಗಳ ಹೊರ ಗುತ್ತಿಗೆಯ ಕಾರ್ಮಿಕರನ್ನು ನಿರ್ಲಕ್ಷಿಸಲಾಗುತ್ತಿದೆ. ಉದ್ಯೋಗದಾತರು ತಾವೂ ಬದುಕುವುದರ ಜೊತೆಗೆ ಕಾರ್ಮಿಕರ ಹಿತವನ್ನೂ ಕಾಯುವ ಕೆಲಸವಾಗಬೇಕು. ಕಾರ್ಮಿಕರಿಗೆ ಅನ್ಯಾಯವಾಗುವುದನ್ನು ತಡೆಯಲು ಉದ್ಯೋಗದಾತರು ಮುಂದಾಗಬೇಕು~ ಎಂದು ಅವರು ಹೇಳಿದರು.`ತಮ್ಮ ಕಂಪೆನಿಗಳಲ್ಲಿ ದುಡಿಯುವ ಕಾರ್ಮಿಕರ ಕೆಲಸಕ್ಕೆ ಸಮರ್ಪಕ ವೇತನ ನೀಡಿದರೆ ಸಾಕು, ಕಾರ್ಮಿಕರು ತೃಪ್ತಿಯಿಂದ ಕೆಲಸ ಮಾಡುತ್ತಾರೆ. ಕಾರ್ಮಿಕರಿಗೆ ಸಮರ್ಪಕ ವೇತನ ಸೇರಿದಂತೆ ಕನಿಷ್ಠ ಅಗತ್ಯಗಳನ್ನು ಒದಗಿಸಲು ಉದ್ಯೋಗದಾತರು ಬದ್ಧರಾಗಬೇಕು~ ಎಂದು ಅವರು ನುಡಿದರು.`ಒಂದು ಕಾಲದಲ್ಲಿ ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ದೊಡ್ಡ ಹೆಸರು ಮಾಡಿತ್ತು. ಆದರೆ ಈಗ ಆ ಹೆಸರು ಉಳಿದುಕೊಂಡಿಲ್ಲ. ಕೊರಿಯಾ, ಚೀನಾಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಈ ದೇಶಗಳಿಗೆ ಪೈಪೋಟಿ ನೀಡಲು ಭಾರತದ ಯುವ ಜನತೆಯನ್ನು ಸಿದ್ಧಗೊಳಿಸಬೇಕಿದೆ~ ಎಂದು ಅವರು ತಿಳಿಸಿದರು.ಗೋಕುಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಕರ್ನಾಟಕ ಮಾಲೀಕರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್, ಉಪಾಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.